Saturday, July 5, 2025

Latest Posts

ನಿಮ್ಮ ಮನೆಯಂಗಳದಲ್ಲಿ ಈ ಗಿಡಗಳನ್ನು ಬೆಳೆಸಲೇಬೇಡಿ…

- Advertisement -

ಮನೆಯ ಗಾರ್ಡನ್‌ನಲ್ಲಿ ಚೆಂದ ಚೆಂದದ ಗಿಡ ಮರಗಳಿದ್ದರೆ, ಮನೆಯ ಅಂದ ಇನ್ನೂ ಹೆಚ್ಚುತ್ತದೆ. ಮರ ಗಿಡಗಳಲ್ಲಿ ಎರಡು ವಿಧಗಳಿವೆ. ಒಂದು ಗಿಡ ಮನೆಯ ಅದೃಷ್ಟವನ್ನ ಹೆಚ್ಚಿಸಿದ್ರೆ, ಇನ್ನೊಂದು ರೀತಿಯ ಗಿಡ ಮನೆಯಲ್ಲಿ ನಕಾರಾತ್ಮಕ ಶಕ್ತಿಯ ಪ್ರಭಾವ ಹೆಚ್ಚುವಂತೆ ಮಾಡುತ್ತದೆ. ಯಾವುದು ಅಂಥ ನಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುವ ಗಿಡ ಅನ್ನೋ ಬಗ್ಗೆ ತಿಳಿಯೋಣ ಬನ್ನಿ..

ಮೊದಲನೆಯದಾಗಿ, ಪಾಪಸ್‌ ಕಳ್ಳಿಗಿಡ. ಪಾಪಸ್ ಕಳ್ಳಿ ಗಿಡ ರಸ್ತೆಗಳ ಅಕ್ಕಪಕ್ಕದಲ್ಲಿ ಬೆಳೆಯುವ ಗಿಡ. ಇದು ಮುಳ್ಳಿನಿಂದ ಕೂಡಿದ್ದರೂ, ನೋಡಲು ಚೆಂದ ಕಾಣುತ್ತದೆ. ಹಾಗಂತ ಇದನ್ನ ಮನೆಯಂಗಳದಲ್ಲಿ ನೆಡಲಾಗುವುದಿಲ್ಲ. ಈ ಗಿಡ ನೆಡುವುದರಿಂದ ಯಾವುದೇ ಪ್ರಯೋಜನವಾಗುವುದಿಲ್ಲ. ಮತ್ತು ಇದು ನಕಾರಾತ್ಮಕ ಶಕ್ತಿಯಿಂದ ಕೂಡಿರುತ್ತದೆ.

ಎರಡನೇಯದಾಗಿ ಹುಣಸೆಹಣ್ಣಿನ ಮರ. ನಮ್ಮ ಹಿರಿಯರು ರಾತ್ರಿ ಹೊತ್ತು ಹುಣಸೆ ಹಣ್ಣಿನ ಮರದ ಕೆಳಗೆ ಹೋಗಬಾರದು. ಅದರಲ್ಲಿ ಪಿಶಾಚಿಗಳು ವಾಸ ಮಾಡ್ತವೆ ಅಂತಾ ಹೇಳ್ತಿದ್ರು. ಯಾಕಂದ್ರೆ ಅದರಲ್ಲಿ ನಕಾರಾತ್ಮಕ ಶಕ್ತಿ ಇರುತ್ತದೆ. ಅದು ನಮ್ಮ ದೇಹಕ್ಕೆ ಸೇರುತ್ತದೆ ಎಂದು. ಅದೇ ರೀತಿ ಹುಣಸೆ ಮರವನ್ನು ಹೆಚ್ಚಾಗಿ ಯಾರು ತಮ್ಮ ಮನೆಯಲ್ಲಿ ನೆಡುವುದಿಲ್ಲ. ಅದನ್ನು ರಸ್ತೆ ಬದಿ ನೆಡಲಾಗುತ್ತದೆ.

ಮೂರನೇಯದಾಗಿ ಮೆಹಂದಿ ಗಿಡ. ಮೆಹಂದಿ ಎಲೆಯನ್ನ ರುಬ್ಬಿ ಪೇಸ್ಟ್ ಮಾಡಿ ಕೆಲವರು ಕೈಗೆ ಗೋರಂಟಿ ಹಚ್ಚಿದರೆ, ಇನ್ನು ಕೆಲವರು ಕೂದಲು ಚೆಂದಗಾಣಿಸಲು ಹೇರ್ ಪ್ಯಾಕ್ ಹಾಕ್ತಾರೆ. ಆದ್ರೆ ಗೋರಂಟಿ ಗಿಡವನ್ನು ಮನೆಯ ಸುತ್ತ ಮುತ್ತಲು ಬೆಳೆಸಬಾರದು. ಇದರಿಂದ ಮನೆ ಉದ್ಧಾರವಾಗುವುದಿಲ್ಲ. ನೀವೆಷ್ಟೇ ದುಡಿದರೂ ಹಣ ನೀರಿನಂತೆ ಹರಿದು ಹೋಗುತ್ತದೆ.

ಇನ್ನು ನಿಮ್ಮ ಮನೆಯಂಗಳದಲ್ಲಿ ಯಾವುದಾದರೂ ಮರ ಅಥವಾ ಗಿಡ ಒಣಗಿದ್ದರೆ, ಅದನ್ನ ತೆಗೆದು ಬಿಸಾಕಿ. ಯಾಕಂದ್ರೆ ಒಣಗಿನ ಮರ ಗಿಡಗಳಿಂದರೂ ನಕಾರಾತ್ಮಕ ಶಕ್ತಿ ಮನೆ ಸೇರುತ್ತದೆ. ಹಾಗಾಗಿ ಒಣಗಿದ ಗಿಡ ಮರಗಳನ್ನು ಕತ್ತರಿಸುವುದೇ ಉತ್ತಮ.

- Advertisement -

Latest Posts

Don't Miss