- Advertisement -
ನಟ ಸೋನುಸೂದ್ ಅವರ ಸಹೋದರಿ ಮಾಳವಿಕ ಸೂದ್ ಸೋಮವಾರ ಕಾಂಗ್ರೆಸ್ಗೆ ಸೇರ್ಪಡೆಯಾದರು. ಪಂಜಾಬ್ ಮುಖ್ಯಮಂತ್ರಿ ಚರಣ್ಜಿತ್ ಸಿಂಗ್ ಚನ್ನಿ ಮತ್ತು ಪಕ್ಷದ ಪಂಜಾಬ್ ಘಟಕದ ಮುಖ್ಯಸ್ಥ ನವಜೋತ್ ಸಿಂಗ್ ಸಿಧು ಇವರ ಸಮ್ಮುಖದಲ್ಲಿ ಸೇರಿದರು, ಇದಕ್ಕೆ ಪ್ರತಿಕ್ರಿಯಿಸಿರುವ ಸಿಧು. ಕ್ರಿಕೆಟ್ ಜಗತ್ತಿನಲ್ಲಿ ಇದನ್ನು ಗೇಮ್ ಚೇಂಜರ್ ಎಂದು ಕರೆಯಲಾಗುತ್ತದೆ. ಎಂದು ಹೇಳಿದ್ದಾರೆ. ಪಕ್ಷದ ಮುಖ್ಯಸ್ಥರು ಮತ್ತು ಮುಖ್ಯಮಂತ್ರಿ ಇಬ್ಬರೂ ಒಬ್ಬರ ಮನೆಗೆ ಗೌರವ ನೀಡಲು ಹೋಗಿದ್ದು ಬಹಳ ಅಪರೂಪ.
ಅವರು ಅದಕ್ಕೆ ಅರ್ಹರು ಎಂದು ಸಿಧು ಹೇಳಿದ್ದಾರೆ. ಮೋಗ ಮೂಲದ ಸೋನು ಸೂದ್, ತನ್ನ ಸಹೋದರಿ ಈ ಹಿಂದೆ ಸಾಕಷ್ಟು “ಅದ್ಭುತ ಕೆಲಸಗಳನ್ನು ಮಾಡಿದ್ದಾರೆ” ಎಂದು ಹೇಳಿದರು. ನಂತರ ಇದನ್ನೆಲ್ಲ ಉದ್ದೇಶಿಸಿ ಮಾತನಾಡಿದ ಮಾಳವಿಕ ಜನಸೇವೆಗಾಗಿ ತನ್ನನ್ನು ಸಮರ್ಪಿಸಿಕೊಳ್ಳಲು ರಾಜಕೀಯಕ್ಕೆ ಬಂದಿದ್ದೇನೆ ಎಂದು ಹೇಳಿದರು.
- Advertisement -

