Friday, September 20, 2024

Latest Posts

ಶಿಲ್ಪಾ ಶೆಟ್ಟಿ ಮತ್ತು ರಾಜ್ ಕುಂದ್ರಾ ಮೇಲೆ ಮತ್ತೆ ದೂರು ದಾಖಲು..!

- Advertisement -

www.karnatakatv.net : ಅಶ್ಲೀಲ ಚಿತ್ರದ ಪ್ರಕರಣದಲ್ಲಿ ಬಂಧನಕ್ಕಿಡಾಗಿ ಬಿಡುಗಡೆಯಾಗಿದ್ದ ರಾಜ್ ಕುಂದ್ರಾ ಅವರ ದಂಪತಿಗಳ ವಿರುದ್ಧ ಮತ್ತೆ ಲೈಂಗಿಕ ಕಿರುಕುಳ ಆರೋಪದಡಿ ದೂರು ದಾಖಲಾಗಿದೆ.

ಹೌದು.. ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ಅವರ ಮೇಲೆ ಅಶ್ಲೀಲ ಚಿತ್ರದ ನಿಮಿತ್ಯ ಅವರನ್ನು ಬಂಧಿಸಲಾಗಿತ್ತು ಇತ್ತೀಚಗಷ್ಟೆ ಬಿಡುಗಡೆ ಕೂಡಾ ಪಡೆದಿದ್ರು, ಆದರೆ ಈಗ ಮತ್ತೆ ದಂಪತಿಗಳ ಮೇಲೆ ಬಾಲಿವುಡ್ ನಟಿ ಶೆರ್ಲಿನ್ ದೂರು ಕೋಟ್ಟಿದ್ದಾರೆ. ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಅ.14 ರಂದು ಜುಹು ಠಾಣೆಯಲ್ಲಿ ದೂರು ನೀಡಿ ಪೊಲೀಸರು ಎಫ್ ಐ ಆರ್ ದಾಖಲು ಮಾಡಿದ್ದಾರೆ. ಶಿಲ್ಪಾ ಶೆಟ್ಟಿ ಅವರಿಂದಲೂ ನಿರಂತರ ಮಾನಸಿಕ ಕಿರುಕುಳ ಅನುಭವಿಸಿದ್ದೇನೆ ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ. ರಾಜ್ ಕುಂದ್ರಾ ಅವರ ವಿರುದ್ಧ ಅಷ್ಟೇ ಅಲ್ಲ ಶಿಲ್ಪಾ ಶೆಟ್ಟಿ ವಿರುದ್ಧವೂ ದೂರು ದಾಖಲಾಗಿದೆ.

2019ರಲ್ಲಿ ರಾಜ್ ಕುಂದ್ರಾ ನನ್ನ ಮ್ಯಾನೇಜರ್ ರನ್ನು ಸಂಪರ್ಕಿಸಿ ಆಯಪ್ ಬ್ಯುಸಿನೆಸ್ ಮಾಡುವ ಪ್ರಸ್ತಾಪ ಮಾಡಿದ್ದರು. ನನಗೆ ಆ ವ್ಯವಹಾರದ ಬಗ್ಗೆ ಇಷ್ಟವಿರಲಿಲ್ಲ. ಹಾಗಾಗಿ ಅದನ್ನು ತಿರಸ್ಕರಿಸಿದ್ದೆ. ಒಂದು ದಿನ ರಾಜ್ ಕುಂದ್ರಾ ನನ್ನ ಅನುಮತಿ ಇಲ್ಲದೆ ಮನೆಗೆ ಬಂದಿದ್ದರು. ಆ ವ್ಯವಹಾರದ ಬಗ್ಗೆ ಮತ್ತೆ ಪ್ರಸ್ತಾಪ ಮಾಡಿದರು. ಈ ವೇಳೆ ನಮ್ಮ ಮಾತು ಬೆಳೆದಿತ್ತು. ನಂತರ ಅವರು ನನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದರು. ನಾನು ಈ ವಿಚಾರವಾಗಿ ಬಹಿರಂಗವಾಗಿ ಮಾತನಾಡಿದ ನಂತರ, ಶಿಲ್ಪಾ ಶೆಟ್ಟಿ ನನಗೆ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಅರೋಪಿಸಿದ್ದಾರೆ. ಈ ಹಿಂದೆಯೂ ಈ ದಂಪತಿಗಳ ಮೇಲೆ ದೂರು ನೀಡಿ ಭಾರಿ ಸುದ್ದಿಯಾಗಿದ್ರು. ಅಶ್ಲೀಲ ಚಿತ್ರ ಪ್ರಕರಣದಲ್ಲಿ ಶೆರ್ಲಿನ್ ಚೋಪ್ರಾ ಹೆಸರಿದ್ದು, ನಿರೀಕ್ಷಣಾ ಜಾಮೀನು ಪಡೆದುಕೊಂಡಿದ್ದಾರೆ.

- Advertisement -

Latest Posts

Don't Miss