ಬೆಂಗಳೂರಿನಲ್ಲಿ ಕಟ್ಟಡಗಳಿಗೆ ಬಿಬಿಎಂಪಿ ನೋಟಿಸ್..!

www.karnatakatv.net: ಬೆಂಗಳೂರು : ನಗರದಲ್ಲಿರುವ ಅಕ್ರಮ ಕಟ್ಟಡಗಳು, ಪ್ಲ್ಯಾನ್ ವೈಲೇಷನ್ ಮಾಡಿರುವ ಕಟ್ಟಡಗಳ ಬಗ್ಗೆ ಮಾಹಿತಿ ಪಡೆಯಲು ಬಿಬಿಎಂಪಿ ಮುಂದಾಗಿದ್ದು, ಎಲ್ಲಾ ಕಟ್ಟಡಗಳಿಗೆ ಬಿಬಿಎಂಪಿ ನೋಟಿಸ್ ನೀಡಿದೆ.

ಬೆಂಗಳೂರಿನಲ್ಲಿ ಒಟ್ಟು 23 ಲಕ್ಷ ಕಟ್ಟಡಗಳಿವೆ. ಇದರಲ್ಲಿ ಚಿಕ್ಕ ಮನೆಯಿಂದ ಹಿಡಿದು ದೊಡ್ಡ ಕಟ್ಟಡಗಳಿಗೂ ಬಿಬಿಎಂಪಿ ನೋಟಿಸ್ ನೀಡಿದೆ. ನೋಟೀಸ್ ಕೊಟ್ಟ ಏಳು ದಿನದೊಳಗೆ ಕಟ್ಟಡ ನಿರ್ಮಾಣಕ್ಕೆ ಪಡೆದ ಅನುಮತಿ ಪತ್ರ, ಓಸಿ, ಖಾತಾ ಸೇರಿದಂತೆ ಎಲ್ಲಾ ಮಾಹಿತಿಗಳ ದಾಖಲೆಯನ್ನು ಹತ್ತಿರದ ಬಿಬಿಎಂಪಿ ಕಚೇರಿಗೆ ಹೋಗಿ ನೀಡಬೇಕು ಹಾಗೇ ಮಾಹಿತಿ ನೀಡದೆ ಹೋದರೆ ಕಟ್ಟಡಗಳ ವಿರುದ್ಧ, ಅವಶ್ಯಕತೆ ಬಿದ್ದಲ್ಲಿ ತೆರವು ಕಾರ್ಯಚರಣೆ ಆರಂಭವಾಗುತ್ತದೆ ಎಂದು ಬಿಬಿಎಂಪಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕರ್ನಾಟಕ ಟಿವಿ- ಬೆಂಗಳೂರು

About The Author