Bollywood: ನಟಿ ಪ್ರಿಯಾಂಕಾ ಛೋಪ್ರಾ ಸದ್ಯ ನಿಕ್ ಜೋನಸ್ ಅವರನ್ನು ವಿವಾಹವಾಗಿ, ವಿದೇಶದಲ್ಲಿದ್ದಾರೆ. ಆಗಾಗ ಪತಿ- ಮಗಳ ಜತೆ ಭಾರತಕ್ಕೆ ಬಂದಾಗ, ಟೆಂಪಲ್ ರನ್ ಕೂಡ ಮಾಡ್ತಾರೆ. ಆಗೆಲ್ಲ ಸೋಶಿಯಲ್ ಮೀಡಿಯಾದಲ್ಲಿ ಅವರವನ್ನು ಹೊಗಳುವವರೇ ಹೆಚ್ಚು. ಆದರೆ ಇದೀಗ ದೀಪಾವಳಿ ಆಚರಿಸಿದ ಫೋಟೋವನ್ನು ಪ್ರಿಯಾಂಕಾ ಸೋಶಿಯಲ್ ಮೀಡಿಯಾಗೆ ಹಾಕಿದ್ದೇ ತಡ, ಜನರಲ್ಲಿ ಪರ ವಿರೋಧ ಚರ್ಚೆ ನಡೆಯುತ್ತಿದೆ.
ಏಕೆಂದರೆ ಈ ಫೋಟೋಗಳಲ್ಲಿ ಪ್ರಿಯಾಂಕಾ ಮಗಳು ಮತ್ತು ಪತಿಯ ಜೊತೆ ದೀಪಾವಳಿ ಆಚರಿಸಿದ್ದಾರೆ. ಆದರೆ ಈ ಮಧ್ಯೆ ಅವರು ನಾನ್ವೆಜ್ ತಿನ್ನುವ ಫೋಟೋ ಕೂಡ ಸೋಶಿಯಲ್ ಮೀಡಿಯಾದಲ್ಲಿ ಹಾಕಿದ್ದಾರೆ. ಹಾಗಾಗಿ ಹಬ್ಬದ ದಿನ ನಾನ್ವೆಜ್ ತಿಂದರು ಅಂತಾ ಕೆಲವರು ವಿರೋಧಿಸಿದರೆ, ದೀಪಾವಳಿಗೆ ಕೆಲವು ಕಡೆ ನಾನ್ವೆಜ್ ಮಾಡಿದ್ರೆನೇ ಹಬ್ಬ ಪರಿಪೂರ್ಣ ಅಂತಾ ಕೆಲವರು ವಾದ ಮಾಡುತ್ತಿದ್ದಾರೆ.
ಅಲ್ಲದೇ ಆಕೆ ಧರಿಸಿದ ಬಟ್ಟೆ ಬಗ್ಗೆಯೂ ಪ್ರಶ್ನಿಸಿದ್ದಾರೆ. ಆಕೆಯ ಮನೆಯಲ್ಲಿ ಹಣತೆಯಲ್ಲಿ ದೀಪ ಹಚ್ಚುವ ಬದಲು, ಕ್ಯಾಂಡಲ್ ಬಳಸಿದ್ದಾರೆ. ಈ ಬಗ್ಗೆ ನೆಟ್ಟಿಗರು ತಕರಾರು ತೆಗೆದಿದ್ದಾರೆ. ಆದರೆ ಪ್ರಿಯಾಂಕಾ ಛೋಪ್ರಾ ಮಾತ್ರ ಈ ಬಗ್ಗೆ ಇದುವರೆಗೂ ಮೌನ ವಹಿಸಿದ್ದಾರೆ.
ಇನ್ನು ಈ ಸುದ್ದಿ ಹಾಕಿದ ಕಡೆಯಲ್ಲೆಲ್ಲ ಪರ ವಿರೋಧ ಚರ್ಚೆ ಜೋರಾಗಿದೆ. ಅದು ಆಕೆಯ ಜೀವನ, ಆಕೆ ಹೇಗೆ ಬೇಕೋ ಹಾಗೆ ಬದುಕುತ್ತಾಳೆ. ನಾನ್ ವೆಜ್ ತಿನ್ನೋದ್ರಲ್ಲಿ ಏನು ತಪ್ಪಿದೆ..? ಕೆಲವು ಕಡೆ ದೀಪಾವಳಿ ಸಮಯದಲ್ಲಿ 1 ದಿನವಾದ್ರೂ ನಾನ್ವೆಜ್ ಮಾಡೇ ಮಾಡ್ತಾರೆ. ಕೆಲವರು ಅದನ್ನು ನೈವೇದ್ಯವೂ ಮಾಡುವುದುಂಟು ಅಂತಾ ಕೆಲವರು ಪ್ರಿಯಾಂಕಾ ಪರ ಬ್ಯಾಟ್ ಬೀಸಿದ್ದಾರೆ. ಇನ್ನು ಕೆಲವರು ಹಬ್ಬದ ಸಮಯದಲ್ಲಿ ಮಡಿ ಮೈಲಿಗೆ ಪಾಲಿಸಬೇಕು. ಆ ದಿನ ನಾನ್ವೆಜ್ ತಿಂದಿದ್ದು ತಪ್ಪು ಎಂದೇ ವಾದಿಸಿದ್ದಾರೆ.




