Friday, July 11, 2025

Latest Posts

ಬಾಂಬ್ ದಾಳಿಗೆ 6 ಮಂದಿ ಸಾವು..!

- Advertisement -

www.karnatakatv.net: ಏಡೆನ್ ನಲ್ಲಿನ ರಾಜ್ಯಪಾಲರ ಬೆಂಗಾವಲು ವಾಹನವನ್ನೇ ಗುರುಯಾಗಿಸಿ ಬಾಂಬ್ ದಾಳಿ ನಡೆಸಿದ್ದಾರೆ.

ಹೌದು.. ಯೆಮೆನ್ ನ ದಕ್ಷಿಣ ನಗರವಾದ ಏಡೆನ್ ನಲ್ಲಿ ಕಾರು ಬಾಂಬ್ ದಾಳಿ ನಡೆದಿದೆ. ಇದರಲ್ಲಿ 6 ಮಂದಿ ಮೃತಪಟ್ಟಿದ್ದು,7 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಸಚಿವಾಲಯವು ತಿಳಿಸಿದೆ. ಈ ದಾಳಿಯಿಂದ ಗವರ್ನರ್ ಅಹ್ಮದ್ ಲಾಮ್ಲಾಸ್ ಮತ್ತು ಕೃಷಿ ಸಚಿವ ಸೇಲಂ ಸುಖಾತ್ರಿ ಇಬ್ಬರೂ ಪಾರಾಗಿದ್ದಾರೆ. ಈವರು ದಕ್ಷಿಣ ಪ್ರತ್ಯೇಕತಾ ಗುಂಪಿಗೆ ಸೇರಿದವರಾಗಿದ್ದಾರೆ.

ಆದರೆ ರಾಜ್ಯಪಾಲರ ಮಾಧ್ಯಮ ಕಾರ್ಯದರ್ಶಿ ಮತ್ತು ಅವರ ಫೋಟೋ ಗ್ರಾಫರ್ ಇಬ್ಬರೂ ಮೃತಪಟ್ಟಿದ್ದು, ಇನ್ನುಳಿದಂತೆ ನಾಗರಿಕರು ಸಾವನ್ನಪ್ಪಿದ್ದಾರೆ ಎಂದು ಘಟನೆ ನಡೆದ ಸ್ಥಳದ ಆಡಳಿತ ತಿಳಿಸಿದೆ. ಯೆಮೆನ್ ಕೇಂದ್ರ ಸರ್ಕಾರ 2014ರಲ್ಲಿ ರಾಜಧಾನಿ ಸನಾದಿಂದ ಏಡೆನ್ ಗೆ ಸ್ಥಳಾಂತರಗೊಂಡಿದೆ. ಆಗಿನಿಂದಲೂ ಸೌದಿ ಬೆಂಬಲಿತ ಯೆಮೆನ್ ಸರ್ಕಾರದ ವಿರುದ್ಧ ಇರಾನ್ ಬೆಂಬಲಿತ ಹುತಿ ಬಂಡುಕೋರರು ಹೋರಾಟ ನಡೆಸುತ್ತಿದ್ದಾರೆ.

- Advertisement -

Latest Posts

Don't Miss