ಶ್ರೀಕೃಷ್ಣ ಮಹಾಭಾರತ ಕಾಲದಲ್ಲಿಯೇ ಕಲಿಯುಗದಲ್ಲಿ ಜನರು ಹೇಗಿರುತ್ತಾರೆ. ಆ ಕಾಲದಲ್ಲಿ ಏನೇನಾಗುತ್ತದೆ ಎಂಬ ಬಗ್ಗೆ ಹೇಳಿದ್ದಾರೆ. ಅರ್ಜುನನಿಗೆ ಗೀತೆಯ ಸಾರವನ್ನು ಹೇಳಿರುವ ಕೃಷ್ಣ, ಕಲಿಯುಗದ ಸತ್ಯವನ್ನೂ ಹೇಳಿದ್ದಾನೆ. ಪಾಂಡವರಿಗೆ ಕಲಿಯುಗದ ಬಗ್ಗೆ ತಿಳಿಯುವ ಆಸೆ ಇತ್ತಂತೆ. ಹಾಗಾಗಿ ಕೃಷ್ಣ ಪಾಂಡವರಿಗೆ ಕಲಿಯುಗದ ಸತ್ಯವನ್ನು ಹೇಳಿದ್ದಾನೆ. ಆ ಬಗ್ಗೆ ಮತ್ತಷ್ಟು ಮಾಹಿತಿಯನ್ನ ತಿಳಿಯೋಣ ಬನ್ನಿ..
ಪಾಂಡವರು ಕೃಷ್ಣನ ಬಳಿ ಕಲಿಯುಗದ ಸತ್ಯ ಕೇಳಿದಾಗ, ಪಾಂಡವರನ್ನು ಕುರಿತು ಕೃಷ್ಣ, ನೀರು ಕಾಡಿಗೆ ಹೋಗಿ ಬನ್ನಿ. ಮತ್ತು ಅಲ್ಲಿ ಏನೇನಾಯಿತು ಎಂದು ನನಗೆ ವಿಸ್ತಾರವಾಗಿ ಹೇಳಿ ಎಂದು ಕೇಳಿದ. ಪಾಂಡವರು ಕಾಡಿಗೆ ಹೋಗಿ ಬಂದರು. ಯುಧಿಷ್ಟಿರ ತಾನು ಎರಡು ಸೊಂಡಿಲ ಆನೆ ನೋಡಿದೆ ಎಂದು ಹೇಳಿದ. ಆಗ ಕೃಷ್ಣ, ಕಲಿಯುಗದಲ್ಲೂ ಹೀಗೆ, ಎರಡು ರೀತಿಯ ಮನೋಭಾವವುಳ್ಳ ಜನ, ಆಳ್ವಿಕೆ ಮಾಡುತ್ತಾರೆ. ಒಂದನ್ನು ಹೇಳುತ್ತಾರೆ ಮತ್ತೊಂದನ್ನು ಮಾಡುತ್ತಾರೆ ಎಂದು.
ತಾನು ದನ ಮತ್ತು ಕರುವನ್ನ ಕಂಡೆ. ಆ ದನ ತನ್ನ ಕರುವನ್ನ ನೆಕ್ಕುತ್ತಿತ್ತು, ದನ ನೆಕ್ಕು ರಭಸಕ್ಕೆ ಕರುವಿನ ಕುತ್ತಿಗೆಯಿಂದ ರಕ್ತವಿಳಿಯುತ್ತಿತ್ತು ಎಂದು ಭೀಮ ಹೇಳಿದ,. ಆಗ ಕೃಷ್ಣ, ಕಲಿಯುಗದಲ್ಲೂ ತಂದೆ ತಾಯಿ ಮಕ್ಕಳನ್ನೂ ಅತೀ ಪ್ರೀತಿಯಿಂದ ಸಾಕುವರು. ಮತ್ತು ತಮ್ಮ ಬಳಿ ಇರುವಂತೆ ಪ್ರೀತಿಯಿಂದ ಕಟ್ಟಿ ಹಾಕುವರು. ಈ ರೀತಿ ಕಟ್ಟಿ ಹಾಕಿದಾಗ, ಅವರ ವಿಕಾಸ ನಿಲ್ಲುತ್ತದೆ. ಅವರು ತಂದೆ ತಾಯಿಯ ಮೇಲೆ ಅವಲಂಬಿತರಾಗುತ್ತಾರೆ ವಿನಃ, ತಮ್ಮ ಜೀವನ ರೂಪಿಸಿಕೊಳ್ಳುವಲ್ಲಿ ಸಫಲರಾಗುವುದಿಲ್ಲ. ಮತ್ತು ವಿವಾಹವಾಗುವ ತನಕವಷ್ಟೇ ಅವರು ತಂದೆ ತಾಯಿಯರ ಸ್ವತ್ತಾಗಿರುತ್ತಾರೆ. ನಂತರ ತಂದೆ ತಾಯಿಯ ಬಗ್ಗೆ ಅವರಿಗೆ ಗಮನವಿರುವುದಿಲ್ಲ ಎಂದು ಹೇಳುತ್ತಾನೆ.
