www.karnatakatv.net:ಬಹುನಿರೀಕ್ಷೆಯ ಅಲ್ಲು ಅರ್ಜುನ್ ನಟನೆಯ ಸಿನಿಮಾ ‘ಪುಷ್ಪ’ ಇಂದು (ಡಿಸೆಂಬರ್ 17) ವಿಶ್ವದಾದ್ಯಂತ ರಿಲೀಸ್ ಆಗಿದೆ. ಈ ಮಧ್ಯೆ ದಕ್ಷಿಣ ಭಾರತದಲ್ಲಿ ‘ಪುಷ್ಪ’ ವಿರುದ್ಧ ಅಪಸ್ವರಗಳು ಎದ್ದಿವೆ, ಅದೇಷ್ಟೋ ಅಭಿಮಾನಿಗಳು ಬೇಸರವಾಗಿದ್ದಾರೆ. ಏಕೆಂದರೆ ಡಬ್ ಆದರೂ ಸಹಾ ಕೇವಲ 3 ಚಿತ್ರಮಂದಿರಗಳಲ್ಲಿ ರಿಲೀಸ್ ಆಗಿರುವುದು ಹಾಗೂ ಕನ್ನಡ ಆವೃತ್ತಿಯ ಟಿಕೇಟ್ ಬುಕ್ ಮಾಡಿದ್ದರು ಸಹಾ ತೇಟರ್‌ನಲ್ಲಿ ತೆಲುಗು ಭಾಷೆಯಲ್ಲಿ ಚಿತ್ರ ಪ್ರಸಾರವಾಗಿರುವಂತದ್ದು. ಇನ್ನೂ ಮಲಯಾಳಂ ಆವೃತ್ತಿಯ ಪುಷ್ಪ ಸೆನ್ಸಾರ್ ಪ್ರಕ್ರಿಯೇ ಪೂರ್ಣಗೊಂಡಿಲ್ಲ. ಆಗಾಗಿ ಮಲಯಾಳಂ ಆವೃತ್ತಿಯಲ್ಲೂ ಪುಷ್ಪ ತೆರೆಕಂಡಿಲ್ಲ.
ಕನ್ನಡ ಆವೃತ್ತಿಯ ಪುಷ್ಪ ಕೇವಲ 3 ಚಿತ್ರಮಂದಿಗಳಲ್ಲಿ ತೆರೆಕಾಣುತ್ತಿರುವುದನ್ನು ವಿರೋದಿಸಿದ್ಧ ಜನರು, ಈಗಾಗಲೇ ಕರ್ನಾಟಕದಲ್ಲಿ ಬಾಯ್‌ಕಾಟ್ ‘ಪುಷ್ಪ’ ಅಭಿಯಾನವನ್ನು ಆರಂಭಿಸಿದ್ದಾರೆ. ಇದರೊಂದಿಗೆ ಮಲಯಾಳಂನಲ್ಲೂ ‘ಪುಷ್ಪ’ ಸಿನಿಮಾ ಬಿಡುಗಡೆಯಾಗದೆ ಇರುವುದರಿಂದ ಕೇರಳದಲ್ಲೂ ಇದೇ ರೀತಿಯಾ ಮಾತುಗಳು ಕೇಳಿಬರುತ್ತಿವೆ.
ಪುಷ್ಪ ಪ್ಯಾನ್ ಇಂಡಿಯಾ ಸಿನಿಮಾವಾಗಿ ತೆರೆಕಾಣುವುದರಲ್ಲಿ ವಿಫಲವಾಗಿದೆ. ಅಲ್ಲು ಅರ್ಜುನ್ ಸಿನಿಮಾ ಕನ್ನಡಕ್ಕೆ ಡಬ್ ಆಗಿದ್ದರೂ ಬಿಡುಗಡೆಯಾಗುತ್ತಿರುವುದು ಮಾತ್ರ ತೆಲುಗು ವರ್ಷನ್‌ನಲ್ಲಿ. ಇನ್ನೊಂದು ಕಡೆ ಮಲಯಾಳಂ ಭಾಷೆಯಲ್ಲೂ ‘ಪುಷ್ಪ’ ಸಿನಿಮಾ ಸಮಯಕ್ಕೆ ಸರಿಯಾಗಿ ರಿಲೀಸ್ ಆಗುತ್ತಿಲ್ಲ. ಹೀಗಾಗಿ ಎರಡು ರಾಜ್ಯಗಳಲ್ಲಿ ‘ಪುಷ್ಪ’ ಬಿಡುಗಡೆ ವಿಚಾರದಲ್ಲಿ ದೊಡ್ಡ ಎಡವಟ್ಟು ಮಾಡಿಕೊಂಡಿದೆ.
ಮಲಯಾಳಂನಲ್ಲಿ ಡಬ್ ಆದ ‘ಪುಷ್ಪ’ ಸಿನಿಮಾ ರಿಲೀಸ್ ಮಾಡಲು ಚಿತ್ರತಂಡ ಸೋತಿದೆ. ಹೀಗಾಗಿ ಮೊದಲ ದಿನವೇ ‘ಪುಷ್ಪ’ ಮಲಯಾಳಂನಲ್ಲಿ ರಿಲೀಸ್ ಆಗುತ್ತಿಲ್ಲ. ಬದಲಾಗಿ, ತಮಿಳು ಭಾಷೆಯಲ್ಲಿ ‘ಪುಷ್ಪ’ ಸಿನಿಮಾವನ್ನು ರಿಲೀಸ್ ಮಾಡಿದೆ ಚಿತ್ರತಂಡ. ಕನ್ನಡದ ಬಳಿಕ ಮಲಯಾಳಂನಲ್ಲೂ ಕೂಡ ಈ ಪ್ಯಾನ್ ಇಂಡಿಯಾ ಸಿನಿಮಾ ರಿಲೀಸ್ ಆಗಿಲ್ಲ.
