www.karnatakatv.net :ತುಮಕೂರು : ಕೊರೊನಾ ಮಹಾಮರಿಯ ನಡುವೆಯೂ ಸರ್ಕಾರ ಗಣಪತಿ ಕೂರಿಸಲು ಅನುಮತಿ ನೀಡಿದ್ದು, ತುಮಕೂರಿನ ಗುಬ್ಬಿ ತಾಲೂಕಿನಲ್ಲಿ ಹಲವೆಡೆ ಕೂರಿಸಿದ್ದ ಗಣೇಶನನ್ನ ವಿಶೇಷ ರೀತಿಗಳಲ್ಲಿ ವಿಸರ್ಜನೆ ಮಾಡಲಾಯ್ತು.
ಕೊರೊನಾ ಮಹಾಮಾರಿಯ ನಡುವೆಯೂ ಸರ್ಕಾರ ಒಂದಷ್ಟು ನಿಭಂದನೆಗಳ ನಡುವೆಯೇ ಗಣೇಶಮೂರ್ತಿಯನ್ನ ಕೂರಿಸುವುದು ಹಾಗೂ ವಿಸರ್ಜನೆ ಮಾಡುವಂತಹ ಅವಕಾಶವನ್ನ ನೀಡಿರುವುದರಿಂದ ಪಟ್ಟಣ ಹಳ್ಳಿ ಗ್ರಾಮ ಸೇರಿದಂತೆ ಎಲ್ಲಾ ಭಾಗದಲ್ಲೂ ಕೂಡ ಗಣೇಶ ವಿಗ್ರಹವನ್ನು ಕೂರಿಸಿ 9 ದಿನಗಳ ಒಳಗಾಗಿ ಎಲ್ಲಾ ಭಾಗದಲ್ಲಿಯೂ ಕೂಡ ಕೆರೆಗಳಲ್ಲಿ ವಿಸರ್ಜನೆ ಮಾಡುತ್ತಿರುವುದು ಕಂಡುಬರುತ್ತಿದೆ.
ಗುಬ್ಬಿ ಪಟ್ಟಣ, ನಿಟ್ಟೂರು, ಚೇಳೂರು, ಕಡಬ ಸೇರಿದಂತೆ ಬಹು ಭಾಗದ ಎಲ್ಲಾ ಗ್ರಾಮಗಳಲ್ಲಿಯೂ ಕೂಡ ಗಣೇಶನನ್ನು ಕೂರಿಸುವುದು ಸರ್ವೇಸಾಮಾನ್ಯವಾಗಿದ್ದು, ದೊಡ್ಡ ಮಟ್ಟದ ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯದೆ ಇದ್ದರೂ ಕೂಡ ಸರಳವಾಗಿಯೇ ಗಣೇಶ ವಿಸರ್ಜನಾ ಮಹೋತ್ಸವವು ಎಲ್ಲಾ ಕಡೆ ನಡೆದಿದೆ. ಗುಬ್ಬಿ ತಾಲ್ಲೂಕಿನ ಚೇಳೂರಿನಲ್ಲಿ ಸುಮಾರು ಇಪ್ಪತ್ತು ವರ್ಷದಿಂದ ಗೆಳೆಯರ ಬಳಗ ಸಾಂಸ್ಕೃತಿಕ ಮತ್ತು ಕ್ರೀಡಾ ಸಂಘದ ವತಿಯಿಂದ ಗಣೇಶ ವಿಗ್ರಹವನ್ನು ವಿಸರ್ಜನೆ ಮಾಡಲಾಯಿತು. ಇದೇ ಸಂದರ್ಭದಲ್ಲಿ ಚಂಡಮದ್ದಳೆ ವೀರಗಾಸೆ ಕುಣಿತ ಸೇರಿದಂತೆ ಹಲವು ಜಾನಪದ ಕಾರ್ಯಕ್ರಮಗಳೊಂದಿಗೆ ಗಣೇಶನ ವಿಸರ್ಜನೆಯನ್ನು ಮಾಡಲಾಯಿತು .
ಇನ್ನು ಗುಬ್ಬಿ ಪಟ್ಟಣದ ಶ್ರೀ ಸತ್ಯಗಣಪತಿ ಆಸ್ಥಾನ ಮಂಟಪದಲ್ಲಿ ಕೂರಿಸಿದ್ದ ಗಣೇಶನನ್ನು ವಿಶೇಷವಾಗಿ ಹಣ್ಣಿನ ಅಲಂಕಾರವನ್ನು ಮಾಡಿ ವಿಸರ್ಜನೆ ಮಾಡಲಾಯಿತು. ಇನ್ನು ನಿಟ್ಟೂರಿನಲ್ಲಿ ತೆಪ್ಪೋತ್ಸವದ ಮೂಲಕ ಗಣೇಶನ ವಿಸರ್ಜನೆ ನಡೆಯಿತು.
ದರ್ಶನ್ ಕೆ.ಡಿ.ಆರ್, ಕರ್ನಾಟಕ ಟಿವಿ- ತುಮಕೂರು