Friday, July 11, 2025

Latest Posts

ಈ ದಿನದ ಪ್ರಮುಖ ಸುದ್ದಿಗಳು..!

- Advertisement -

1.ಫ್ರಾನ್ಸ್ ಅಧ್ಯಕ್ಷನ ಮೇಲೆ ಮೊಟ್ಟೆ ಎಸೆತ…!

ಫ್ರಾನ್ಸ್ ನ ಲಿಯಾನ್ ನಲ್ಲಿ ಆಯೋಜಿಸಲಾಗಿದ್ದ ಅಂತಾರಾಷ್ಟ್ರೀಯ ಆಹಾರ ಮೇಳಕ್ಕೆ ತೆರಳಿದ್ದ ವೇಳೆ ಮ್ಯಾಕ್ರನ್ ಗುರಿಯಾಗಿರಿಸಿಕೊಂಡು  ಹಿಂದಿನಿಂದ ಒಂದು ಮೊಟ್ಟೆಯನ್ನು ಎಸೆಯಲಾಗಿದೆ. ಇನ್ನು ಅದೃಷ್ಟವಶಾತ್ ಮೊಟ್ಟೆ ಮ್ಯಾಕ್ರನ್ ಬೆನ್ನಿಗೆ ತಗುಲಿದೆ. ಅಷ್ಟೇ ಅಲ್ಲ ಆ ಮೊಟ್ಟೆ ಒಡೆಯದೆ ವಾಪಸ್ ಹಿಂದಕ್ಕೆ ಪುಟಿದಿದೆ. ಇನ್ನು ಮೊಟ್ಟೆ ಎಸೆದ ಕೂಡಲೇ ಸೆಕ್ಯೂರಿಟಿ ಗಾರ್ಡ್ ಗಳು ಇಮ್ಯಾನುವೆಲ್ ಮೆಕ್ರಾನ್ ರನ್ನು ಪಕ್ಕಕ್ಕೆ ಎಳೆದುಕೊಂಡ್ರು.

2. ಪುರುಷರು ಗಡ್ಡ ತೆಗೆಯೋದಕ್ಕೆ ನಿಷೇಧ ಹೇರಿದ ತಾಲಿಬಾನ್

ಅಫ್ಘಾನಿಸ್ತಾನದಲ್ಲಿ ದಮನಕಾರಿ ನೀತಿ ಅನುಸರಿಸುತ್ತಿರೋ ತಾಲಿಬಾನಿಗಳು ಸದ್ಯ ಪುರುಷರಿಗೆ ಪ್ರತ್ಯೇಕ ಕಾನೂನು ಜಾರಿಗೊಳಿಸಿದೆ.  ಆಧುನಿಕ ಕೇಶ ವಿನ್ಯಾಸ, ಶೇವ್ ಅಥವಾ ಟ್ರಿಮ್ ಮಾಡಲೇಬಾರದು ಅಂತ ಪುರುಷರಿಗೆ ಸೂಚನೆ ನೀಡಿದೆ. ಇನ್ನು ಕಟಿಂಗ್ ಶಾಪ್ ಗಳಲ್ಲಿ ಯಾವುದೇ ಮ್ಯೂಸಿಕ್ ಆಗಲಿ ಶ್ಲೋಕಗಳನ್ನಾಗಲಿ ಹಾಕುವಂತಿಲ್ಲ ಅಂತ ಆದೇಶಿಸಿದೆ.

3. ಪ್ಯಾರಾ ಮೋಟರಿಂಗ್ ನಿಂದ ನೆರವು

ಥಾಯ್ಲೆಂಡ್ ನ ಪ್ರವಾಹ ಪೀಡಿತ ಪ್ರದೇಶಗಳಿಗೆ ಪ್ಯಾರಾ ಮೋಟರಿಂಗ್ ಮೂಲಕ ತುರ್ತು ಆಹಾರ ಸಾಮಾಗ್ರಿಗಳನ್ನು ಒದಗಿಸಲು ವ್ಯಕ್ತಿಯೊಬ್ಬರು ಮುಂದಾಗಿದ್ದಾರೆ. ಇಲ್ಲಿನ ಪ್ರವಾಹ ಪೀಡಿತ ಪ್ರದೇಶವಾದ ಸುಖ್ಥಾಯ್ ಸೇರಿದಂತೆ ಒಟ್ಟು 30 ಪ್ರದೇಶಗಳಲ್ಲಿ ಪ್ರವಾಹಕ್ಕೆ ಸಿಲುಕಿರುವ ಮಂದಿಗೆ ಕಳೆದೊಂದು ವಾರದಿಂದ ಸಾಹಸಿ 38 ವರ್ಷದ ವಿಚೈ ಥೈಸನ್ ಆಹಾರ ಸಾಮಾಗ್ರಿಗಳನ್ನು ಪ್ಯಾರಾ ಮೋಟರಿಂಗ್ ಮೂಲಕ ಒದಗಿಸುತ್ತಿದ್ದಾನೆ.

