Monday, December 23, 2024

Latest Posts

ಶ್ರೀಮನ್ನಾರಾಯಣನ ‘ಗರುಡಗಮನ ವೃಷಭವಾಹನ’…!

- Advertisement -

BANGALORE:ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ತಮ್ಮ ಹೊಸ ಪ್ರಾಜೆಕ್ಟ್ ಬಗ್ಗೆ ಮಾಹಿತಿ ನೀಡಿದ್ದಾರೆ. ಹೌದು, ಸ್ಯಾಂಡಲ್ ವುಡ್ ನಲ್ಲಿ ನಟ, ನಿರ್ದೇಶಕ ಹಾಗೂ ನಿರ್ಮಾಪಕನಾಗಿ ಗುರುತಿಸಿಕೊಂಡಿರೋ ರಕ್ಷಿತ್ ಶೆಟ್ಟಿ, ಸದ್ಯ ಹೊಸದೊಂದು ಪ್ರಯೋಗತ್ಮಕ ಚಿತ್ರಕ್ಕೆ ಕೈ ಹಾಕಿದ್ದಾರೆ. ಹೌದು, ಗರುಡ ಗಮನ, ವೃಷಭವಾಹನ ಅನ್ನೋ ಚಿತ್ರವನ್ನ ರಕ್ಷಿತ್ ಶೆಟ್ಟಿ ತೆರೆಗೆ ತರುತ್ತಿದ್ದಾರೆ.
ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿರೋ ಸಿಂಪಲ್ ಸ್ಟಾರ್, ಒಂದು ಸಿನಿಮಾ ನಮ್ಮನ್ನು 3 ಗಂಟೆಗಳ ಕಾಲ ಹಿಡಿದಿಟ್ಟುಕೊಳ್ಳುವುದು ಅದು ಅದರ ಸಾಮರ್ಥ್ಯ, ಆದರೆ ಇಂಥಹದ್ದೇ ಸಿನಿಮಾ ದಿನಗಳಗಟ್ಟಲೆ ಕಾಡುತ್ತಿದೆ ಅಂದರೆ ಅದು ನಮನ್ನು ಆವರಿಸಿಕೊಂಡಿದೆ ಎಂದರೆ ತಪ್ಪಾಗಲಾರದು. ಅದು ಬರಿ ಸಾಮರ್ಥ್ಯವಲ್ಲ, ಅದನ್ನೂ ಮೀರಿದ ಶಕ್ತಿ.
ಈ ಕಲಾ ಕುಸುರಿಗೆ ನಾನು,ನನ್ನ ಮನಸಿನಲ್ಲಿ ಗಟ್ಟಿಯಾದ ಜಾಗ ಮಾಡಿಕೊಟ್ಟಿರುವೆ, ಬಹುಶ: ನಾನು ಅದೇ ಭಾಗದ ಕಂಪನ್ನು ಹಂಚಿಕೊಂಡಿರುವುದಕ್ಕಾ? ಅಥವಾ ಸಿನಿಮಾದ ಪಾತ್ರಗಳು ಮತ್ತು ಅವರು ಕಟ್ಟಿಕೊಟ್ಟಿರುವ ದೃಶ್ಯಾವಳಿ ಮನಸ್ಸಿನ ಉಸಿರಾಟವನ್ನು ಹಿಡಿದಿತ್ತಾ? ನನ್ನ ಬಾಲ್ಯದ ದಿನಗಳನ್ನು ಮೆಲುಕು ಹಾಕುವಂತೆ ಅನಿಸಿತ್ತು.
ಇವೇ ಮುಖ್ಯ ಕಾರಣಗಳಾ? ಅಲ್ಲ! ಇದನ್ನು ಮೀರಿದ ಅವಿನಾಭಾವ ಸಿಲುಕುವಿಕೆ ಹಾಗೂ ಅಭಿನಯ ಮತ್ತು ಚಿತ್ರಕಥೆ.
ರಾಜ್ ಶೆಟ್ಟಿ ಎಂಬ ಪ್ರತಿಭೆ ಯಾವ ದೇವರ ವರವೋ ಗೊತ್ತಿಲ್ಲ, ಕನ್ನಡ ಚಿತ್ರರಂಗಕ್ಕೆ, ಅವರ ತಪಸ್ಸು, ನಿಷ್ಠೆ, ಆತ್ಮ ಸಮರ್ಪಣೆ ಎಲ್ಲವೂ ಸೇರಿ ಅವರನ್ನು ಒಬ್ಬ ಉತ್ತಮ ಬರಹಗಾರನನ್ನಾಗಿ ಮಾಡಿದೆ. ಇದರಲ್ಲಿ ಅವರ ನಿರ್ದೇಶನ ಮತ್ತು ಅಭಿನಯ ಹೃದಯ ಕಣಿವೆಯಲ್ಲಿ ಚಪ್ಪಾಳೆ ಹರಿಸುತ್ತದೆ. ರಿಷಬ್ ಶೆಟ್ಟಿ, ಗೋಪಾಲ್ ದೇಶಪಾಂಡೆ ಇಬ್ಬರು ತಮ್ಮ ಪಾತ್ರಗಳಲ್ಲಿ ಜೀವಿಸಿದ್ದಾರೆ.
ಇಂತಹ ಕಲಾ ಕನಸಿನೊಂದಿಗೆ ಕೈ ಜೋಡಿಸುವುದು, ನನ್ನ ಕನಸು ನನಸಾದಷ್ಟೇ ಸಂತೋಷ ಪರಮ್ವ ಪಿಕ್ಚರ್ಸ್ ಮೂಲಕ ಇದನ್ನು ನಿಮಗೆ ಅರ್ಪಿಸುತ್ತೇವೆ. ಅಂತ ರಕ್ಷಿತ್ ಶೆಟ್ಟಿ ತಮ್ಮ ಮುಂದಿನ ಸಿನಿಮಾದ ಬಗ್ಗೆ ಈಗಲೇ ಇಂಟರೆಸ್ಟ್ ಮೂಡಿಸೋ ರೀತಿಯಲ್ಲಿ ಬರೆದುಕೊಂಡಿದ್ದಾರೆ.
ಇದಕ್ಕೂ ಮೊದಲು ಮತ್ತೊಂದು ಪೋಸ್ಟ್ ಮಾಡಿದ್ದ ರಕ್ಷಿತ್ ಶೆಟ್ಟಿ , ಲೂಸಿಯ, ರಾಮ ರಾಮ ರೇ, ರಂಗಿತರಂಗ, ಒಂದು ಮೊಟ್ಟೆಯ ಕಥೆ, ಕವಲುದಾರಿ, ದಿಯಾ.. ಈ ಸಿನಿಮಾಗಳು ನನ್ನ ಮೇಲೆ ಉಂಟುಮಾಡಿದ ಪ್ರಭಾವ ಅತಿ ಪ್ರಬಲವಾತ್ತು ಹಾಗೂ ಅದನ್ನು ಜಗತ್ತಿನ ಜೊತೆ ಹಂಚಿಕೊಳ್ಳಲು ಅತಿ ಸಂತಸವಾದ ವಿಷಯವಾಗಿತ್ತು. ಇಂದು ಇದೇ ರೀತಿ ಪ್ರಬಲವಾದ ಪ್ರಭಾವ ಬೀರುವ ಅಂತದ್ದೇ ಒಂದು ಸಹಯೋಗ ಈ ಸಿನಿಮಾದ ಮೂಲಕ ಕೂಡಿ ಬಂದಿದೆ. ಇದು ನಿಮಗೂ ಸಹ ಭಾವನೆಗಳನ್ನು ಬಡಿದೇಳಿಸುವ ವರ್ಣ ಚಿತ್ರಗಳ ಸಮೂಹವಾಗುವದರಲ್ಲಿ ಎರಡು ಮಾತಿಲ್ಲ. ಇಂದು ನಿಮ್ಮ ಮುಂದೆ ಅನಾವರಣಗೊಳ್ಳಲಿದೆ ಅಂತ ಹೇಳಿಕೊಂಡಿದ್ರು.

