1.ರಷ್ಯಾದಲ್ಲಿ ಮತ್ತೊಮ್ಮೆ ಪುಟಿನ್…!?
ರಷ್ಯಾದ ಸಾರ್ವತ್ರಿಕ ಚುನಾವಣೆಯ ಅಂತಿಮ ಹಂತದ ಮತದಾನ ಪ್ರಕ್ರಿಯೆ ನಿನ್ನೆ ಮುಕ್ತಾಯವಾಯ್ತು. ಸದ್ಯ ಎಣಿಕೆ ಕಾರ್ಯ ಶುರುವಾಗಿದ್ದು, ವ್ಲಾದಿಮೀರ್ ಪುಟಿನ್ ನೇತೃತ್ವದ ಯುನೈಟೆಡ್ ರಷ್ಯಾ
ಮುನ್ನಡೆ ಸಾಧಿಸಿದೆ. ದೇಶದ ಒಟ್ಟು 450 ಕ್ಷೇತ್ರಗಳಲ್ಲಿ ಯುನೈಟೆಡ್ ರಷ್ಯಾ 300ಕ್ಕೂ ಹೆಚ್ಚು ಸ್ಥಾನ ಗಿಟ್ಟಿಸಿಕೊಳ್ಳೋ ನಿರೀಕ್ಷೆಯಲ್ಲಿದೆ. ಈ ಮೂಲಕ 1999ರಿಂದ ಅಧಿಕಾರದಲ್ಲಿರೋ ಪುಟಿನ್ ಮತ್ತೊಮ್ಮೆ ರಷ್ಯಾದಲ್ಲಿ ಅಧಿಪತ್ಯ ಸಾಧಿಸೋ ಎಲ್ಲಾ ಲಕ್ಷಣಗಳೂ ಗೋಚರಿಸುತ್ತಿವೆ.
2. ಪಂಚಾಬ್ ಸಿಎಂ ಆಗಿ ಛನ್ನಿ
ಪಂಜಾಬ್ ನ 16ನೇ ಮುಖ್ಯಮಂತ್ರಿಯಾಗಿ ಚರಣ್ ಜಿತ್ ಸಿಂಗ್ ಛನ್ನಿ ಇಂದು ಪ್ರಮಾಣವಚನ ಸ್ವೀಕರಿಸಿದ್ರು. ಈ ಮೂಲಕ ಪಂಜಾಬ್‌ನಲ್ಲಿ ದಲಿತ ಸಮುದಾಯದಿಂದ ಉನ್ನತ ಹುದ್ದೆಗೇರಿದ ಮೊದಲ ವ್ಯಕ್ತಿ ಅನ್ನೋ ಕೀರ್ತಿಗೆ ಛನ್ನಿ ಪಾತ್ರರಾಗಿದ್ದಾರೆ. ಪಂಜಾಬ್ ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ್ ನೂತನ ಸಿಎಂಗೆ ಪ್ರತಿಜ್ಞಾವಿಧಿ ಬೋಧಿಸಿದರು..
3. ‘ಛನ್ನಿ ಆಯ್ಕೆ ಕಾಂಗ್ರೆಸ್ ಚುನಾವಣಾ ತಂತ್ರ’
ಪಂಜಾಬಿನ ಮೊದಲ ದಲಿತ ಮುಖ್ಯಮಂತ್ರಿಯಾಗಿ ಚರಣ್ ಜಿತ್ ಸಿಂಗ್ ಛನ್ನಿ ಇಂದು ಪ್ರಮಾಣವಚನ ಸ್ವೀಕರಿಸಿದ ಬೆನ್ನಲ್ಲೇ ಬಿಎಸ್ಪಿ ಅಧ್ಯಕ್ಷೆ ಮಾಯಾವತಿ ಸೋಮವಾರ ಕಾಂಗ್ರೆಸ್ ನ “ಚುನಾವಣಾ ತಂತ್ರ” ದ ಬಗ್ಗೆ ದಲಿತರು ಎಚ್ಚರದಿಂದರಬೇಕು ಅಂತ ಹೇಳಿದ್ದಾರೆ. ಪಂಜಾಬ್‌ನಲ್ಲಿ ವಿಧಾನಸಭೆ ಚುನಾವಣೆ ದಲಿತರಲ್ಲದ ನಾಯಕನ ನೇತೃತ್ವ ದಲ್ಲಿ ನಡೆಯುತ್ತದೆ. ಛನ್ನಿ ನೇತೃತ್ವದಲ್ಲಿ ಅಲ್ಲ ಎಂದು ತಿಳಿದುಬಂದಿದೆ. ರಾಜಕೀಯ ಪಕ್ಷಗಳು ಬಿಕ್ಕಟ್ಟಿನ ಸಮಯದಲ್ಲಿ ಮಾತ್ರ ದಲಿತರ ಬಗ್ಗೆ ಯೋಚಿಸುತ್ತವೆ, ಛನ್ನಿಯನ್ನು ಮುಖ್ಯಮಂತ್ರಿ ಮಾಡಿರೋದು ಕಾಂಗ್ರೆಸ್ ಚುನಾವಣಾ ತಂತ್ರ ಅಂತ ಮಾಯಾವತಿ ಟೀಕಿಸಿದ್ದಾರೆ.
