ಚಾಣಕ್ಯರು ಜೀವನದ ಬಗ್ಗೆ ಹಲವು ನೀತಿಗಳನ್ನು ಹೇಳಿದ್ದಾರೆ. ಗಂಡ ಹೆಂಡತಿ ಹೇಗಿರಬೇಕು..? ಎಂಥ ಹೆಣ್ಣಿನ ಸಂಗ ಮಾಡಬಾರದು..? ಎಂಥ ಜಾಗದಲ್ಲಿ ಉಳಿಯಬಾರದು..? ಜೀವನಕ್ಕೆ ವಿದ್ಯೆ ಎಷ್ಟು ಮುಖ್ಯ..? ಈ ಎಲ್ಲಾ ವಿಷಯಗಳ ಬಗ್ಗೆ ಚಾಣಕ್ಯರು ತಮ್ಮ ಚಾಣಕ್ಯ ನೀತಿಯಲ್ಲಿ ಹೇಳಿದ್ದಾರೆ. ಅದೇ ರೀತಿ ಹಣದ ಸಮಸ್ಯೆ ಎದುರಿಸಬಾರದು ಅಂದ್ರೆ ಏನು ಮಾಡಬೇಕು..? ಯಾವ ತಪ್ಪು ಮಾಡಿದ್ದಲ್ಲಿ ನಾವು ಹಣದ ಸಮಸ್ಯೆ ಎದುರಿಸಬೇಕಾಗುತ್ತದೆ ಅನ್ನೋ ಬಗ್ಗೆ ಚಾಣಕ್ಯರು, ತಮ್ಮ ಚಾಣಕ್ಯ ನೀತಿಯಲ್ಲಿ ಹೇಳಿದ್ದಾರೆ. ಆ ಬಗ್ಗೆ ತಿಳಿಯೋಣ ಬನ್ನಿ..
ಮನುಷ್ಯ ಜೀವನ ಮಾಡಲು ಎಲ್ಲಕ್ಕಿಂತ ಮುಖ್ಯವಾಗಿ ಬೇಕಾಗಿರೋದು ಹಣ. ಹಣ ನೋಡಿದ್ರೆ ಹೆಣಾನೂ ಬಾಯಿ ಬಿಡತ್ತೆ. ಹಣ ಇಲ್ಲದವನ್ನ ನಾಯಿನೂ ಮೂಸಲ್ಲ. ಹೀಗೆ ಹಣದ ಬಗ್ಗೆ ಅನೇಕ ಮಾತುಗಳು ಇದೆ. ಇದು ನಿಜಾನೂ ಹೌದು. ನೀವು ನೋಡಿರಬಹುದು. ಶ್ರೀಮಂತನಿಗೆ ಹೆಚ್ಚು ಸ್ನೇಹಿತರು, ಬಂಧು ಬಳಗದವರು ಇರ್ತಾರೆ. ಅದೇ ಬಡವನಿಗಾದ್ರೆ ಕೆಲವೇ ಕೆಲವು ಸ್ನೇಹಿತರು, ಎಣಿಕೆಯಷ್ಟು ಬಂಧುಗಳು ಇರ್ತಾರೆ. ಹಾಗಾಗಿ ಜೀವನದಲ್‌ಲಿ ಹಣ ಅನ್ನೋದು ತುಂಬಾನೇ ಮುಖ್ಯ. ಆದ್ರೆ ಅದು ನಿಯತ್ತಾಗಿ ದುಡಿದಿರೋದು ಆಗಿರಬೇಕು ಅಂತಾರೆ ಚಾಣಕ್ಯರು.
ಅದೇ ರೀತಿ ಇರುವ ದುಡ್ಡನ್ನು ಬುದ್ಧಿವಂತಿಕೆಯಿಂದ ಖರ್ಚು ಮಾಡಿ, ಉಳಿತಾಯವೂ ಮಾಡಲು ಕಲಿಯುವವನು ಜೀವನದಲ್ಲಿ ಉದ್ಧಾರವಾಗುತ್ತಾನೆ. ಕೆಲವರು ಹೇಗೆ ದುಡಿಯುತ್ತಾರೋ, ಹಾಗೆ ಹಣ ಖರ್ಚು ಮಾಡುತ್ತಾರೆ. ತಿಂಗಳ ಕೊನೆ ದಿನಗಳಲ್ಲಿ ಕೈಯಲ್ಲಿ ಹತ್ತು ರೂಪಾಯಿ ಕೂಡ ಇಲ್ಲದಿರುವ ಪರಿಸ್ಥಿತಿ ಬರುತ್ತದೆ. ಆ ರೀತಿಯ ಜೀವನ ಮಾಡಿದ್ರೆ ಖಂಡಿತ ಗಳಿಕೆಯೂ ಆಗುವುದಿಲ್ಲ. ಉಳಿತಾಯವೂ ಆಗುವುದಿಲ್ಲ. ಹಾಗಾಗಿ ನಾವು 10 ರೂಪಾಯಿ ದುಡಿದರೂ 3ರಿಂದ 4 ರೂಪಾಯಿಯಾದರೂ ಉಳಿತಾಯ ಮಾಡುವುದನ್ನು ಕಲಿಯಬೇಕು. ಹಾಗಿದ್ದಲ್ಲಿ ಮಾತ್ರ ನಮ್ಮ ಭವಿಷ್ಯ ಉತ್ತಮವಾಗಿರಲು ಸಾಧ್ಯ ಎನ್ನುತ್ತಾರೆ ಚಾಣಕ್ಯರು.

