Thursday, June 19, 2025

Latest Posts

ಅಪ್ಪು ನೆನೆದು ಕಣ್ಣೀರಿಟ್ಟ ರಮ್ಯಾ..!

- Advertisement -

www.karnatakatv.net: ನಟಿ ರಮ್ಯಾ ಮತ್ತು ಪುನೀತ್ ತುಂಬಾ ಒಳ್ಳೆಯ ಫ್ರೆಂಡ್ಸ್ ಆಗಿದ್ದರು. ಇಬ್ಬರೂ ಸೇರಿ ಮೂರು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇಂದು ಕಂಠೀರವ ಸ್ಟೇಡಿಯಂಗೆ ಆಗಮಿಸಿದ ರಮ್ಯಾ ಅಂತಿಮ ದರ್ಶನ ಪಡೆದರು. ಬಳಿಕ ಮಾತನಾಡಿ ಪುನೀತ್ ಜೊತೆಗಿನ ನೆನಪುಗಳನ್ನು ಮೆಲುಕು ಹಾಕಿದರು. ಹಲವು ವರ್ಷಗಳಿಂದ ರಮ್ಯಾ ನಟನೆಯಿಂದ ದೂರ ಉಳಿದುಕೊಂಡಿದ್ದಾರೆ. ತಮ್ಮ ಸಿನಿಮಾದ ಮೂಲಕವೇ ರಮ್ಯಾ ಮತ್ತೆ ಸ್ಯಾಂಡಲ್ ವುಡ್ ಚಿತ್ರರಂಗಕ್ಕೆ ಬರಬೇಕು ಎಂದು ಪುನೀತ್ ಆಸೆಪಟ್ಟಿದ್ದರು ಎಂಬ ವಿಷಯವನ್ನು ಸ್ಯಾಂಡಲ್ ವುಡ್ ಕ್ವೀನ್ ಈಗ ಹೇಳಿಕೊಂಡಿದ್ದಾರೆ.

ಆಕಾಶ್, ಅರಸು ಮತ್ತು ಅಭಿ ಸಿನಿಮಾಗಳಲ್ಲಿ ಇಬ್ಬರು ಜೊತೆಯಾಗಿ ನಟಿಸಿದ್ದರು. `ಅಪ್ಪು ಅವರನ್ನು ಕಳೆದುಕೊಂಡಿರುವುದು ನನಗೆ ತುಂಬ ಬೇಸರ ಆಗುತ್ತಿದೆ. ಅವರು ನನಗೆ ಸಹನಟ ಮಾತ್ರ ಅಲ್ಲ, ಒಳ್ಳೆಯ ಫ್ರೆಂಡ್ ಕೂಡ ಆಗಿದ್ದರು. ನಾನು ಅವರ ಜೊತೆ ಮೂರು ಸಿನಿಮಾ ಮಾಡಿದ್ದೇನೆ. ಅವರ ಬ್ಯಾನರ್ ನಿಂದ ಪ್ರತಿಯೊಂದು ಹೊಸ ಸಿನಿಮಾ ಬಂದಾಗಲೂ ನನಗೆ ಮೊದಲ ಆದ್ಯತೆ ನೀಡುತ್ತಿದ್ದರು. ನಾನು ಸಿನಿಮಾ ಬಿಟ್ಟು ರಾಜಕೀಯಕ್ಕೆ ಹೋದಾಗಲೂ ನನ್ನ ಜೊತೆ ಸಂಪರ್ಕದಲ್ಲಿ ಇದ್ದರು, ಕೇವಲ ಮೂರು ವಾರಗಳ ಹಿಂದೆ ಅಷ್ಟೇ ನಾನು ಮಾತನಾಡಿದ್ದೆ, ಈ ಸಂದರ್ಭದಲ್ಲಿ ಅವರ ಪತ್ನಿ ಅಶ್ವಿನಿಗೆ ಮತ್ತು ಅವರ ಇಡೀ ಕುಟುಂಬಕ್ಕೆ ದೇವರು ದೈರ್ಯ ಕೊಡಲಿ ಅಂತ ಬೇಡಿಕೊಳ್ಳುತ್ತೇನೆ’ ಎಂದು ರಮ್ಯಾ ಹೇಳಿದರು.

- Advertisement -

Latest Posts

Don't Miss