4. ವ್ಯಕ್ತಿಗೆ ಮಸಿ ಬಳಿದ ಶಿವಸೇನೆ ಕಾರ್ಯಕರ್ತರು
ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ, ಬಾಳಾಸಾಹೇಬ್ ಠಾಕ್ರೆ ಮತ್ತು NCP ಮುಖ್ಯಸ್ಥ ಶರದ್ ಪವಾರ್ ವಿರುದ್ಧ ಸೋಶಿಯಲ್ ಮೀಡಿಯಾದಲ್ಲಿ ಅವಹೇಳನಕಾರಿ ಪೋಸ್ಟ್ ಮಾಡಿದ್ದ ವ್ಯಕ್ತಿಗೆ ಶಿವಸೇನೆ ಕಾರ್ಯಕರ್ತರು ಮಸಿ ಬಳಿದಿದ್ದಾರೆ. ಕಳೆದ ಮೇ ತಿಂಗಳಿನಲ್ಲಿ ಬಂಧಿತ ಅಭಿಜೀತ್ ಲಿಮಾಯೆ ಶಿವಸೇನೆ ಮತ್ತು ಎನ್ ಸಿಪಿ ವಿರುದ್ಧ ಆಕ್ಷೇಪಾರ್ಹ ಪೋಸ್ಟ್ ಮಾಡಿದ್ದ. ಈ ಹಿನ್ನೆಲೆಯಲ್ಲಿ ಶಿವಸೇನೆ ಕಾರ್ಯಕರ್ತರು ಆತನ ಮುಖಕ್ಕೆ ಮಸಿ ಬಳಿದು ಆಕ್ರೋಶ ವ್ಯಕ್ತಪಡಿಸಿದ್ರು.
5. ಗಣೇಶ ವಿಸರ್ಜನೆ ವೇಳ ಮೂವರು ಸಮುದ್ರಪಾಲು
ಗಣೇಶ ವಿಸರ್ಜನೆ ವೇಳೆ ಸಮುದ್ರದಲ್ಲಿ ಮಳುಗಿದ್ದ ಯುವಕರ ಮೃತದೇಹ ಇಂದು ಪತ್ತೆಯಾಗಿದೆ. ಮುಂಬೈನ ವರ್ಸೋವಾ ಬೀಚ್ ನಲ್ಲಿ ನಿನ್ನೆ ರಾತ್ರಿ ಸಾರ್ವಜನಿಕ ಗಣೇಶೋತ್ಸವದ ಮೂರ್ತಿ ವಿಸರ್ಜನೆಗಾಗಿ ಬಂದಿದ್ದ ಯುವಕರ ಪೈಕಿ ಐವರು ನೀರುಪಾಲಾಗಿದ್ರು. ತಕ್ಷಣವೆ ಎಚ್ಚೆತ್ತ ಭದ್ರತಾ ಸಿಬ್ಬಂದಿ ಇಬ್ಬರ ರಕ್ಷಣೆ ಮಾಡಿದ್ರು. ಇನ್ನುಳಿದ ಮೂವರಿಗಾಗಿ ತೀವ್ರ ಶೋಧ ನಡೆಸಲಾಗಿತ್ತು.ಆದ್ರೆ ಇಂದು ಮುಂಜಾನೆ ಮೂವರು ಯುವಕರ ಮೃತದೇಹ ಪತ್ತೆಯಾಗಿವೆ.
