Thursday, August 21, 2025

Latest Posts

ಹೈ ಪ್ರೋಟಿನ್ ಸಲಾಡ್ ರೆಸಿಪಿ..

- Advertisement -

ಆರೋಗ್ಯಕ್ಕೆ ಒಳ್ಳೆಯದಾಗಿರುವ ಆಹಾರಗಳಲ್ಲಿ ಸಲಾಡ್ ಕೂಡ ಒಂದು. ಹಾಗಾಗಿ ಇಂದು ನಾವು ಹೈ ಪ್ರೋಟಿನ್ ಸಲಾಡ್ ಮಾಡೋದು ಹೇಗೆ ಅನ್ನೋ ಬಗ್ಗೆ ಹೇಳಲಿದ್ದೇವೆ. ಈ ಸಲಾಡ್ ಮಾಡೋಕ್ಕೆ ಬೇಕಾಗಿರುವ ಪದಾರ್ಥಗಳೇನು..? ಇದನ್ನ ಹೇಗೆ ಮಾಡೋದು..? ಇವೆಲ್ಲದರ ಬಗ್ಗೆ ತಿಳಿಯೋಣ ಬನ್ನಿ..

ಬೇಕಾಗುವ ಪದಾರ್ಥ- ಶೇಂಗಾ, ಕಡಲೆ, ಹೆಸರು ಕಾಳು, ಮಡಿಕೆ ಕಾಳು, ಟೊಮೆಟೋ, ಈರುಳ್ಳಿ, ಸೌತೇಕಾಯಿ, ಕ್ಯಾರೆಟ್, ನಿಂಬೆ ರಸ, ಟೋಫೂ ಅಥವಾ ಪನೀರ್ ಕ್ಯೂಬ್ಸ್, ಕೊತ್ತೊಂಬರಿ ಸೊಪ್ಪು, ಚಾಟ್‌ ಮಸಾಲಾ ಪೌಡರ್, ಹುರಿದು ಪುಡಿ ಮಾಡಿದ ಜೀರಿಗೆ, ಅವಶ್ಯಕತೆ ಇದ್ದಲ್ಲಿ ಒಂದು ಹಸಿಮೆಣಸಿನಕಾಯಿ. ರುಚಿಗೆ ತಕ್ಕಷ್ಟು ಉಪ್ಪು.

ಮೊದಲನೇಯದಾಗಿ ಶೇಂಗಾ, ಕಡಲೆ, ಹೆಸರು ಕಾಳು ಮತ್ತು ಮಡಿಕೆ ಕಾಳನ್ನು ನೆನೆಸಿ, ಮೊಳಕೆ ಬರಿಸಿಕೊಳ್ಳಿ. ಮೊಳಕೆ ಬಂದ ಕಾಳನ್ನ ಸ್ವಚ್ಛವಾಗಿ ತೊಳೆದುಕೊಳ್ಳಿ. ನಿಮಗೆ ಅಗತ್ಯವಿದ್ದಷ್ಟು ಮಿಕ್ಸಿಂಗ್ ಬೌಲ್‌ಗೆ ಹಾಕಿಕೊಳ್ಳಿ. ಇದಕ್ಕೆ ಒಂದು ಈರುಳ್ಳಿ, ಸೌತೇಕಾಯಿ, ಟೊಮೆಟೋ ಸಣ್ಣಗೆ ಹೆಚ್ಚಿ ಸೇರಿಸಿ. ತುರಿದ ಕ್ಯಾರೆಟ್, ಹಸಿಮೆಣಸಿನ ಕಾಯಿ, ಟೋಫೂ ಅಥವಾ ಪನೀರ್ ಕ್ಯೂಬ್ಸ್  ಸೇರಿಸಿ. ಈಗ ಚಾಟ್‌ ಮಸಾಲ ಪೌಡರ್, ಜೀರಿಗೆ ಪುಡಿ, ನಿಂಬೆ ರಸ, ಸಣ್ಣಗೆ ಕತ್ತರಿಸಿದ ಕೊತ್ತೊಂಬರಿ ಸೊಪ್ಪು, ಉಪ್ಪು ಹಾಕಿ ಮಿಕ್ಸ್ ಮಾಡಿದ್ರೆ, ಹೈ ಪ್ರೋಟಿನ್ ಸಲಾಡ್ ರೆಡಿ. ನಿಮಗೆ ಬೇಕಾದಲ್ಲಿ ಇದಕ್ಕೆ ಆಲಿವ್ ಎಣ್ಣೆ ಕೂಡ ಸೇರಿಸಿಕೊಳ್ಳಬಹುದು.

- Advertisement -

Latest Posts

Don't Miss