www.karnatakatv.net: ಕೊರೊನಾ ಹಿನ್ನಲೇ ಎಲ್ಲಾ ದೇವಾಲಯಗಳು ಸಂಪೂರ್ಣವಾಗಿ ಬಂದ್ ಆಗಿದ್ದು, ಈಗ ಕೊರೊನಾದಿಂದ ತುಸು ನೆಮ್ಮದಿ ಸಿಕ್ಕಿದ್ದರಿಂದ ಮತ್ತೆ ದೇವಾಲಯಗಳನ್ನು ಓಪೆನ್ ಮಾಡಲಾಗಿದೆ.
2 ವರ್ಷಗಳನಂತರ ಅಧಿದೇವತೆ ಹಾಸನಾಂಬೆ ದೇವಾಲಯ ಓಪೆನ್ ಮಾಡಲಾಗಿದ್ದು ದರ್ಶನಕ್ಕೆ ಭಕ್ತರು ಕಾತುರದಿಂದ ಕಾಯುತ್ತಿದ್ದಾರೆ. ಕೋವಿಡ್ 2 ಡೋಸ್ ಲಸಿಕೆಯಾದವರಿಗೆ ಮಾತ್ರ ದೇವಾಲಯದಲ್ಲಿ ಪ್ರವೇಶಕ್ಕೆ ಅವಕಾಶವನ್ನು ಕಲ್ಪಿಸಲಾಗಿದೆ ಎಂದು ತಿಳಿಸಿದ್ದಾರೆ. ಹಾಸಬಾಂಬೆಯ ವಿಶೇಷ ದರ್ಶನಕ್ಕೆ ಟಿಕೆಟ್ ವ್ಯವಸ್ತೆ ಕಲ್ಪಿಸಿದ್ದು, ವಿಶೇಷ ಪಾಸ್ ವ್ಯವಸ್ಥೆ ಮಾಡಲಾಗಿದೆ 1000 ರೂ, 200ರೂ ವಿಶೇಷ ಟಿಕೆಟ್ ಮೂಲಕ ಅವಕಾಶವನ್ನು ನೀಡಲಾಗಿದೆ ಇಂದಿನಿoದ ಆರಂಭವಾಗಿದ್ದರಿoದ ಇಂದು ಸಾರ್ವಜನಿಕರಿಗೆ ಅವಕಾಶವಿರುವುದಿಲ್ಲ, ನಾಳೆಯಿಂದ ಸಂಪೂರ್ಣವಾಘಿ ಅವಕಾಶಗಳನ್ನು ನೀಡುವುದಾಗಿ ತಿಳಿಸಿದ್ದಾರೆ.
ಆಶ್ವೀಜ ಮಾಸ ಪೌರ್ಣಮಿಯ ನಂತರ ಬರುವ ಗುರುವಾರದಂದು ಹಾಸನಾಂಬೆಯ ದೇವಾಲಯ ತೆರೆಯಲ್ಪಡುತ್ತದೆ. ಸಹಸ್ರ ಸಂಖ್ಯೆಯಲ್ಲಿ ಭಕ್ತಾದಿಗಳು ಅಂದು ದೇವಿಯ ದರ್ಶನ ಪಡೆಯುತ್ತಾರೆ. ಆದಿಶಕ್ತಿಸ್ವರೂಪಿಣಿ ಹಾಸನಾಂಬೆಗೆ ಹಿಂದಿನ ವರುಷ ಹಚ್ಚಿಟ್ಟಿದ್ದ ದೀಪವು ಆರದೇ, ಮುಡಿಸಿದ ಹೂ ಬಾಡದೇ ಹಾಗೂ ನೈವೇದ್ಯಕ್ಕಿಟ್ಟ ಅಕ್ಕಿಯು ಅನ್ನವಾಗಿರುವುದು ಈ ದೇವಿಯ ವಿಶೇಷ ಶಕ್ತಿಯಾಗಿದ್ದು ಇದರಿಂದಾಗಿಯೇ ಊರ-ಪರವೂರುಗಳಿಂದ ಭಕ್ತರು ಬರುತ್ತಾರೆ. ಈ ಬಾರಿ ಇಂದು ಮತ್ತು ನವೆಂಬರ್ 6ರಂದು ಹೊರತುಪಡಿಸಿ ಬೇರೆಲ್ಲಾ ದಿನ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದ್ದಾರೆ.