6. ಮೋದಿ ಅಮೆರಿಕಾ ಪ್ರವಾಸ..!
ಪ್ರಧಾನಿ ನರೇಂದ್ರ ಮೋದಿ ಸೆ.22ರಂದು ಅಮೆರಿಕಾ ಪ್ರವಾಸ ಕೈಗೊಂಡು ಉನ್ನತ ಮಟ್ಟದ ಸಭೆಗಳನ್ನು ನಡೆಸಲಿದ್ದಾರೆ. ಸೆ. 22 ರಂದು ವಾಷಿಂಗ್ಟನ್ ಡಿಸಿಗೆ ತೆರಳಲಿದ್ದು.23ರ ಬೆಳಿಗ್ಗೆ ಅಮೆರಿಕದ ಉನ್ನತ ಸಂಸ್ಥೆಗಳ ಸಿಇಒಗಳನ್ನು ಭೇಟಿಯಾಗಲಿದ್ದಾರೆ ಅಂತ ತಿಳಿದುಬಂದಿದೆ. ಅಲ್ಲದೆ ಅಮೆರಿಕಾ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರನ್ನು ಮೋದಿ ಭೇಟಿಯಾಗೋ ನಿರೀಕ್ಷೆಯಿದೆ.
7. ಸಿರಿಧಾನ್ಯಕ್ಕ ವಿಶ್ವಸಂಸ್ಥೆ ಮನ್ನಣೆ..!
2023ರನ್ನು ಅಂತಾರಾಷ್ಟ್ರೀಯ ಸಿರಿಧಾನ್ಯಗಳ ದಿನಾಚರಣೆಯನ್ನಾಗಿ ಆಚರಿಸಬೇಕು ಅಂತ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ವಿಶ್ವ ಸಂಸ್ಥೆಯ ಜಿ-20 ಕೃಷಿ ಸಭೆಯಲ್ಲಿ ಪ್ರಸ್ತಾವನೆ ಸಲ್ಲಿಸಿದ್ರು. ಇದಕ್ಕೆ ವಿಶ್ವ ಸಂಸ್ಥೆಯೂ ಕೂಡ ಸಮ್ಮತಿ ಸೂಚಿಸಿದ್ದೂ ಈ ಮೂಲಕ ಸಿರಿಧಾನ್ಯಗಳ ಮಹತ್ವವನ್ನು ವಿಶ್ವಕ್ಕೆ ತಿಳಿಸಿಕೊಡಲು ಹೊರಟಿದೆ. ಭಾರತದ ಸಾಂಪ್ರದಾಯಿಕ ಆಹಾರವಾದ ಸಿರಿಧಾನ್ಯಗಳು, ಧಾನ್ಯಗಳು, ಹಣ್ಣು, ತರಕಾರಿ, ಮೀನು, ಹಾಲು ಮತ್ತು ಸಾವಯವ ಉತ್ಪನ್ನಗಳನ್ನು ಜನರು ಹೆಚ್ಚು ಹೆಚ್ಚು ಬಳಕೆ ಮಾಡುವಂತೆ ಕೇಂದ್ರ ಸರ್ಕಾರ ಈ ಮೂಲಕ ಕರೆ ನೀಡುತ್ತಿದೆ.
8. ರಾಯಚೂರಲ್ಲಿ ಡೆಂಗ್ಯೂ ಹಾವಳಿ..!
ಕರೋನ ಮೂರನೇ ಅಲೆ ಭೀತಿಯ ಬೆನ್ನಲ್ಲೇ ರಾಯಚೂರು ಜಿಲ್ಲೆಯಲ್ಲಿ ಮಕ್ಕಳಿಗೆ ಕೆಮ್ಮು ನೆಗಡಿ ಜ್ವರ ಹಾಗೂ ಡೆಂಗೂನಂತಹ ರೋಗಗಳ ಭೀತಿ ಎದುರಾಗಿದೆ. ಜಿಲ್ಲೆಯಾದ್ಯಂತ 18 ವರ್ಷದೊಳಗಿನ ಮಕ್ಕಳಲ್ಲಿ ಉಸಿರಾಟದ ತೊಂದರೆ, ಜ್ವರ , ತಲೆನೋವು, ಹಾಗೂ ನೆಗಡಿಯಂತಹ ಲಕ್ಷಣಗಳು ಕಾಣಿಸಿಕೊಂಡು ರಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ಈ ಪೈಕಿ ಇಬ್ಬರು ಮಕ್ಕಳು ಸಾವನ್ನಪ್ಪಿರೋದು ಪೋಷಕರಲ್ಲಿ ಆತಂಕ ಹೆಚ್ಚಿಸಿದೆ.
