www.karnatakatv.net: ಗುಂಡ್ಲುಪೇಟೆ : ಮಹಾಮಾರಿ ಕೊರೊನಾದಿಂದ ರಾಜ್ಯಾದ್ಯಂತ ಮುಚ್ಚಲ್ಪಟ್ಟ ಶಾಲಾ-ಕಾಲೇಜುಗಳು 20 ತಿಂಗಳ ಬಳಿಕ ಇಂದು ಮತ್ತೆ ಓಪೆನ್ ಆಗಿವೆ.
ಇಂದಿನಿoದ 1 ರಿಂದ 5 ನೇತರಗತಿಗಳು ಆರಂಭವಾಗಿದ್ದು, ಖುಷಿಯಿಂದ ಶಾಲೆಗಳತ್ತ ಮಕ್ಕಳು ಬರುತ್ತಿದ್ದಾರೆ. ಕೊರೊನಾದ ಮುಂಜಾಗ್ರತಾ ಕ್ರಮಗಳ ಜೊತೆ ವಿದ್ಯಾರ್ಥಿಗಳು ಶಾಲೆ-ಕಾಲೇಜುಗಳತ್ತ ಮುಖ ಮಾಡಿದ್ದ ವಿದ್ಯಾರ್ಥಿಗಳಿಗೆ ಕ್ಷೇತ್ರ ಶಿಕ್ಷಣಾಧಿಕಾರಿ ಶಿವಮೂರ್ತಿ ಹೂ ನೀಡುವ ಮೂಲಕ ಸ್ವಾಗತ ಮಾಡಿದ್ದರು. ಗುಂಡ್ಲುಪೇಟೆ ಪಟ್ಟಣದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳನ್ನು ಸ್ವಾಗತ ಕೋರಿದರು. ಇಪ್ಪತ್ತು ತಿಂಗಳ ನಂತರ ವಿದ್ಯಾರ್ಥಿಗಳು ಕಾಲೇಜಿಗೆ ಬಂದಿದ್ದು ತಮ್ಮ ಸ್ನೇಹಿತರನ್ನು, ಕೊಠಡಿ, ಶಿಕ್ಷಕರನ್ನು ನೋಡಿ ಸಂತಸಗೊoಡಿದ್ದಾರೆ ಹಾಗೂ ಗುರುಗಳಿಗೆ ಹೊಸ ವರ್ಷದ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡಿದ್ದಾರೆ. ಗುಂಡ್ಲುಪೇಟೆ ತಾಲೂಕಿನಲ್ಲಿ 240 ಶಾಲೆಗಳಲ್ಲಿ ಪ್ರಾರಂಭ ಗೊಂಡಿವೆ.
ಪ್ರಸಾದ್, ಕರ್ನಾಟಕ ಟಿವಿ- ಚಾಮರಾಜನಗರ

