Wednesday, October 15, 2025

Latest Posts

ವಿಶೇಷ ಚೇತನರಿಗೆ ಆಹಾರ ಕಿಟ್ ವಿತರಣೆ..!

- Advertisement -

www.karnatakatv.net :ತುಮಕೂರು : ದೇಶದ ಅಭಿವೃದ್ಧಿಯ ಬಗ್ಗೆ  ಚಿಂತನೆ, ಯೋಚನೆ ಮಾಡುವ  ಪಕ್ಷ  ಅಂತ  ಇದ್ದರೆ ಆದು  ಬಿಜೆಪಿ ಪಕ್ಷ  ಮಾತ್ರ ಎಂದು ರಾಜ್ಯ  ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಡಾ.ಸಂದೀಪ್  ತಿಳಿಸಿದರು.

ಗುಬ್ಬಿ ಪಟ್ಟಣದ  ಬಿಜೆಪಿ ಕಚೇರಿಯಲ್ಲಿ ಪ್ರಧಾನಿ ಮೋದಿಯವರ  ಹುಟ್ಟು ಹಬ್ಬದ  ಹಿನ್ನಲೆಯಲ್ಲಿ ವಿಶೇಷ  ಚೇತನರಿಗೆ ಆಹಾರದ ಕಿಟ್ ಗಳನ್ನು ವಿತರಿಸಲಾಯ್ತು. ಈ ಸಂಧರ್ಬದಲ್ಲಿ ರಾಜ್ಯ ಬಿಜೆಪಿ ಯುವ ಮೋರ್ಚ ಅಧ್ಯಕ್ಷ ಸಂದೀಪ್ ಮಾತನಾಡಿ, ಯುವಕರು ಈ ದೇಶದ ಶಕ್ತಿ ಎಂಬುದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕಾಗಿದೆ ನಾಡು, ನುಡಿ, ಸಂಸ್ಕೃತಿ, ಸಂಸ್ಕಾರ ದೇಶದ ಅಭಿವೃದ್ಧಿಯ ಬಗ್ಗೆ ಚಿಂತನೆಯನ್ನೂ ಮಾಡುವಂತಹ ಯೋಚನೆಯನ್ನು  ಪ್ರತಿಯೊಬ್ಬರೂ ಮಾಡಬೇಕಾಗಿದೆ ಪಕ್ಷದ ಸಂಘಟನೆಯ ವಿಚಾರದಲ್ಲಿ ಎಲ್ಲರೂ ಒಗ್ಗೂಡಿ ಕೆಲಸ ಮಾಡಬೇಕು ಎಂದರು.

ಗುಬ್ಬಿಯಲ್ಲಿ ವಿಶೇಷಚೇತನರಿಗೆ ಆರ್ಥಿಕವಾಗಿ ಹಿಂದುಳಿದವರಿಗೆ ಆಹಾರದ ಕಿಟ್ ಗಳನ್ನು ನೀಡುವ ಮೂಲಕ ಅವರ ಹುಟ್ಟುಹಬ್ಬವನ್ನು ಆಚರಣೆ ಮಾಡುತ್ತಿರುವುದು ಬಹಳ ವಿಶೇಷವಾಗಿತ್ತು.  ಗುಬ್ಬಿ ಯುವ ಮೋರ್ಚಾ ಅಧ್ಯಕ್ಷ ಭರತ್ ಮಾತನಾಡಿ, ಯುವಮೋರ್ಚಾದ ಅಡಿಯಲ್ಲಿ ಪ್ರಧಾನಿ ಮೋದಿಯವರ ಹುಟ್ಟುಹಬ್ಬವನ್ನು ಬಹಳ ವಿಶೇಷವಾಗಿ ಆಚರಣೆ ಮಾಡಲಾಗುತ್ತಿದೆ ಎಂದರು. ಗುಬ್ಬಿ ಮಂಡಲ ಅಧ್ಯಕ್ಷ ಪಂಚಾಕ್ಷರಿ ಮಾತನಾಡಿ, ಬಿಜೆಪಿ ಪಕ್ಷದಲ್ಲಿ  ಹಲವು ರೀತಿಯ ವಿಭಾಗಗಳನ್ನು ಮಾಡಿದ್ದು ಅದರಲ್ಲಿ ಬಹಳ ಮುಖ್ಯವಾಗಿ ಯುವಕರನ್ನು ಸ್ಫೂರ್ತಿಗೊಳಿಸುವ ಸಂಘಟನೆ ಮಾಡುವಂತಹ ಕೆಲಸ ವಾಗುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ರಾಜ್ಯ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ  ಮಲ್ಲಿಕಾರ್ಜುನ ಬಾಳೆಕಾಯಿ, ಸೇರಿದಂತೆ ಬಿಜೆಪಿ ಕಾರ್ಯಕರ್ತರು ಭಾಗವಹಿಸಿದ್ದರು.

ದರ್ಶನ್ ಕೆ.ಡಿ.ಆರ್, ಕರ್ನಾಟಕ ಟಿವಿ –  ತುಮಕೂರು

- Advertisement -

Latest Posts

Don't Miss