ಆಂಜನೇಯಸ್ವಾಮಿ ಎಂದರೆ ಸಾಕಷ್ಟು ಜನರಿಗೆ ಬಹಳ ಇಷ್ಟವಾದ ದೇವರು ಅದರಲ್ಲಿಯೂ ಶನಿದೆಶೆ ಇರುವವರು ಶನಿಕಾಟ ಇರುವವರು ಹೆಚ್ಚಾಗಿ ಆಂಜನೇಯಸ್ವಾಮಿಯ ಮೊರೆ ಹೋಗುವುದನ್ನು ನೋಡಬಹುದು. ವಿಶೇಷವಾಗಿ ಆಂಜನೇಯಸ್ವಾಮಿಗೆ ಮಂಗಳವಾರ ಮತ್ತು ಶನಿವಾರದಂದು ಪೂಜೆ-ಪುನಸ್ಕಾರಗಳನ್ನು ಸಲ್ಲಿಸುತ್ತಾರೆ. ಮನೆಯಲ್ಲಿ ಸ್ವಾಮಿಯ ಫೋಟೋಗಳನ್ನು ಇಟ್ಟು ಪೂಜೆ ಮಾಡುತ್ತಾರೆ. ದೇವಾಲಯಗಳಿಗೆ ಹೋಗಿ ಆಂಜನೇಯ ಸ್ವಾಮಿಯ ದರ್ಶನವನ್ನು ಮಾಡುತ್ತಾರೆ. ಆಂಜನೇಯ ಸ್ವಾಮಿಯನ್ನು ಈ 5 ರೂಪಗಳಲ್ಲಿ ಪೂಜಿಸುವುದರಿಂದ ಅವನ ಅನುಗ್ರಹ ಶೀಘ್ರವಾಗಿ ಪ್ರಾಪ್ತಿಯಾಗುತ್ತದೆ, ಇಷ್ಟಾರ್ಥಗಳು ನೆರವೇರುತ್ತವೆ ಎಂದು ಹೇಳಲಾಗುತ್ತದೆ, ಹಾಗಾದರೆ ಆಂಜನೇಯಸ್ವಾಮಿಯ ಯಾವ 5 ರೂಪಗಳನ್ನು ಪೂಜಿಸಿದರೆ ಶೀಘ್ರವಾಗಿ ಪೂಜೆಯ ಫಲ ಪ್ರಾಪ್ತಿಯಾಗುತ್ತದೆ ಎಂದು ನೋಡೋಣ. ಮೊದಲನೇದಾಗಿ ಪಾದಸ್ಪರ್ಶಿಸುವ ಹನುಮಾನ್ ರೂಪ,ಅಂದರೆ ಆಂಜನೇಯ ಸ್ವಾಮಿಯು ಶ್ರೀರಾಮನ ಪಾದಗಳನ್ನು ಮುಟ್ಟಿ ನಮಸ್ಕರಿಸಿ ಆಶೀರ್ವಾದವನ್ನು ಪಡೆಯುತ್ತಿರುವ ಚಿತ್ರ, ಈ ರೀತಿಯಾದ ಆಂಜನೇಯ ಸ್ವಾಮಿಯನ್ನು ಪೂಜಿಸುವುದರಿಂದ ವೃತ್ತಿರಂಗದಲ್ಲಿ ಇರುವಂತಹ ಸಮಸ್ಯೆಗಳು ನಿವಾರಣೆ ಆಗುವುದರ ಜೊತೆಗೆ ವೈಯಕ್ತಿಕ ಜೀವನವು ಬಹಳ ಚೆನ್ನಾಗಿರುತ್ತದೆ ಎಂದು ಹೇಳಲಾಗುತ್ತದೆ.
