Thursday, February 13, 2025

Latest Posts

10 ಲಕ್ಷದವರೆಗೂ ಉಚಿತ ಚಿಕಿತ್ಸೆ ನೀಡುವದಾಗಿ ಪ್ರಿಯಾಂಕಾ ಗಾಂಧೀ ಭರವಸೆ..!

- Advertisement -

www.karnatakatv.net: ಉತ್ತರ ಪ್ರದೇಶವೆಂಬ ಸಾಂಪ್ರದಾಯಿಕ ಕ್ಷೇತ್ರವನ್ನ ತನ್ನ ತೆಕ್ಕೆಗೆ ತೆಗೆದುಕೊಳ್ಳಬೇಕೆಂದು ಪಣ ತೊಟ್ಟಿರೋ ಕಾಂಗ್ರೆಸ್ ಮತದಾರರಿಗೆ ಒಂದರ ಮೇಲೊಂದರoತೆ ಭರ್ಜರಿ ಆಶ್ವಾಸನೆ ನೀಡ್ತಿದೆ.

ಈಗಾಗಲೇ ಮುಂದಿನ ವರ್ಷ ಎದುರಾಗಲಿರೋ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ರಣತಂತ್ರ ರೂಪಿಸಿರೋ ಕಾಂಗ್ರೆಸ್ ಮತದಾರ ಪ್ರಭುವನ್ನು ತನ್ನತ್ತ ಸೆಳೆದುಕೊಳ್ಳೋ ಪ್ರಯತ್ನ ನಡೆಸ್ತಿದೆ. ಹೌದು, ಕಳೆದ ವಾರದಿಂದ ಉತ್ತರಪ್ರದೇಶ ಜನರಿಗೆ ಕಾಂಗ್ರೆಸ್ ಆಫರ್ ಗಳ ಮೇಲೆ ಆಫರ್ ನೀಡುತ್ತಾ ಬರ್ತಿದೆ. ಮೊನ್ನೆಯಷ್ಟೇ ಯುವತಿಯರಿಗೆ ಉಚಿತ ಸ್ಮಾರ್ಟ್ ಫೋನ್, ಸ್ಕೂಟಿ ನೀಡ್ತೇವೆ ಅಂತ ಹೇಳಿದ್ದ ಕಾಂಗ್ರೆಸ್ ಬಳಿಕ ರೈತರ ಸಾಲ ಮನ್ನಾ, 20 ಲಕ್ಷ ಉದ್ಯೋಗ ಸೃಷ್ಟಿ, ಉಚಿತ ವಿದ್ಯುತ್ ಸರಬರಾಜು ಸೇರಿದಂತೆ ಅನೇಕ ಭರವಸೆಗಳನ್ನು ನೀಡಿತ್ತು. ಸದ್ಯ ಮತ್ತೊಂದು ಆಶ್ವಾಸನೆ ಹೊತ್ತು ಬಂದಿರೋ ಕಾಂಗ್ರೆಸ್ ಇದೀಗ ಉತ್ತರಪ್ರದೇಶ ಜನರ ಆರೋಗ್ಯದ ದೃಷ್ಟಿಯಿಂದ ಮತ್ತೊಂದು ಆಫರ್ ನೀಡಿದೆ. ಅದೇನಪ್ಪಾ ಅಂದ್ರೆ, ಉತ್ತರಪ್ರದೇಶದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಅನಾರೋಗ್ಯ ಪೀಡಿತರಿಗೆ ಉಚಿತ ಚಿಕಿತ್ಸೆ ನೀಡೋದಾಗಿ ಹೇಳಿದೆ. ಅಲ್ಲದೆ 10 ಲಕ್ಷ ರೂಪಾಯಿವರೆಗೂ ರೋಗಿಗೆ ಉಚಿತ ಚಿಕಿತ್ಸೆ ನೀಡೋದಾಗಿಯೂ ಘೋಷಣೆ ಮಾಡಿದೆ.

ಈ ಬಗ್ಗೆ ಸದ್ಯ ಟ್ವೀಟ್ ಮಾಡಿರೋ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಕೊರೋನಾ ಸಂದರ್ಭದಲ್ಲಿ ಯೋಗಿ ಸರ್ಕಾರ ರಾಜ್ಯದ ಜನರನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿತ್ತು. ರಾಜ್ಯದಲ್ಲಿನ ಆರೋಗ್ಯ ವ್ಯವಸ್ಥೆ ಹದೆಗೆಟ್ಟಿರೋದಕ್ಕೆ ಜನರೂ ಸಾಕ್ಷಿಯಾಗಿದ್ದಾರೆ. ಹೀಗಾಗಿ ಉತ್ತರಪ್ರದೇಶ ಕಾಂಗ್ರೆಸ್ ಒಂದು ನಿರ್ಧಾರಕ್ಕೆ ಬಂದಿದೆ. ನಮ್ಮ ಪಕ್ಷವನ್ನು ಅಧಿಕಾರಕ್ಕೆ ತಂದ್ರೆ ರಾಜ್ಯದ ಜನರಿಗೆ ಕಡಿಮೆ ದರದಲ್ಲಿ ಅತ್ಯುತ್ತಮ ಚಿಕಿತ್ಸೆ ನೀಡುವ ಭರವಸೆ ನೀಡುತ್ತಿದ್ದೇವೆ. ಯಾವುದೇ ಕಾಯಿಲೆಗೆ 10 ಲಕ್ಷ ರೂಪಾಯಿವರೆಗೂ ಸರ್ಕಾರದಿಂದಲೇ ಉಚಿತ ಚಿಕಿತ್ಸೆ ಸಿಗಲಿದೆ ಅಂತ ಪ್ರಿಯಾಂಕಾ ಗಾಂಧಿ ಭರವಸೆ ನೀಡಿದ್ದಾರೆ.

ಒಟ್ಟಾರೆ ದಿನದಿಂದ ದಿನಕ್ಕೆ ರಂಗೇರುತ್ತಿರೋ ಉತ್ತರಪ್ರದೇಶ ವಿಧಾನಸಭಾ ಚುನಾವಣಾ ಅಖಾಡದಲ್ಲಿ ರಾಜಕೀಯ ಪಕ್ಷಗಳು ಮತದಾರರಿಗೆ ಭರ್ಜರಿ ಆಫರ್ ನೀಡ್ತಿದೆ. ಅದನೇ ಇರಲಿ, ಯಾವುದೇ ಪಕ್ಷ ಅಧಿಕಾರಕ್ಕೆ ಬಂದ್ರೂ ಕೊಟ್ಟ ಭರವಸೆಯನ್ನು ಈಡೇರಿಸಿದ್ರೆ ವೋಟ್ ಹಾಕಿದ ಮತದಾರ ಪ್ರಭುವಿನ ಕೃಪಾಕಟಾಕ್ಷ ಇದ್ದೇ ಇರುತ್ತೆ.

- Advertisement -

Latest Posts

Don't Miss