4. ಅಪೌಷ್ಟಿಕತೆ ನಿವಾರಿಸಲು 35 ಬೆಳೆ ತಳಿಗಳ ಬಿಡುಗಡೆ…!

ಹವಾಮಾನ ಬದಲಾವಣೆ ಮತ್ತು ಅಪೌಷ್ಟಿಕತೆಯ ಸಮಸ್ಯೆ ಎದುರಿಸಲು ಭಾರತೀಯ ಕೃಷಿ ಸಂಶೋಧನಾ  ಮಂಡಳಿ ಅತ್ಯಧಿಕ ಪೋಷಕಾಂಶಗಳುಳ್ಳ 35 ವಿಶೇಷ ಬೆಳೆ ತಳಿಗಳನ್ನು ಪ್ರಧಾನಿ ನರೇಂದ್ರ ಮೋದಿ ಈ ಎಲ್ಲಾ ಬೆಳೆಗಳನ್ನು ಬಿಡುಗಡೆಗೊಳಿಸಿದ್ರು. .ಈ ಸಾಲಿನಲ್ಲಿ ಈ ವಿಶೇಷ ಬೆಳೆ ತಳಿಗಳನ್ನು ತಜ್ಞರು ಅಭಿವೃದ್ಧಿಪಡಿಸಿದ್ದು ಇವು ಬರಗಾಲದ ಸಹಿಷ್ಣು ಮಾದರಿಯ ತಳಿಗಳಾಗಿವೆ. ಅತಿ ಕಡಿಮೆ ನೀರಿನಲ್ಲೇ ಬೆಳೆಯಲು ಯೋಗ್ಯವಾಗಿರೋ ಈ ಎಲ್ಲಾ ವಿಶೇಷ ತಳಿಯ ಬೆಳೆಗಳು ಹವಾಮಾನ ವೈಪರಿತ್ಯದಿಂದ ನಷ್ಟದ ಭೀತಿ ಎದುರಿಸೋ ರೈತರಿಗೂ ಉತ್ತಮ ಲಾಭ ತಂದುಕೊಡುತ್ತೆ ಅಂತ ತಜ್ಞರು ತಿಳಿಸಿದ್ದಾರೆ. ಇನ್ನು ಇಂದು

5. ಕಾಂಗ್ರೆಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸಿಧು ರಾಜಿನಾಮೆ …!

ಪಂಜಾಬ್ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ನವಜೋತ್ ಸಿಂಗ್ ಸಿಂಧು ದಿಢೀರ್ ರಾಜಿನಾಮೆ ನೀಡಿದ್ದಾರೆ. ರಾಜಿ ಮಾಡಿಕೊಳ್ಳೋದ್ರಿಂದ ವ್ಯಕ್ತಿತ್ವವೇ ಕುಸಿಯುತ್ತೆ. ಹೀಗಾಗಿ ನಾನು ಈ ರೀತಿ ರಾಜಿಗೆ ಎಂದಿಗೂ ಸಿದ್ಧನಿಲ್ಲ, ಪಂಜಾಬ್ ನ ಮುಂದಿನ ಭವಿಷ್ಯದ ದೃಷ್ಟಿಯಿಂದಾಗಿ ನಾನು ಪಕ್ಷದ ರಾಜ್ಯಾಧ್ಯಕ್ಷನ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ ಅಂತ ಸಿದು ಟ್ಟೀಟ್ ಮಾಡಿದ್ದಾರೆ.

ಇನ್ನು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಗೆ ಪತ್ರ ಬರೆದಿರೋ ಸಿಧು ಪಕ್ಷದಲ್ಲಿದ್ದುಕೊಂಡು ಸೇವೆಯನ್ನು ಮುಂದುವರಿಸುವುದಾಗಿ ಸಿಧು ತಿಳಿಸಿದ್ದಾರೆ.