ಈ ಮೂಲಕ ಕನ್ನಡದಲ್ಲಿ ಮತ್ತೊಂದು ಪ್ರಯೋಗಾತ್ಮಕ ಚಿತ್ರ ಬರಲಿದೆ ಅನ್ನೋದು ಪಕ್ಕಾ ಆಗಿದೆ. ಇನ್ನು ಕನ್ನಡದ ಇಬ್ಬರು ಪ್ರಮುಖ ನಟರಾದ ರಾಜ್.ಬಿ ಶೆಟ್ಟಿ ಹಾಗೂ ರಿಷಬ್ ಶೆಟ್ಟಿ ಒಟ್ಟಾಗಿ ಒಂದೆ ಸಿನಿಮಾದಲ್ಲಿ ನಟಿಸಲು ಸಿದ್ದರಾಗಿದ್ದರೆ. ಈ ಇಬ್ಬರು ಕೂಡ ತಮ್ಮದೆ ಶೈಲಿಯ ಕಥೆ, ನಿರ್ದೇಶನ ಹಾಗೂ ನಟನೆಯಿಂದಲೇ ಗುರುತಿಸಿಕೊಂಡಿದ್ದಾರೆ. ಸದ್ಯ ಈಗ ಈ ಇಬ್ಬರ ಕಾಂಬಿನೇಷನ್‌ನ ಚಿತ್ರವನ್ನು ರಕ್ಷಿತ್ ಶೆಟ್ಟಿ ಅರ್ಪಿಸುತ್ತಿರೋದು ಮತ್ತೊಂದು ವಿಶೇಷ.

-ರೂಪೇಶ್. ಫಿಲಂ ಬ್ಯೂರೋ, ಕರ್ನಾಟಕ ಟಿವಿ.

- Advertisement -

Latest Posts

Don't Miss