ಮೊದಲ ಬಾರಿಗೆ ಪೈಲಟ್ ಇಲ್ಲದೇ ಹೆಲಿಕಾಪ್ಟರ್ ಹಾರಾಡಿದೆ. ಯುಎಸ್‌ನಲ್ಲಿ ಬ್ಲ್ಯಾಕ್ ಹಾವ್ಕ್ ಹೆಲಿಕಾಪ್ಟರ್ ಆಗಸದಲ್ಲಿ 30 ನಿಮಿಷಗಳ ಕಾಲ ಪೈಲಟ್ ಇಲ್ಲದೇ ಹಾರಾಟ ನಡೆಸಿದೆ. ಸಿಮ್ಯುಲೇಟ್ ಸಿಟಿಸ್ಕೇಪ್ ಮೂಲಕ ಹೆಲಿಕಾಪ್ಟರ್ ಹಾರಾಡಿದ್ದು, ಫೆಬ್ರವರಿ 5ರಂದು ಇದನ್ನು ಹಾರಿಸಿ ಪರೀಕ್ಷೆ ಮಾಡಲಾಗಿತ್ತು.
4 ಸಾವಿರ ಅಡಿ ಎತ್ತರದಲ್ಲಿ, ಗಂಟೆಗೆ 115ರಿಂದ 125 ಮೈಲುಗಳ ವೇಗದಲ್ಲಿ ಹೆಲಿಕಾಪ್ಟರ್ ಹಾರಿದೆ. ಅಲಿಯಾಸ್ ಎಂಬ ಯುಎಸ್ ರಕ್ಷಣಾ ಸಂಶೋಧನಾ ಕಾರ್ಯಕ್ರಮದ ಭಾಗವಾಗಿ ಈ ಹೆಲಿಕಾಪ್ಟರ್‌ನ್ನು ಹಾರಿಸಲಾಗಿತ್ತು. ಇದರ ಪ್ರೊಗ್ರಾಮ್ ಮ್ಯಾನೇಜರ್ ಆಗಿರುವ ಸ್ಟುವರ್ಟ್ ಯಂಗ್ ಈ ಬಗ್ಗೆ ಮಾತನಾಡಿದ್ದು, ಈ ಹೆಲಿಕಾಪ್ಟರ್‌ನಲ್ಲಿ 3 ಗುಣಗಳಿದೆ. ಮೊದಲನೇಯದು ಸುರಕ್ಷತೆ, ಎರಡನೇಯದು ಭೂಮಿಗೆ ಅಪ್ಪಳಿಸುವ ಅನಾಹುತವನ್ನು ತಪ್ಪಿಸುವುದು. ಮೂರನೇಯದು ವೆಚ್ಚಕಡಿತ ಎಂದಿದ್ದಾರೆ.
ಈ ಹೆಲಿಕಾಪ್ಟರ್ ಸೈನ್ಯದ ಕಾರ್ಯಾಚರಣೆಗೆ ಸಹಾಯ ಮಾಡುತ್ತದೆ. ವಿವಿಧ ಕಷ್ಟದ ಪರಿಸ್ಥಿತಿಯಲ್ಲೂ ಇದು ಪೈಲಟ್ ಇಲ್ಲದೇ, ಕಾರ್ಯನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿದೆ.