Friday, June 20, 2025

Latest Posts

ಲೊಗೊಗಳ ನಿಜವಾದ ಅರ್ಥವೇನು ಗೊತ್ತಾ..?

- Advertisement -

ನಾವು ಬಳಸುವ ಪ್ರತಿಯೊಂದು ಬ್ರ್ಯಾಂಡೆಡ್ ವಸ್ತುವಿಗೂ ಲೊಗೋ ಇರುತ್ತದೆ. ಅದರಲ್ಲಿ ಇವತ್ತು ನಾವು ಕೆಲ ಲೊಗೊಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ.

ಈಗ ಎಲ್ಲಿ ನೋಡಿದರಲ್ಲಿ ಲೊಗೊಗಳದ್ದೇ ಭರಾಟೆ. ಮೊಬೈಲ್ ತೆಗೆದುಕೊಂಡರೆ ಅದರ ಲೋಗೋ. ಆ್ಯಪ್ ಓಪೆನ್ ಮಾಡಿದ್ರೆ ಅದರ ಲೊಗೊ. ಶಾಪಿಂಗ್ ಹೋದಾಗ ಅಲ್ಲಿ ಏನಾದರೂ ಖರೀದಿ ಮಾಡಿದರೆ ಅದರ ಲೊಗೊ. ಹೀಗೆ ಎಲ್ಲಿ ನೋಡಿದರಲ್ಲಿ ನಮಗೆ ಅನೇಕ ಲೊಗೊ ಕಾಣ ಸಿಗುತ್ತದೆ. ಇಂಥ ಲೊಗೊಗಳಲ್ಲಿ ಕೆಲ ಲೊಗೊಗಳ ಅರ್ಥವೇನು ಅನ್ನೋ ಬಗ್ಗೆ ನಾವಿವತ್ತು ತಿಳಿಯೋಣ..

ಎಸ್‌ಬಿಐ ಲೊಗೊ: ಎಸ್‌ಬಿಐ.. ಇದು ಭಾರತದ ಪ್ರತಿಷ್ಠಿತ ಬ್ಯಾಂಕ್. ಈ ಬ್ಯಾಂಕ್‌ ಲೊಗೊದ ಅರ್ಥವೇನೆಂದರೆ ರಕ್ಷಣೆ . ಎಸ್‌ಬಿಐನ ಹಳೆಯ ಲೊಗೊ ನಾಣ್ಯದ ರೀತಿ ಇತ್ತು. ಆಲದ ಮರದ ಚಿತ್ರವಿದ್ದು ಅದರ ಸುತ್ತಲೂ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅಂತಾ ಬರೆದಿತ್ತು. ನಂತರ ಹೊಸ ಲೊಗೊ ತರಲಾಯಿತು. ಈ ಲೊಗೊದಲ್ಲಿ ಕಾಣ ಸಿಗುವ ಚಿತ್ರ ಸೇಫ್ಟಿ ಮತ್ತು ಸೆಕ್ಯೂರಿಟಿಯನ್ನು ಸೂಚಿಸುತ್ತದೆ. ನೀವು ಎಸ್‌ಬಿಐನಲ್ಲಿ ಹಣವನ್ನಿರಿಸಿದರೆ, ನಿಮ್ಮ ಹಣ ಸೇಫ್ ಆಗಿರುತ್ತದೆ ಅನ್ನೋದು ಇದರ ಅರ್ಥವಾಗಿದೆ.

ಅಮೇಜಾನ್(amazon): ಅಮೆಜಾನ್‌ನಲ್ಲಿ ನಾವು ನೀವೆಲ್ಲ ಶಾಪಿಂಗ್ ಮಾಡ್ತಾನೇ ಇರ್ತೀವಿ. ಆದ್ರೆ ಈ ಲೊಗೊದ ಅರ್ಥವೇನು ಅನ್ನೋದು ಸುಮಾರು ಜನರಿಗೆ ಗೊತ್ತಿಲ್ಲ. ಅಮೇಜಾನ್ ಲೊಗೊದಲ್ಲಿ ಬರುವ ಬಾಣದ ಗುರುತು, ಈ ಆ್ಯಪ್‌ನಲ್ಲಿ ಎ ಟೂ ಜೆಡ್ ವಸ್ತುಗಳು ಸಿಗುತ್ತದೆ ಎಂದು ಸೂಚಿಸುತ್ತದೆ. ಅದಕ್ಕೆ ಎ ಮತ್ತು ಜೆಡ್‌ ಸೇರುವಂತೆ ಬಾಣದ ಗುರುತನ್ನು ಇರಿಸಲಾಗಿದೆ.

