ಕುಮಾರಸ್ವಾಮಿ ಬಗ್ಗೆ ನನಗೆ ಯಾವುದೇ ಮುನಿಸಿಲ್ಲ; ಶಾಸಕ ಶ್ರೀನಿವಾಸ್

www.karnatakatv.net : ತುಮಕೂರು: ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಬಗ್ಗೆ ನನಗೆ ಯಾವುದೇ ಮುನಿಸಿಲ್ಲ. ಆದರೆ ಅವರೇ ಅದನ್ನು ಕ್ರಿಯೆಟ್ ಮಾಡಿದ್ದಾರೆ. ಇದರ ಬಗ್ಗೆ ನನಗೇನು ಗೊತ್ತಿಲ್ಲ ಎಂದು ಗುಬ್ಬಿ ಶಾಸಕ ಶ್ರೀನಿವಾಸ್ ಬೇಸರ ವ್ಯಕ್ತಪಡಿಸಿದ್ದಾರೆ.

ಶ್ರೀನಿವಾಸ್ ಗುಬ್ಬಿ ತಾಲ್ಲೂಕಿನ ನಿಟ್ಟೂರು ಹೋಬಳಿಯ ಅರೆ ಮಾರನಹಳ್ಳಿ ಗ್ರಾಮದ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿ, ಪ್ರತಿ ಕ್ಷೇತ್ರದಲ್ಲಿ ಇಬ್ಬರನ್ನು ಇಟ್ಟುಕೊಳ್ಳುವುದು ನಮ್ಮ ನಾಯಕರ ಗುಣ. ನನ್ನ ಮೇಲೆ ಇನ್ನೊಬ್ಬರನ್ನು ತಂದು ಹಾಕುತ್ತಾರೆ ಎಂದರೆ ತಂದು ಹಾಕಲಿ ಸಂತೋಷ ನಾನು ಯಾವತ್ತೂ ಸಹ ಪಕ್ಷವನ್ನ ಬಿಡುತ್ತೇನೆ ಎಂದು ಹೇಳಿಲ್ಲ, ಎಂದು ಬೇಸರ ವ್ಯಕ್ತಪಡಿಸಿದ್ರು.

ಇನ್ನು ಜಿಲ್ಲಾ ಉಸ್ತುವಾರಿ ಸಚಿವರು ಮಠದ ಕೆರೆಯನ್ನು ಎತ್ತಿನಹೊಳೆ ಯೋಜನೆಗೆ ಸೇರಿಸಬೇಕೆಂಬ ಅಭಿಪ್ರಾಯವನ್ನು ಅಧಿಕಾರಿಗಳಿಗೆ ಮುಟ್ಟಿಸಿದ್ದಾರೆ. ಈ ಬಗ್ಗೆ ಗೊಂದಲವಿದೆ ಆದರೂ ಕೂಡ ಮುಖ್ಯಮಂತ್ರಿಗಳಿಗೆ ಇದರ ಬಗ್ಗೆ ಮಾತನಾಡುತ್ತೇನೆ ಎಂದು ತಿಳಿಸಿದರು.  

ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿಯ ಅಧ್ಯಕ್ಷೆ ರೂಪಕಲಾ, ಸದಸ್ಯರಾದ ವೆಂಕಟೇಶ್, ಜಯಮ್ಮ ಚನ್ನಿಗರಾಮಯ್ಯ, ಸೇರಿದಂತೆ ಹಲವರು ಹಾಜರಿದ್ದರು.

ದರ್ಶನ್ ಕೆ.ಡಿ.ಆರ್, ಕರ್ನಾಟಕ ಟಿವಿ- ತುಮಕೂರು

About The Author