9. ರಾಜ್ಯಸಭೆ ಸೀಟ್ ತಿರಸ್ಕರಿಸಿದ್ದ ‘ರಿಯಲ್ ಹೀರೋ’
ಐಟಿ ದಾಳಿ ಕುರಿತಾಗಿ ನಟ ಸೋನು ಸೂದ್ ಪ್ರತಿಕ್ರಿಯಿಸಿದ್ದು, ಅಧಿಕಾರಿಗಳು ಕೇಳಿದ ಎಲ್ಲಾ ದಾಖಲೆಗಳನ್ನು ನೀಡಿದ್ದೇನೆ. ಅವರೆಲ್ಲಾ ಪ್ರಶ್ನೆಗಳಿಗೂ ಉತ್ತರಿಸಿದ್ದೇನೆ. ನಾನು ಪ್ರತಿಯೊಂದು ರೂಪಾಯಿಗೂ ಲೆಕ್ಕ ಕೊಡ್ತೇನೆ ಅಂತ ಹೇಳಿದ್ದಾರೆ. ಇನ್ನು ರಾಜಕೀಯ ಎಂಟ್ರಿ ಕುರಿತಾಗಿ ಮಾತನಾಡಿದ ಸೋನು, ರಾಜಕೀಯದಲ್ಲಿ ನನಗೆ ಆಸಕ್ತಿ ಇಲ್ಲ ಈ ಹಿಂದೆ ಎರಡು ಪಕ್ಷಗಳು ಆಫರ್ ಮಾಡಿದ್ದ ರಾಜ್ಯಸಭೆಯ ಸೀಟನ್ನೂ ತಿರಸ್ಕರಿಸಿದ್ದೇನೆ ಎಂದಿದ್ದಾರೆ.
10. ಐಪಿಎಲ್ ಗೆ ತಾಲಿಬಾನ್ ನಿಷೇಧ
ಅಫ್ಘಾನಿಸ್ತಾನದಲ್ಲಿ ಆಡಳಿತ ನಡೆಸ್ತಿರೋ ತಾಲಿಬಾನಿಗಳು ಇದೀಗ ಐಪಿಎಲ್ ಗೆ ನಿಷೇಧಹೇರಿದ್ದಾರೆ. ಕೆಲದಿನಗಳ ಹಿಂದೆ ಮಹಿಳಾ ಕ್ರಿಕೆಟ್ ನಿಷೇಧಿಸಿದ್ದ ತಾಲಿಬಾನ್ ಈ ಬಾರಿ ಆಫ್ಘಾನಿಸ್ತಾನದಲ್ಲಿ ಐಪಿಎಲ್ ಪ್ರಸಾರ ಮಾಡಬಾರದು ಅಂತ ಆದೇಶ ಹೊರಡಿಸಿದೆ. ಐಪಿಎಲ್ ಇಸ್ಲಾಂ ವಿರೋಧಿಯಾಗಿದೆ. ಟೂರ್ನಿ ವೇಳೆ ಮಹಿಳೆಯರು ತುಂಡುಬಟ್ಟೆ ತೊಟ್ಟು ನೃತ್ಯ ಮಾಡ್ತಾರಾ ಅಲ್ಲದೆ ಐಪಿಎಲ್ ನಲ್ಲಿ ಮಹಿಳೆಯರು ಕಾಣಿಸಿಕೊಳ್ಳೋದು ಇಸ್ಲಾಂ ವಿರುದ್ಧವಾಗಿದೆ ಅಂತ ತಾಲಿಬಾನ್ ಸಮರ್ಥನೆ ನೀಡಿದೆ.