ನಾವು ಹಲವು ಬಾರಿ ಆ್ಯಪಲ್, ಕಲ್ಲಂಗಡಿ, ಪಪ್ಪಾಯಿ, ಆರೆಂಜ್ ಇತ್ಯಾದಿ ಹಣ್ಣುಗಳ ಜ್ಯೂಸ್ ಕುಡಿದಿದ್ದೇವೆ. ಕುಡಿಯುತ್ತಲಿರುತ್ತೇವೆ. ಆದ್ರೆ ಬೇಲದ ಹಣ್ಣಿನ ಜ್ಯೂಸ್ ಕುಡಿದಿದ್ದೀರಾ.. ಕೆಲವರಷ್ಟೇ ಬೆಲದ ಹಣ್ಣನ್ನ ತಿಂದಿರ್ತಾರೆ ಮತ್ತು ಬೆಲದ ಜ್ಯೂಸ್ ಕುಡಿದಿರುತ್ತಾರೆ. ಇನ್ನು ಕೆಲವರು ಈ ಹಣ್ಣನ್ನ ನೋಡಿರುತ್ತಾರಷ್ಟೇ ಆದ್ರೆ ಇದರ ಜ್ಯೂಸ್ ಕುಡಿದಿರೋದಿಲ್ಲ. ಆದ್ರೆ ಬೇಲದ ಹಣ್ಣಿನ ಜ್ಯೂಸ್ ಕುಡಿದ್ರೆ ಆರೋಗ್ಯಕ್ಕೆ ತುಂಬಾ ತುಂಬಾ ಲಾಭಗಳಿದೆ. ಆ ಲಾಭಗಳೇನು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ಬೇಸಿಗೆಗಾಲದಲ್ಲಿ ಬೇಲದ ಹಣ್ಣು ಹೆಚ್ಚಾಗಿ ಕಾಣ ಸಿಗುತ್ತದೆ. ಯಾಕಂದ್ರೆ ಬೇಸಿಗೆಯಲ್ಲಿ ಬೇಲದ ಹಣ್ಣಿನ ಸೇವನೆ ಅಥವಾ ಬೇಲದ ಹಣ್ಣಿನ ಜ್ಯೂಸ್ ಸೇವನೆ ಮಾಡುವುದರಿಂದ ನಮ್ಮ ದೇಹ ತಂಪಾಗಿರುತ್ತದೆ. ಬಿಪಿಯಿಂದ ಬಳಲುತ್ತಿರುವವರು, ಹೃದಯ ರೋಗ ಸಮಸ್ಯೆ ಇದ್ದವರು ನಿಯಮಿತವಾಗಿ ಬೇಲದ ಹಣ್ಣಿನ ಜ್ಯೂಸ್ ಸೇವನೆ ಮಾಡಿದ್ರೆ, ಬಿಪಿ ಮತ್ತು ಹೃದ್ರೋಗವನ್ನು ಕಂಟ್ರೋಲಿನಲ್ಲಿಡಬಹುದು.
ಅಜೀರ್ಣ ಸಮಸ್ಯೆಯಿಂದ ಬಳಲುತ್ತಿರುವವರು ಕೂಡ ಬೇಲದ ಹಣ್ಣಿನ ಸೇವನೆ ಮಾಡಬೇಕು. ಇದರಿಂದ ಅಜೀರ್ಣ ಸಮಸ್ಯೆ ಸೇರಿ ಹೊಟ್ಟೆಯ ಎಲ್ಲ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು. ಕೊಲೆಸ್ಟ್ರಾಲ್ ಪ್ರಮಾಣ ಹೆಚ್ಚಿದ್ದಲ್ಲಿ, ಬೇಲದ ಹಣ್ಣಿನ ಜ್ಯೂಸ್ ಸೇವಿಸಿ. ಇದು ದೇಹದಲ್ಲಿನ ಕೊಲೆಸ್ಟ್ರಾಲ್ ಪ್ರಮಾಣ ಕಡಿಮೆ ಮಾಡಿ, ಹೃದಯ ರೋಗ ಬರದಂತೆ ತಡೆಗಟ್ಟಲು ಸಹಾಯಕವಾಗಿದೆ.
ಅಲ್ಲದೇ ರಕ್ತ ಶುದ್ಧೀಕರಣ ಮಾಡುವಲ್ಲಿಯೂ ಬೇಲದ ಹಣ್ಣಿನ ಜ್ಯೂಸ್ ಸಹಕಾರಿಯಾಗಿದೆ. ರಕ್ತ ಶುದ್ಧಿಕರವಾಗದಿದ್ದಲ್ಲಿ ನಿಮ್ಮ ಮುಖದ ಮೇಲೆ ಮೊಡವೆಗಳಾಗುತ್ತದೆ. ಚಿಕ್ಕ ಚಿಕ್ಕ ಗುಳ್ಳೆಗಳಾಗುತ್ತದೆ. ಹಾಗಾಗಬಾರದು, ನಿಮ್ಮ ಮುಖ ಶುದ್ಧವಾಗಿರಬೇಕು ಅಂದ್ರೆ ಬೇಲದ ಹಣ್ಣಿನ ಜ್ಯೂಸ್ ಕುಡಿಯಿರಿ. ಇನ್ನು ನಿಮ್ಮ ಸೌಂದರ್ಯ ಹೆಚ್ಚಿಸಲು ಇದು ಸಹಕಾರಿಯಾಗಿದೆ. ಮುಖದಲ್ಲಿ ಹೊಳಪು ಬರುವುದಲ್ಲದೇ, ತಲೆಗೂದಲಿನ ಆರೋಗ್ಯವೂ ಉತ್ತಮವಾಗಿರುತ್ತದೆ.
ಮಲಬದ್ಧತೆ ಸಮಸ್ಯೆಯಿಂದ ಮುಕ್ತಿ ಪಡೆಯಲು ಬೇಲದ ಹಣ್ಣಿನ ಜ್ಯೂಸ್ ಸೇವಿಸಿ. ಇದರಿಂದ ಮಲ ಮೂತ್ರ ವಿಸರ್ಜನೆಯ ಸಮಸ್ಯೆ ಇದ್ದಲ್ಲಿ ಪರಿಹಾರ ಸಿಗುತ್ತದೆ. ಇನ್ನು ನಿಮಗೆ ಬೇಲದ ಹಣ್ಣಿನ ಜ್ಯೂಸ್ ಸೇವಿಸಿದ್ದಲ್ಲಿ ಅಲರ್ಜಿ ಎಂದಾದ್ದಲ್ಲಿ ಈ ಬಗ್ಗೆ ವೈದ್ಯರ ಬಳಿ ವಿಚಾರಿಸಿ, ನಂತರ ಬೇಲದ ಹಣ್ಣಿನ ಜ್ಯೂಸ್ ಸೇವನೆ ಮಾಡುವುದು ಉತ್ತಮ.