ಹ್ಯುಂಡಾಯ್: ಹ್ಯುಂಡಾಯ್ ಕಂಪನಿಯ ಲೊಗೊವನ್ನ ನೀವು ನೋಡಿರಬಹುದು. ಇಂಗ್ಲಿಷ್ ಲೆಟರ್ ಆಗಿರುವ ಹೆಚ್ ಅಕ್ಷರದಂತೆ ಈ ಲೊಗೊ ಇದೆ. ಆದ್ರೆ ಈ ಲೊಗೊದ ಅರ್ಥವೇನಂದ್ರೆ ಇದು ಇಬ್ಬರು ವ್ಯಕ್ತಿಗಳು ಕೈ ಕುಲುಕುತ್ತಿರುವ ಚಿತ್ರವಾಗಿದೆ.

ಅಡಿಡಾಸ್: ಭಾರತದಲ್ಲಿ ಬಳಸುವ ಪ್ರತಿಷ್ಠಿತ ಬ್ರ್ಯಾಂಡೆಡ್ ಕಂಪನಿಗಳಲ್ಲಿ ಅಡಿಡಾಸ್ ಕಂಪನಿ ಕೂಡಾ ಒಂದು. ಅಡಿಡಾಸ್ ಶೂಸ್, ಮಾಸ್ಕ್, ಬ್ಯಾಗ್, ಟೀ ಶರ್ಟ್‌, ಪ್ಯಾಂಟ್ ಹೀಗೆ ಉತ್ತಮ ಕ್ವಾಲಿಟಿಯ ವಸ್ತುಗಳನ್ನು ಈ ಕಂಪನಿ ಸೇಲ್ ಮಾಡುತ್ತದೆ. ಈ ಲೊಗೊದ ಅರ್ಥವೇನೆಂದರೆ ಶಿಖರ ಎಂದರ್ಥ. ಶಿಖರ ಎಂದರೆ ಚಾಲೆಂಜ್ ಎಂಬುದಾಗಿ  ಹೇಳುವ ಅಡಿಡಾಸ್, ಈ ಶಿಖರದ ಮಧ್ಯೆ ಮೂರು ಗೆರೆ ಎಳೆದಿದೆ.

ಆ್ಯಪಲ್: ಐ ಫೋನ್ ಲೊಗೊವಾದ ಆ್ಯಪಲ್ ಎಲ್ಲರ ಗಮನ ಸೆಳೆಯುವ ಲೊಗೊವಾಗಿದೆ. ಆ್ಯಪಲ್ ಲೊಗೊನಲ್ಲಿ ಅರ್ಧ ತಿಂದ ಆ್ಯಪಲ್ ಚಿತ್ರ ಯಾಕಿದೆ ಅನ್ನೋದು ಹಲವರ ಡೌಟ್ ಆಗಿದೆ. ಈ ಲೊಗೊವನ್ನ ಡಿಸೈನ್ ಮಾಡಿದ ಗ್ರಾಫಿಕ್ ಡಿಸೈನರ್ 5ರಿಂದ ಆರು ಬಾರಿ ಬೇರೆ ಬೇರೆ ರೀತಿಯ ಆ್ಯಪಲ್ ಚಿತ್ರ ಡಿಸೈನ್ ಮಾಡಿದ್ದರಂತೆ. ಆದ್ರೆ ಅದ್ಯಾವುದು ಸೆಟ್ ಆಗಲಿಲ್ಲ. ಕೊನೆಗೆ ಅರ್ಧ ಆ್ಯಪಲ್ ತಿಂದು ಟೇಬಲ್ ಮೇಲೆ ಇಟ್ಟಾಗ ಯಾವ ರೀತಿ ಕಾಣತ್ತೆ ಅಂತಾ ನೋಡಿದಾಗ. ಆ ಡಿಸೈನ್ ಅವರಿಗೆ ಇಷ್ಟವಾಯಿತಂತೆ. ಕೊನೆಗೆ ಅದೇ ಡಿಸೈನ್ ಫೈನಲ್ ಮಾಡಿದರು.

- Advertisement -

Latest Posts

Don't Miss