ಇನ್ನು ಅರ್ಜುನ, ನಾನೊಂದು ಪಕ್ಷಿ ನೋಡಿದೆ. ಅದರ ರೆಕ್ಕೆಯ ಮೇಲೆ ವೇದದ ಬಗ್ಗೆ ಬರೆದಿತ್ತು. ಆದ್ರೆ ಆ ಪಕ್ಷಿ, ಮನುಷ್ಯನ ಮಾಂಸವನ್ನು ತಿನ್ನುತ್ತಿತ್ತು ಎಂದು ಹೇಳುತ್ತಾನೆ. ಆಗ ಕೃಷ್ಣ, ಕಲಿಯುಗದಲ್ಲಿ ಇಂಥವರ ಸಂಖ್ಯೆ ಹೆಚ್ಚಿರುತ್ತದೆ. ಜನ ವಿದ್ಯಾವಂತರಾಗಿರುತ್ತಾರೆ. ಆದ್ರೆ ಮನಸ್ಸನಲ್ಲಿ ಕಪಟತನ ತುಂಬಿರುತ್ತದೆ. ಬೇರೆಯವರ ದುಡ್ಡಿನ ಮೇಲೆ ಆಸೆ ಹೆಚ್ಚಾಗಿರುತ್ತದೆ ಎಂದು ಹೇಳುತ್ತಾನೆ.
ನಕುಲ ಹೇಳಿದ ಬೆಟ್ಟದ ಮೇಲಿಂದ ಒಂದು ದೊಡ್ಡ ಬಂಡೆ ಬೀಳುತ್ತಿತ್ತು. ದೊಡ್ಡ ದೊಡ್ಡ ಮರಗಳಿದ್ವು, ಅದನ್ನ ತಡೆಯಲು ಯಾವುದರಿಂದಲೂ ಸಾಧ್ಯವಿಲ್ಲ. ಆದ್ರೆ ಆ ದೊಡ್ಡ ಬಂಡೆಯನ್ನು ಚಿಕ್ಕ ಮರ ತಡೆದು ನಿಲ್ಲಿಸಿತು ಎಂದು ಹೇಳಿದ. ಆಗ ಕೃಷ್ಣ, ಕಲಿಯುಗದಲ್ಲಿ ಮನುಷ್ಯನ ಬುದ್ಧಿ ಕ್ಷೀಣವಾಗಿರುತ್ತದೆ. ಅವನ ಜೀವನ ಪತನವಾಗುತ್ತದೆ. ಹಾಗೆ ಪತನವಾಗುವ ಜೀವನವೇ ಈ ಬಂಡೆಗಲ್ಲು. ಮತ್ತು ಅದನ್ನ ತಡೆಯಲಾಗದ ದೊಡ್ಡ ದೊಡ್ಡ ಮರಗಳೇ ದುಡ್ಡು, ದೊಡ್ಡವರ ಸಂಗ. ಆದ್ರೆ ಆ ಬಂಡೆಗಲ್ಲನ್ನ ತಡೆದು ನಿಲ್ಲಿಸುವ ಪುಟ್ಟ ಮರವೇ, ಭಕ್ತಿ. ಭಕ್ತಿ- ಭಾವಗಳಿರುವ ಮನುಷ್ಯ, ತನ್ನ ಜೀವನವನ್ನು ಉತ್ತಮವಾಗಿಸಿಕೊಳ್ಳಬಲ್ಲನು ಎಂದು ಹೇಳುತ್ತಾನೆ.
ಸಹದೇವ ತಾನು ಕಾಡಿನಲ್ಲಿ ಹಲವಾರು ಬಾವಿಯನ್ನು ನೋಡಿದೆ. ಆದ್ರೆ ಮಧ್ಯದೊಳಗಿನ ಬಾವಿ ಖಾಲಿಯಾಗಿತ್ತು. ಆದ್ರೆ ಅದು ತುಂಬಾ ಆಳವಾಗಿತ್ತು ಎಂದು ಹೇಳುತ್ತಾನೆ. ಇದಕ್ಕೆ ಉತ್ತರಿಸಿದ ಕೃಷ್ಣ, ಕಲಿಯುಗದಲ್ಲಿ ಕೆಲ ಧನವಂತರು, ಮದ್ಯ ವ್ಯಸನ, ಮಾಂಸ, ದೇಹ ಸುಖ, ಇದಕ್ಕಾಗಿಯೇ ಹಣವನ್ನು ಖರ್ಚು ಮಾಡುತ್ತಾರೆ ವಿನಃ ಬಡ ಬಗ್ಗರಿಗೆ ದಾನ ಮಾಡುವ ಮನಸ್ಸು ಅವರಿಗೆ ಇರುವುದಿಲ್ಲ ಎಂದು ಹೇಳುತ್ತಾನೆ. ಇವು ಕೃಷ್ಣ ಹೇಳಿದ ಕಲಿಯುಗದ 5 ಸತ್ಯಗಳು.