6. 3 ಲೋಕಸಭಾ ಕ್ಷೇತ್ರ, 30 ವಿಧಾನಸಭಾ ಕ್ಷೇತ್ರಗಳಿಗೆ ಅ.30 ರಂದು ಉಪಚುನಾವಣೆ

ಅಕ್ಟೋಬರ್ 30 ರಂದು 3 ಲೋಕಸಭಾ ಸ್ಥಾನ ಮತ್ತು ವಿವಿಧ ರಾಜ್ಯಗಳ 30 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದೆ ಅಂತ ಚುನಾವಣಾ ಆಯೋಗ ತಿಳಿಸಿದೆ. ಅಸ್ಸಾಂನಲ್ಲಿ 5, ಪಶ್ಚಿಮ ಬಂಗಾಳದಲ್ಲಿ 4, ಮೇಘಾಲಯ, ಹಿಮಾಚಲ ಮತ್ತು ಮಧ್ಯಪ್ರದೇಶದಲ್ಲಿ ತಲಾ 3, ರಾಜಸ್ಥಾನ, ಕರ್ನಾಟಕ ಮತ್ತು ಬಿಹಾರದಲ್ಲಿ ತಲಾ 2 ಮತ್ತು ಆಂಧ್ರಪ್ರದೇಶ, ತೆಲಂಗಾಣ, ಮಿಜೋರಾಂ ನಾಗಾಲ್ಯಾಂಡ್, ಹರಿಯಾಣ ಮತ್ತು ಮಹಾರಾಷ್ಟ್ರದಲ್ಲಿ ತಲಾ 1 ವಿಧಾನಸಭಾ ಸ್ಥಾನಕ್ಕೆ ಒಟ್ಟು 30 ಕ್ಷೇತ್ರಗಳಲ್ಲಿ ಉಪಚುನಾವಣೆ ನಡೆಯಲಿದೆ.ನವೆಂಬರ್ ನಲ್ಲಿ ಮತ ಎಣಿಕೆ ನಡೆಯಲಿದೆ.

7. ಕಾಂಗ್ರೆಸ್ ಸೇರ್ಪಡೆಗೊಂಡ ಕನ್ಹಯ್ಯ ಕುಮಾರ್, ಜಿಗ್ನೇಶ್ ಮೆವಾನಿ

ಸಿಪಿಐ ನಾಯಕ ಹಾಗೂ ಜೆಎನ್ ಯು ವಿದ್ಯಾರ್ಥಿ ಒಕ್ಕೂಟದ ಮಾಜಿ ನಾಯಕ ಕನ್ಹಯ್ಯ ಕುಮಾರ್ ಮತ್ತು ಗುಜರಾತ್ ಶಾಸಕ ಜಿಗ್ನೇಶ್ ಮೆವಾನಿ ಇಂದು ಕಾಂಗ್ರೆಸ್ ಸೇರ್ಪಡೆಗೊಂಡಿದ್ದಾರೆ.

ದೆಹಲಿ ಕಾಂಗ್ರೆಸ್ ಕಚೇರಿಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಮ್ಮುಖದಲ್ಲಿ ಜಿಗ್ನೇಶ್ ಮೇವಾನಿ ಮತ್ತು ಕನ್ಹಯ್ಯ ಕುಮಾರ್ ಅಧಿಕೃತವಾಗಿ ಕಾಂಗ್ರೆಸ್ ಗೆ ಸೇರ್ಪಡೆಯಾಗಿದ್ದಾರೆ. ಬಿಜೆಪಿ ಪ್ರಾಬಲ್ಯ ಹೊಂದಿರೋ ಗುಜರಾತ್ ನಲ್ಲಿ ಮುಂದಿನ ವರ್ಷ ಎದುರಾಗಲಿರೋ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ  ಉಭಯ ಪ್ರಭಾವಿ ನಾಯಕರು ಸದ್ಯ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ ಎನ್ನಲಾಗಿದೆ.

8. ಬೆಂಗಳೂರಲ್ಲಿ ಮತ್ತೊಂದು ಕಟ್ಟಡ ಕುಸಿತ..!

