Saturday, December 6, 2025

Latest Posts

ಸಾತ್ವಿಕ ಟೊಮೆಟೋ ಸೂಪ್ ರೆಸಿಪಿ..

- Advertisement -

ಇವತ್ತು ನಾವು ಟೊಮೆಟೋ ಸೂಪ್ ಮಾಡೋದು ಹೇಗೆ ಅನ್ನೋ ಬಗ್ಗೆ ತಿಳಿಸಿಕೊಡಲಿದ್ದೇವೆ. ವಿಶೇಷ ಅಂದ್ರೆ ಇದರಲ್ಲಿ ಬೆಳ್ಳುಳ್ಳಿ, ಈರುಳ್ಳಿಯನ್ನ ಬಳಕೆ ಮಾಡಲ್ಲಾ. ಯಾಕಂದ್ರೆ ಇದು ಸಾತ್ವಿಕ ಸೂಪ್. ಹಾಗಾದ್ರೆ ಬನ್ನಿ, ಸಾತ್ವಿಕ ಸೂಪ್ ಮಾಡೋಕ್ಕೆ ಏನೇನ್ ಸಾಮಗ್ರಿ ಬೇಕು..? ಇದನ್ನ ಮಾಡೋದು ಹೇಗೆ ಅನ್ನೋ ಬಗ್ಗೆ ತಿಳಿಯೋಣ.

ಬೇಕಾಗುವ ಸಾಮಗ್ರಿ- 4 ಟೊಮೆಟೋ, ಒಂದು ಕ್ಯಾರೆಟ್, ಒಂದು ಚಿಕ್ಕ ಕ್ಯಾಪ್ಸಿಕಂ, ಒಂದು ಆಲೂಗಡ್ಡೆ, ಒಂದು ಟೇಬಲ್ ಸ್ಪೂನ್ ಆರ್ಗ್ಯಾನೋ, ಕಾಳು ಮೆಣಸಿನ ಪುಡಿ, ರುಚಿಗೆ ತಕ್ಕಷ್ಟು ಉಪ್ಪು. ಇವಿಷ್ಟು ಟೊಮೆಟೋ ಸೂಪ್‌ಗೆ ಬೇಕಾಗಿರುವ ಸಾಮಗ್ರಿ.

ಈಗ ಒಂದು ಪಾತ್ರೆಯಲ್ಲಿ ನೀರು ಕುದಿಸಬೇಕು. ಗ್ಯಾಸ್ ಆಫ್ ಮಾಡಿ, ಆ ನೀರಿನ ಪಾತ್ರೆಯಲ್ಲಿ ಟೊಮೆಟೋವನ್ನ ಹಾಕಿ ಮುಚ್ಚಿಡಬೇಕು. 20 ನಿಮಿಷದ ಬಳಿಕ ಟೊಮೆಟೋವನ್ನ ಹೊರ ತೆಗೆದು, ಸಿಪ್ಪೆ ಬಿಡಿಸಬೇಕು. ಟೊಮೆಟೋ ಒಳಗಿನ ಬೀಜವನ್ನ ತೆಗೆದು ಬಿಡಿ. ಇದು ಮುಖ್ಯವಾದ ಅಂಶ. ಯಾಕಂದ್ರೆ ಟೊಮೆಟೋ ಬೀಜ ಆರೋಗ್ಯಕ್ಕೆ ಅಷ್ಟು ಒಳ್ಳೆಯದಲ್ಲ.

ಈಗ ಆರ್ಗ್ಯಾನೋ, ಉಪ್ಪು, ಕ್ಯಾಪ್ಸಿಕಂ, ಆಲೂಗಡ್ಡೆ, ಕ್ಯಾರೆಟನ್ನ ನೀರಿನಲ್ಲಿ 10 ನಿಮಿಷ ಬೇಯಿಸಬೇಕು. ಈಗ ಕುದಿಸಿದ ತರಕಾರಿಯನ್ನು ಅದೇ ನೀರಿನ ಸಮೇತ ಮಿಕ್ಸಿ ಜಾರ್‌ಗೆ ಹಾಕಿ, ಇದರೊಟ್ಟಿಗೆ ಟೋಮೆಟೋವನ್ನ ಸೇರಿಸಿ ಪೇಸ್ಟ್ ತಯಾರಿಸಿದ್ರೆ, ಟೊಮೆಟೋ ಸೂಪ್ ರೆಡಿ. ಇದನ್ನ ಸೂಪ್ ಬೌಲ್‌ಗೆ ಹಾಕಿ, ಅದರ ಮೇಲೆ ಪೆಪ್ಪರ್ ಪೌಡರ್ ಹಾಕಿ ಸರ್ವ್ ಮಾಡಿ.

ಇದು ಸಾತ್ವಿಕ ಸೂಪ್ ಆಗಿರುವುದರಿಂದ, ಇದರಲ್ಲಿ ಟೊಮೆಟೋವನ್ನ ಹೆಚ್ಚು ಬೇಯಿಸಲಿಲ್ಲ. ನಿಮಗೆ ಬೇಕಾದಲ್ಲಿ ನೀವು ಇದಕ್ಕೆ ಬೆಲ್ಲವನ್ನ ಸೇರಿಸಿಕೊಳ್ಳಿ. ಉಪ್ಪಿನ ಬದಲು ಸೇಂಧವ ಲವಣ ಬಳಸಿದ್ರೆ ಇನ್ನೂ ಉತ್ತಮ. ಇನ್ನು ಮಣ್ಣಿನ ಪಾತ್ರೆ ಬಳಸಿ ಈ ಸೂಪ್ ತಯಾರಿಸಿದ್ರೆ, ಪರಫೆಕ್ಟ್ ಸಾತ್ವಿಕ ಸೂಪ್ ತಯಾರಾಗತ್ತೆ.

- Advertisement -

Latest Posts

Don't Miss