ಫುಡ್ ಡಿಲೆವರಿ ಮಾಡುವ ಯುವಕರೆಂದರೆ, ಸಣ್ಣ ಸ್ಥಾನವಿಟ್ಟು ನೋಡುವವರೇ ಹೆಚ್ಚು. ಅವರೂ ಕೂಡ ನಮ್ಮ ಹಾಗೆ ಹೊಟ್ಟೆ ಬಟ್ಟೆಗಾಗಿ ಕೆಲಸ ಮಾಡುವವರು ಅನ್ನೋದನ್ನ ಹಲವರು ಮರೆತು, ಊಟ ತರುವುದು ಸ್ವಲ್ಪ ಲೇಟ್ ಆದ ಮಾತ್ರಕ್ಕೆ, ಬಾಯಿಗೆ ಬಂದ ಹಾಗೆ ಬೈಯ್ತಾರೆ. ಆದ್ರೆ ಇಂದು ಸ್ವಿಗ್ಗಿ ಹುಡುಗನೋರ್ವ, ಒಳ್ಳೆಯ ಕೆಲಸ ಮಾಡಿ ಎಲ್ಲರ ಮೆಚ್ಚುಗೆಗೆ ಪಾತ್ರನಾಗಿದ್ದಾರೆ.
ಮುಂಬೈನಲ್ಲಿ ಸ್ವಿಗಿ ಡಿಲೆವರಿ ಬಾಯ್ ರಸ್ತೆಯಲ್ಲಿ ಹೋಗುತ್ತಿರುವಾಗ, ಅಲ್ಲಿ ಟ್ರಾಫಿಕ್ ಜಾಮ್ ಆಗಿದೆ. ಅದೇ ವೇಳೆ ಮೋಹನ್ ಮಲೀಕ್ ಎಂಬ ವೃದ್ಧನ ಆರೋಗ್ಯ ಕ್ಷೀಣಿಸಿ, ತಕ್ಷಣ ಆಸ್ಪತ್ರೆಗೆ ಕರೆದೊಯ್ಯುವ ಪರಿಸ್ಥಿತಿ ಎದುರಾಗಿತ್ತು. ಆಗ ಮೋಹನ್ ಮಗ ಸುಮಾರು ಜನ ಬೈಕ್ ಓಡಿಸುತ್ತಿದ್ದವರಿಗೆ, ತಮ್ಮ ತಂದೆಯನ್ನು ಆಸ್ಪತ್ರೆಗೆ ಸೇರಿಸುವುದಕ್ಕೆ ಸಹಾಯ ಮಾಡಬೇಕೆಂದು ರಿಕ್ವೆಸ್ಟ್ ಮಾಡಿದ್ದಾರೆ. ಆದ್ರೆ ಯಾರೂ ಕೂಡ ಅವರ ಸಹಾಯಕ್ಕೆ ಬರಲಿಲ್ಲ.
ಆಗ ಸ್ವಿಗ್ಗಿ ಬಾಯ್ ಮೃಣಾಲ್ ಕಿದ್ರತ್ ಎಂಬಾತ, ಮೋಹನ್ ಸಹಾಯಕ್ಕೆ ಬಂದಿದ್ದಾರೆ. ತಮ್ಮ ಗಾಡಿಯಲ್ಲಿ, ವೃದನನ್ನು ಅಲ್ಲೇ ಹತ್ತಿರದಲ್ಲೇ ಇದ್ದ ಲೀಲಾವತಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಕಾರಣಕ್ಕೆ ಮೋಹನ್ ಮತ್ತು ಅವರ ಮಗ, ಮೃಣಾಲ್ ಸಹಾಯಕ್ಕೆ ಧನ್ಯವಾದ ತಿಳಿಸಿದ್ದಾರೆ.




