Saturday, June 21, 2025

Latest Posts

‘ಮುಂದೊಂದು ದಿನ ಹಿಜಬ್‌ ಧರಿಸಿದ ಹೆಣ್ಣೇ ಪ್ರಧಾನ ಮಂತ್ರಿಯಾಗುತ್ತಾಳೆ’

- Advertisement -

ಹಿಜಬ್‌ ಧರಿಸಿದ ಮಹಿಳೆಯೇ ಮುಂದೊಂದು ದಿನ ಪ್ರಧಾನ ಮಂತ್ರಿಯಾಗುತ್ತಾಳೆ ಎಂದು, ಭಾಷಣದ ವೇಳೆ ಒವೈಸಿ ಹೇಳಿಕೆ ನೀಡಿದ್ದಾರೆ. ಕರ್ನಾಟಕದಲ್ಲಿ ನಡೆಯುತ್ತಿರುವ ಹಿಜಬ್ ವಿವಾದ ಈಗ ಪ್ರಪಂಚದಾದ್ಯಂತ ಸದ್ದು ಮಾಡುತ್ತಿರುವುದು ನಿಮಗೆ ಗೊತ್ತಿರುವ ವಿಷಯವೇ. ಈ ವಿಷಯಕ್ಕೆ ಸಂಬಂಧಪಟ್ಟಂತೆ, ಹಲವು ಸೆಲೆಬ್ರಿಟಿಗಳು, ರಾಜಕೀಯ ಗಣ್ಯರು ಪ್ರತಿದಿನ ಪರ ವಿರೋಧ ಹೇಳಿಕೆ ನೀಡುತ್ತಲೇ ಇದ್ದಾರೆ. ಅಸಾದುದ್ದೀನ್ ಓವೈಸಿ ಹಿಜಬ್ ಬಗ್ಗೆ ಪ್ರತಿದಿನ, ಒಂದಲ್ಲ ಒಂದು ಹೇಳಿಕೆ ನೀಡುತ್ತಿದ್ದಾರೆ. ಅದೇ ರೀತಿ ಇಂದೂ ಕೂಡ ಹೇಳಿಕೆ ನೀಡುತ್ತಿದ್ದು, ಹಿಜಬ್ ಧರಿಸಿದ ಹೆಣ್ಣು ಮಗಳೇ ಮುಂದೊಂದು ದಿನ ಪ್ರಧಾನಿಯಾಗುತ್ತಾಳೆಂದು ಭವಿಷ್ಯ ನುಡಿದಿದ್ದಾರೆ.

ಒವೈಸಿ ತಮ್ಮ ಟ್ವಿಟರ್ ಖಾತೆಯಲ್ಲಿ ಒಂದು ವೀಡಿಯೋ ಹಾಕಿದ್ದು, ಈ ವೀಡಿಯೋದಲ್ಲಿ ಹೀಗೆ ಹೇಳಿದ್ದಾರೆ. ಒಂದು ಹೆಣ್ಣು ತನ್ನ ಅಪ್ಪ- ಅಮ್ಮನಿಗೆ ನಾನು ಹಿಜಬ್ ಹಾಕಿಕೊಳ್ಳುತ್ತೇನೆಂದು ಹೇಳಿದಾಗ, ಹಾಕಿಕೋ ಮಗಳೇ, ಯಾರು ತಡೆಯುತ್ತಾರೆಂದು ನಾವು ನೋಡುತ್ತೇವೆಂದು ಹೇಳಬೇಕು. ಹೆಣ್ಣು ಹಿಜಬ್ ಹಾಕಿಕೊಳ್ಳುತ್ತಾಳೆ, ಕಾಲೇಜಿಗೂ ಹೋಗುತ್ತಾಳೆ. ಡಾಕ್ಟರ್ ಆಗುತ್ತಾಳೆ. ಕಲೆಕ್ಟರ್ ಕೂಡ ಆಗುತ್ತಾಳೆ. ಎಲ್ಲವೂ ಆಗುತ್ತಾಳೆ. ನೆನಪಿಡಿ ಮುಂದೊಂದು ದಿನ ಹಿಜಬ್ ಹಾಕಿದ ಮಹಿಳೆಯೇ, ಪ್ರಧಾನ ಮಂತ್ರಿಯಾಗುತ್ತಾಳೆಂದು ಹೇಳಿದ್ದಾರೆ.

- Advertisement -

Latest Posts

Don't Miss