Kamal Pant : ಸಾರ್ವಜನಿಕರು ಸಹಕರಿಸುವಂತೆ ಮನವಿ..!

ಬೆಂಗಳೂರು : ರಾಜ್ಯದಲ್ಲಿ ಹೆಚ್ಚುತ್ತಿರುವ ಕೊರೋನಾ(Corona) ಹಾಗೂ ಒಮಿಕ್ರಾನ್(Omicron) ಪ್ರಕರಣಗಳಿಂದ ಸರ್ಕಾರ ನಿನ್ನೆ ನೈಟ್ ಕರ್ಫ್ಯೂ(Night curfew) ಜೊತೆಗೆ ವೀಕೆಂಡ್ ಕರ್ಫ್ಯೂ ಜಾರಿಗೆ ತಂದಿದ್ದಾರೆ. ಇದರ ಸಲುವಾಗಿ ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂಥ್(Kamal Pant) ಮಹತ್ವದ ಸಭೆಯ ನಡೆಸಿದ್ದಾರೆ. ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಡಿಸಿಪಿ(DCP) ಗಳಿಗೆ ನಿರ್ದೇಶನ ನೀಡಲಾಗಿದೆ, ಅವರು ಠಾಣಾ ಅಧಿಕಾರಿಗಳೊಂದಿಗೆ ಚರ್ಚಿಸಿ ಚೆಕ್ ಪೋಸ್ಟ್ (Post check)ಅನ್ನು ಹಾಕುವಂತೆ ಹೇಳಿದ್ದೇನೆ ಹಾಗೂ ಸರ್ಕಾರದ ಆದೇಶಗಳ ಕ್ರಮ ಕೈಗೊಳ್ಳಲಾಗುತ್ತದೆ. ಯಾವುದೇ ರೀತಿಯ ಪಾಸುಗಳನ್ನು ವಿತರಿಸುವುದಿಲ್ಲ ಸೂಕ್ತ ಕಾರಣವಿಲ್ಲದೆ ಸಂಚರಿಸುವ ಮೇಲೆ ಕ್ರಿಮಿನಲ್ ಕೇಸ್ ದಾಖಲು ಮಾಡಲಾಗುತ್ತದೆ. ಕರ್ಫ್ಯೂ ವೇಳೆ ವಿನಾಕಾರಣ ಓಡಾಡುವವರು ವಿರುದ್ಧ ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು. ಜನರು ಹಿಂದೆ ಪೊಲೀಸರಿಗೆ ಉತ್ತಮ ಸಹಕಾರ ನೀಡಿದ್ದಾರೆ, ಅದೇ ರೀತಿ ಈ ಬಾರಿಯೂ ಸಾರ್ವಜನಿಕರು ಪೊಲೀಸರಿಗೆ ಸಹಕಾರ ನೀಡಬೇಕೆಂದು ಸಾರ್ವಜನಿಕರಿಗೆ ಮನವಿ ಮಾಡಿಕೊಂಡಿದ್ದಾರೆ.

About The Author