ವೀಕೆಂಡ್ ಕರ್ಫ್ಯೂ: ಮದ್ಯ ಪ್ರಿಯರಿಗೆ ಶಾಕ್ ನೀಡಿದ ಸರ್ಕಾರ.

ಕರ್ನಾಟಕದಲ್ಲಿ ಕೊರೊನಾ ನಿಯಂತ್ರಿಸುವ ಹಿನ್ನಲೆ ಮಧ್ಯ ಪ್ರಿಯರಿಗೂ ಶಾಖ್ ನೀಡಿದೆ ಸರ್ಕಾರ. ವೀಕೆಂಡ್ ಕರ್ಫ್ಯೂ ಬಂದರೇನು ನಾವು ಎಂದಿನoತೆ ಎಣ್ಣೆ ಸೇವಿಸುತ್ತೇವೆ ಎನ್ನುವವರಿಗೆ ಶಾಖ್ ಆಗಿದೆ,
ಜೊತೆಗೆ ಇನ್ನೂ ಕೆಲವರು ಮಧ್ಯದಂಗಡಿಗಳು ಇರುತ್ತವೆಯೋ ಇಲ್ಲವೋ ಎನ್ನುವ ಗೊಂದಲದಲ್ಲಿದ್ರು, ಅಂತವರಿಗೆ ಅಬಕಾರಿ ಸಚಿವ ಕೆ ಗೋಪಾಲಯ್ಯ ಸ್ಪಷ್ಟ ಪಡಿಸಿದ್ದಾರೆ. ಬೆಳಗ್ಗೆ ಸುಧ್ಧಿಗಾರರೊಂದಿಗೆ ಮಾತನಾಡಿದ ಅವರು ಕೊರೊನಾ ಹಿನ್ನಲೆ ಇಂದಿನಿoದ ಅಂದರೆ ( ಶುಕ್ರವಾರ ರಾತ್ರಿ 8) ಗಂಟೆಯಿoದ ಸೋಮವಾರ ಬೆಳಗ್ಗೆ 5 ಗಂಟೆಗಳ ಕಾಲ ವೀಕೆಂಡ್ ಕರ್ಫ್ಯೂ ಇರುತ್ತದೆ ಈ ವೇಳೆ ಮಧ್ಯ ಖರೀದಿಸುವವರು ರಾತ್ರಿ 8 ರ ಒಳಗಾಗಿ ಖರೀದಿಸತಕ್ಕದ್ದು ಎಂದಿದ್ದಾರೆ. ರಾತ್ರಿ 8 ಗಂಟೆಯ ನಂತರ ಮಧ್ಯ ಇರುವುದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ರಾಜ್ಯದ ಜನರ ಹಿತದೃಷ್ಟಿಯಿಂದ ಈ ನಿರ್ಧಾರವನ್ನು ಕೈಗೊಂಡಿದ್ದು ಬಾರ್ ಮತ್ತು ರೆಸ್ಟೋರೆಂಟ್ ಮಾಲಿಕರು ಸಹಕರಿಸಬೇಕು ಎಂದು ಮನವಿಯನ್ನು ಮಾಡಿದ್ದಾರೆ.

About The Author