OTT Movie review: ಹೂಂಕಾರ್.. ದೇವಮಾನವನ ಮುಖವಾಡ ಕಳಚುವ ವಿದ್ಯಾರ್ಥಿನಿಯ ಕಥೆ

OTT Movie review: ಹೂಂಕಾರ್.. ದೇವ ಮಾನವ ಅನ್ನೋ ಹೆಸರಿನಲ್ಲಿ ಯಾವ ರೀತಿಯಾಗಿ ಬಡ ಹೆಣ್ಣುಮಕ್ಕಳನ್ನು ಓರ್ವ ವ್ಯಕ್ತಿ ಬಳಸಿಕ“ಳ್ಳುತ್ತಾನೆ ಅನ್ನೋ ಕಥೆಯೇ ಹೂಂಕಾರ್.

ಹಣ, ಪವರ್, ಅಹಂಕಾರ ಇರುವ ಬಾಪ್ಜಿ ಎಂದೇ ಕರೆಸಿಕ“ಳ್ಳುವ ಓರ್ವ ವೃದ್ಧ ಶಕ್ತಿ ನೀಡುವ ಕೆಲಸ ಎಂಬ ಮೂಢನಂಬಿಕೆ ಹೆಸರಲ್ಲಿ ಅವನ ಶಾಲೆಗೆ ಬರುವ ಹೆಣ್ಣು ಮಕ್ಕಳನ್ನು ಲೈಂಗಿಕ ಕ್ರಿಯೆಗೆ ಬಳಸಿಕ“ಳ್ಳುತ್ತಾನೆ.

ಆತ ಮಾಡಿದ್ದು ತಪ್ಪು ಎಂದು ಆ ಹೆಣ್ಣು ಮಕ್ಕಳಿಗೆ ತಿಳಿದಿದ್ದರೂ, ಅವನು ದೇವರೆಂದೇ ಅವರ ಮನೆಯಲ್ಲಿ ಹೇಳಿದ್ದ ಕಾರಣಕ್ಕೆ, ಆ ಹೆಣ್ಣು ಮಕ್ಕಳು ಬಾಪ್ಜಿ ಮಾಡಿದ ತಪ್ಪನ್ನು ಎಲ್ಲಯೂ ಹೇಳುವುದಿಲ್ಲ.

ಬಾಪ್ಜಿ ನಡೆಸುತ್ತಿದ್ದ ಶಾಲೆಗೆ ಹೋಗುತ್ತಿದ್ದ ಆ ಹೆಣ್ಣು ಮಕ್ಕಳು ಅಪ್ಪ-ಅಮ್ಮನನ್ನು ಬಿಟ್ಟು, ಹಾಸ್ಟೇಲ್‌ನಲ್ಲೇ ಇರುತ್ತಿದ್ದರು. ಬಾಪ್ಜಿ ಮಾಡುತ್ತಿದ್ದ ನೀಚ ಕೆಲಸ ಯಾರಿಗೂ ತಿಳಿಯಬಾರದು ಎಂದು ಆತ ಆ ಹೆಣ್ಣು ಮಕ್ಕಳನ್ನು ತಂದೆ ತಾಯಿ ಜತೆ ಮಾತನಾಡಲೂ ಬಿಡುತ್ತಿರಲಿಲ್ಲ.

ಇಂಥ ಪರಿಸ್ಥಿತಿ ಇದ್ದಾಗಲೂ ಓರ್ವ ವಿದ್ಯಾರ್ಥಿನಿ, ಬಾಪ್ಜಿ ನನ್ನ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದಾರೆಂದು ಪೋಲೀಸ್ ಸ್ಟೇಶನ್ ಮೆಟ್ಟಿಲೇರುತ್ತಾಳೆ. ಅವಳ ಮೇಲೆ, ಅವಳ ಅಪ್ಪ-ಅಮ್ಮನ ಮೇಲೆ ದೌರ್ಜನ್ಯ ನಡೆಯುತ್ತದೆ. ಅಪ್ಪನಿಗೆ ಹಣ ನೀಡಿ ಆಸೆ ತೋರಿಸಿ, ಕೇಸ್ ಮುಚ್ಚಿಸಲು ಪ್ರಯತ್ನಿಸುತ್ತಾರೆ.

ಆದರೆ ಮಹಿಳಾ ಪೋಲೀಸ್ ಅಧಿಕಾರಿಯ ಸಹಾಯದಿಂದ ವಿದ್ಯಾರ್ಥಿನಿ ಮೀನು, ತನಗಾಗಿರುವ ಅನ್ಯಾಯದ ವಿರುದ್ಧ ಹೆದರಿಕೆ ಇಲ್ಲದೇ ಹೋರಾಡಲು ಮುಂದಾಗುತ್ತಾಳೆ. ಹೀಗೆ ಕಥೆ ಸಾಗುತ್ತ ಹೋಗುತ್ತದೆ.

ಹೂಂಕಾರ್ 1 ವೆಬ್ ಸಿರೀಸ್ ಆಗಿದ್ದು, 6 ಎಪಿಸೋಡ್ ಇದೆ. ಕನ್ನಡದಲ್ಲೂ ಈ ವೆಬ್ ಸಿರೀಸ್ ಲಭ್ಯವಿದೆ. ಅನೀತ್ ಕೌರ ದೌರ್ಜನ್ಯಕ್ಕ“ಳಗಾದ ವಿದ್ಯಾರ್ಥಿನಿಯ ಪಾತ್ರ ಮಾಡಿದ್ದಾಳೆ. ದಂಗಲ್ ಮೂವಿ ಖ್ಯಾತಿಯ ಸನಾ ಶೇಖ್ ಪೋಲೀಸ್ ಅಧಿಕಾರಿ ಪಾತ್ರ ನಿರ್ವಹಿಸಿದ್ದಾರೆ.

ಅರ್ಜುನ್ ಮಾಥುರ್ ಅಮಿತಾಬ್ ಸಿನ್ಹಾ ಎನ್ನುವ ಪತ್ರಕರ್ತನ ಪಾತ್ರ ನಿರ್ವಹಿಸಿದ್ದಾರೆ. ರಘುವೀರ್ ಯಾದವ್ ಬಾಪ್ಜಿ ಪಾತ್ರ ನಿರ್ವಹಿಸಿದ್ದಾರೆ. ಜೀಯೋ ಹಾಟ್‌ಸ್ಟಾರ್‌ನಲ್ಲಿ ಈ ವೆಬ್‌ಸಿರೀಸ್ ಲಭ್ಯವಿದೆ.

About The Author