ಕೇರಳದಲ್ಲಿ ‘ಪುಷ್ಪ’ದ ಮಲಯಾಳಂ ಅವತರಣಿಕೆ ಬಿಡುಗಡೆ ತಡವಾಗುತ್ತಿದೆ. ಸರಿಯಾದ ಸಮಯಕ್ಕೆ ಮಲಯಾಳಂಗೆ ಡಬ್ ಆದ ‘ಪುಷ್ಪ’ವನ್ನು ತಲುಪಿಸಲು ಚಿತ್ರತಂಡದಿAದ ಸಾಧ್ಯವಾಗಿಲ್ಲ. ಹೀಗಾಗಿ ಡಿಸೆಂಬರ್ 17ರಂದು ಕೇವಲ ತಮಿಳು ವರ್ಷನ್ ರಿಲೀಸ್ ಮಾಡಿಲಾಗಿದೆ. ಒಂದು ದಿನ ತಡವಾಗಿ ಅಂದರೆ, ಡಿಸೆಂಬರ್ 18ರಂದು ಮಲಯಾಳಂ ‘ಪುಷ್ಪ’ವನ್ನು ಬಿಡುಗಡೆ ಮಾಡಲಾಗುತ್ತದೆ. ಈ ವಿಚಾರಕ್ಕೆ ಅಲ್ಲು ಅರ್ಜುನ್ ಮತ್ತು ಚಿತ್ರತಂಡ ಅಭಿಮಾನಿಗಳಿಗೆ ಕ್ಷಮೆಯನ್ನೂ ಕೇಳಿದೆ.
ಅತ್ತಾ ಮಲಯಾಳಂ ಭಾಷೆಗೆ ಡಬ್ ಆದ ‘ಪುಷ್ಪ’ ಸಿನಿಮಾ ಬಿಡುಗಡೆಯಲ್ಲಾದ ಗೊಂದಲಗಳ ಬೆನ್ನಲೇ ಅಲ್ಲು ಅರ್ಜುನ್ ಮತ್ತು ಚಿತ್ರತಂಡ, ಅಭಿಮಾನಿಗಳಿಗೆ ಕ್ಷಮೆ ಕೋರಿದೆ. ಇತ್ತ ಕರ್ನಾಟಕದಲ್ಲಿ ಕನ್ನಡ ಭಾಷೆಗೆ ಡಬ್ ಆದ ಪುಷ್ಪ ಸಿನಿಮಾವನ್ನು ಕೇವಲ ಹೆಸರಿಗಷ್ಟೆ ಬಿಡುಗಡೆ ಮಾಡಿದೆ, ಆದರೆ ಇದ್ದ 3 ಚಿತ್ರಮಂದಿರಗಳಲ್ಲೂ ಸರಿಯಾಗಿ ಕನ್ನಡ ಆವೃತ್ತಿ ಬಿಡುಗಡೆಯಾಗಿಲ್ಲಾ. ಹೀಗಾಗಿ ಕನ್ನಡಿಗರು ಆಕ್ರೋಶ ಹೊರಹಾಕಿದ್ದರು. ಆದರೂ, ಕನ್ನಡದ ಸಿನಿಪ್ರಿಯರಿಗೆ ಕ್ಷಮೆ ಕೇಳಲು ಮುಂದೆ ಬಂದಿಲ್ಲ ಚಿತ್ರತಂಡ. ಕನ್ನಡದಲ್ಲಿ ‘ಪುಷ್ಪ’ ಯಾಕೆ ಬಿಡುಗಡೆಯಾಗುತ್ತಿಲ್ಲ ಎನ್ನುವುದನ್ನು ಸ್ಪಷ್ಟಪಡಿಸಿಲ್ಲ ಚಿತ್ರತಂಡ.
ಕನ್ನಡದಲ್ಲಿ ತೆರೆಕಾಣುತ್ತಿಲ್ಲಾ ಎಂಬ ಬೇಸರ ಒಂದುಕಡೆಯಾದರೆ, ಟಿಕೇಟ್‌ದರ ಧುಬಾರಿಯಾಗಿರುವುದು. ಆಂಧ್ರ,ತೆಲoಗಾಣದಲ್ಲೇ ಗರಿಷ್ಟವೆಂದರು 300-400ರೂ ಟಿಕೇಟ್ ದರವಿದೆ ಆದರೆ ಕರ್ನಾಟಕದಲ್ಲಿ 1000ರೂ ವರೆಗೂ ಟಿಕೇಟ್‌ದರ ತಲುಪಿದೆ. ಒಟ್ಟಾರೆ ಪುಷ್ಪ ನೋಡಲು ಕಾಯುತ್ತಿದ್ದ ಕನ್ನಡಿಗರಿಗೆ ಬೇಸರವಾಗಿರುವುದು ಕಂಡಿತ.