ಸಿಲಿಕಾನ್ ಸಿಟಿಯ ಲಕ್ಕಸಂದ್ರದಲ್ಲಿ ನಿನ್ನೆ ಮನೆ ಕುಸಿತ ಪ್ರಕರಣ ನೆಡದ ಬೆನ್ನಲ್ಲೇ ಇಂದು ಮತ್ತೊಂದು ಕಟ್ಟಡ ಕುಸಿದಿದೆ. ಬೆಂಗಳೂರಿನ ಡೈರಿ ಸರ್ಕಲ್ ಬಳಿಯ ಕೆಎಂಎಫ್ ಕ್ವಾರ್ಟರ್ಸ್ ನ ಕಟ್ಟಡ ಕುಸಿದಿದೆ. ಸುಮಾರು 50 ವರ್ಷದ ಹಳೆಯ ಈ ಕಟ್ಟಡದಲ್ಲಿ 15ಕ್ಕೂ ಹೆಚ್ಚು ಕುಟುಂಗಳು ವಾಸವಿದ್ದವು. ಇನ್ನು ಕಟ್ಟಡ ಕುಸಿಯುತ್ತಿರುವ ಶಬ್ಧ ಕೇಳಿ ಅಲ್ಲಿ ವಾಸವಿದ್ದ ಜನರು ಹೊರಗೆ ಓಡೋಡಿ ಬಂದು ಪ್ರಾಣ ಉಳಿಸಿಕೊಂಡಿದ್ದಾರೆ. ಇನ್ನು ಕಟ್ಟಡ ಕುಸಿದ ಪರಿಣಾಮ ಅಕ್ಕಪಕ್ಕದ ಕಟ್ಟಡಗಳೂ ಬಿರುಕು ಬಿಟ್ಟಿವೆ. ಘಟನೆಯಲ್ಲಿ ನಾಲ್ವರಿಗೆ ಗಾಯಗಳಾಗಿವೆ.

9. ಸ್ಯಾಂಡಲ್ ವುಡ್ ನಲ್ಲಿ ಸ್ಟಾರ್ ವಾರ್..!

ರಾಜ್ಯ ಸರ್ಕಾರ ಹೌಸ್ ಫುಲ್ ಪ್ರದರ್ಶನಕ್ಕೆ ಗ್ರೀನ್ ಸಿಗ್ನಲ್ ನೀಡುತ್ತಿದ್ದಂತೆಯೇ ಸ್ಯಾಂಡಲ್ ವುಡ್ ನ ಬಿಗ್ ಬಜೆಟ್ ಚಿತ್ರಗಳು ರಿಲೀಸ್ ಗೆ ರೆಡಿಯಾಗಿವೆ. ಅಕ್ಟೋಬರ್ 29ರಂದು ಹ್ಯಾಟ್ರಿಕ್ ಹೀರೋ ಶಿವಣ್ಣ ಅಭಿನಯದ ಭಜರಂಗಿ 2, ದುನಿಯಾ ವಿಜಯ್ ನಟನೆ ಮತ್ತು ನಿರ್ದೇಶನದ ಸಲಗ ಮತ್ತು ಕಿಚ್ಚ ಸುದೀಪ್ ನಟನೆಯ ಕೋಟಿಗೊಬ್ಬ 2  ಅಕ್ಟೋಬರ್ 14 ರಂದು ರಿಲೀಸ್ ಆಗಲಿವೆ. ಈ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಸ್ಟಾರ್ ವಾರ್ ನಡೆಯಲಿದೆ.

10. ನಾಳೆ RCB-RR ಹಣಾಹಣಿ

ಐಪಿಎಲ್ ನ ನಾಳಿನ 43ನೇ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಸೆಣಸಾಡಲಿವೆ. ಗೆದ್ದ ತಂಡವು ಪ್ಲೇ ಆಫ್ ತಲುಪಲಿದ್ದು ಉಭಯ ತಂಡಗಳಿಗೂ ಗೆಲ್ಲಲ್ಲೇ ಬೇಕಾದ ಅನಿವಾರ್ಯತೆ ಇದೆ. ಐಪಿಎಲ್ ರ್ಯಾಂಕಿಂಗ್ ನಲ್ಲಿ ಆರ್ ಸಿಬಿ ಮೂರನೇ ಸ್ಥಾನದಲ್ಲಿದ್ರೆ, ರಾಜಸ್ಥಾನ ರಾಯಲ್ಸ್  ಆರನೇ ಸ್ಥಾನದಲ್ಲಿದೆ.

- Advertisement -

Latest Posts

Don't Miss