- Advertisement -
www.karnatakatv.net: ಬೆಂಗಳೂರು: ಕನ್ನಡ ಚಿತ್ರರಂಗದ ಖ್ಯಾತ ನಾಯಕ ನೀನಾಸಂ ಸತೀಶ್ ಅವರ ತಾಯಿ ವಯೋಸಹಜ ಖಾಯಿಲೆಯಿಂದ ನಿಧನರಾಗಿದ್ದಾರೆ.
ಗೆಳೆಯ ಸಂಚಾರಿ ವಿಜಯ ಅವರ ಸಾವಿನ ನೋವು ಮಾಸುವ ಮುನ್ನವೇ ಈಗ ತಾಯಿಯನ್ನು ಕಳೆದುಕೊಂಡ ನೋವಿನಲ್ಲಿದ್ದಾರೆ ಸತೀಶ್ ನೀನಾಸಂ. ಬಹುದಿನಗಳಿಂದ ಅನಾರೋಗ್ಯದಿಂದ ಬಳುಲುತ್ತಿದ್ದ ಚಿಕ್ಕ ತಾಯಮ್ಮ ಅವರಿಗೆ 80 ವರ್ಷವಾಗಿತ್ತು. ಆರ್ ಆರ್ ನಗರದಲ್ಲಿ ಇರುವ ತಮ್ಮ ನಿವಾಸದಲ್ಲಿ ಇಂದು ಮುಂಜಾನೆ ನಿಧನಹೊಂದಿದ್ದಾರೆ.
3 ವರ್ಷದ ಮಗುವಿದ್ದಾಗಲೇ ನೀನಾಸಂ ಸತೀಶ್ ತಂದೆಯನ್ನು ಕಳೆದುಕೊಂಡಿದ್ದರು. ನಂತರ ತಾಯಿಯೇ 8 ಜನ ಮಕ್ಕಳನ್ನು ಬಡತನವಿದ್ದರೂ ಎನೂ ಕೊರತೆಯಿಲ್ಲದಂತೆ ಬೆಳೆಸಿದ್ದರು. ಇನ್ನು ಮೂಲಗಳು ತಿಳಿಸುವಂತೆ, ಮಂಡ್ಯದ ಹತ್ತಿರ ಯಲ್ಲದುಹಳ್ಳಿಯಲ್ಲಿ ಸತೀಶ್ ತಾಯಿಯ ಅಂತ್ಯ ಸಂಸ್ಕಾರ ನೆರವೇರಿಸಲು ತೀರ್ಮಾನಿಸಲಾಗಿದೆ.
ಕರ್ನಾಟಕ ಟಿವಿ- ಬೆಂಗಳೂರು
- Advertisement -