ಇನ್ನು ಸೂರ್ಯಮುಖಿ ಹನುಮಂತನ ರೂಪ. ಇದು ಆಂಜನೇಯ ಸ್ವಾಮಿಯು ಸೂರ್ಯದೇವನನ್ನು ಆರಾಧಿಸುತ್ತಿರುವಂತಹದ್ದು, ಸೂರ್ಯನ ಕಿರಣಗಳು ಜ್ಞಾನ ಮತ್ತು ವಿವೇಕದ ಸಂಕೇತಗಳಾಗಿರುತ್ತದೆ, ಆಂಜನೇಯ ಸ್ವಾಮಿಯನ್ನು ಪೂಜಿಸುವುದರಿಂದ ಜ್ಞಾನ ಮತ್ತು ಯಶಸ್ಸು ಎಂಬುದು ಲಭಿಸುತ್ತದೆ. ಇನ್ನು ಉತ್ತರಮುಖಿ ಹನುಮಂತನ ರೂಪ, ಸಾಮಾನ್ಯವಾಗಿ ದೇವರುಗಳು ಉತ್ತರ ದಿಕ್ಕಿನಲ್ಲಿ ಇರುತ್ತಾರೆ ಎಂದು ಹೇಳಲಾಗುತ್ತದೆ, ಹಾಗಾಗಿ ಉತ್ತರ ದಿಕ್ಕಿಗೆ ಮುಖ ಮಾಡಿಕೊಂಡು ಇರುವ ಆಂಜನೇಯ ಸ್ವಾಮಿಯನ್ನು ಪೂಜಿಸುವುದರಿಂದ ಆಂಜನೇಯ ಸ್ವಾಮಿಯ ಅನುಗ್ರಹದದ ಜೊತೆಗೆ ಇತರ ಎಲ್ಲಾ ದೇವರ ಆಶೀರ್ವಾದಗಳು ನಿಮಗೆ ಪ್ರಾಪ್ತಿಯಾಗುತ್ತದೆ ಎಂದು ಹೇಳಲಾಗುತ್ತದೆ. ಇನ್ನು ಮಹಾಬಲಿಯ ಹನುಮಂತನ ರೂಪ, ಈ ರೂಪದಲ್ಲಿ ಆಂಜನೇಯಸ್ವಾಮಿಯು ಯಾವುದೇ ರೀತಿಯ ಭಯವೂ ಇಲ್ಲದೆ ಅತ್ಯಂತ ಶಕ್ತಿಶಾಲಿಯಾಗಿ ಯೋಧನ ರೀತಿಯಲ್ಲಿ ಕಾಣಿಸಿಕೊಳ್ಳುತ್ತಾನೆ, ಲಂಕೆಯಲ್ಲಿರುವ ಗೆಲ್ಲ ರಾಕ್ಷಸರನ್ನು ಸಂಮಹರಿಸುತ್ತಾನೆ, ಈ ಒಂದು ಮಹಾಬಲಿ ಹನುಮಂತನ ರೂಪವನ್ನು ಪೂಜಿಸುವುದರಿಂದ ವ್ಯಕ್ತಿಯಲ್ಲಿರುವ ಭಯವೂ ದೂರವಾಗಿ ಆತ್ಮವಿಶ್ವಾಸವು ಹೆಚ್ಚಾಗುತ್ತದೆ ಧೈರ್ಯವೂ ಹೆಚ್ಚಾಗುತ್ತದೆ. ಇನ್ನು ಭಕ್ತ ಹನುಮಂತನ ರೂಪ, ಎಲ್ಲರಿಗೂ ಗೊತ್ತಿರುವ ಹಾಗೆ ಆಂಜನೇಯಸ್ವಾಮಿಯ ಶ್ರೀ ರಾಮನ ಪರಮಭಕ್ತ, ಆಂಜನೇಯ ಸ್ವಾಮಿಯ ಶ್ರೀರಾಮನನ್ನು ಭಕ್ತಿಯಿಂದ ಆರಾಧಿಸುತ್ತಿರುವ ಅಂತಹ ಚಿತ್ರವನ್ನು ಪೂಜಿಸುವುದರಿಂದ ಇಷ್ಟಾರ್ಥಗಳು ಶೀಘ್ರವಾಗಿ ನೆರವೇರುತ್ತವೆ, ಜೀವನದಲ್ಲಿ ಹೊಂದಿರುವ ಗುರಿಯನ್ನು ಶೀಘ್ರವಾಗಿ ತಲುಪುವಂತಹ ಸಾಮರ್ಥ್ಯವನ್ನು ಆಂಜನೇಯಸ್ವಾಮಿಯು ಅನುಗ್ರಹಿಸುತ್ತಾನೆ ಎಂದು ಹೇಳಬಹುದು.