ಬಸ್ಕಿ ಹೊಡೆದು ಮತ ಹಾಕಿ ಎಂದು ಕೇಳಿಕೊಂಡ ಶಾಸಕ..

ಉತ್ತರ ಪ್ರದೇಶದಲ್ಲಿ ವಿಧಾನ ಸಭೆ ಚುನಾವಣೆಗೆ ಎಲ್ಲ ತಯಾರಿ ನಡೆಯುತ್ತಲಿದೆ. ಬಿಜೆಪಿ ಮತ್ತು ಸಮಾಜವಾದಿ ಪಾರ್ಟಿ ಮಧ್ಯೆ, ತೀವ್ರ ಪೈಪೋಟಿ ಏರ್ಪಟ್ಟಿದೆ. ಗೆಲ್ಲಲೇಬೇಕು ಎಂದು ನಿರ್ಧರಿಸಿರುವ ಎರಡು ಕಡೆಯವರ, ಎಂ ಪಿ, ಎಮ್‌ ಎಲ್ ಎಗಳು ಸಖತ್ ಕಾಂಪಿಟೇಶನ್‌ಗೆ ಬಿದ್ದಿದ್ದಾರೆ. ಆ ಕಾಂಪಿಟೇಶನ್ ಎಲ್ಲಿವರೆಗೆ ಹೋಗಿದೆ ಅಂದ್ರೆ, ಬಿಜೆಪಿಯ ಎಂಎಲ್‌ಎ ಬಸ್ಕಿ ಹೊಡೆದು ಮತದಾರರ ಮುಂದೆ ಓಟ್ ಹಾಕಲು ಕೇಳಿಕೊಂಡಿದ್ದಾರೆ.

ಸೋನ್‌ಭದ್ರ ಎಂಬಲ್ಲಿ ಪ್ರಚಾರಕ್ಕಾಗಿ ಸ್ಟೇಜ್ ಮೇಲೆ ನಿಂತು ಭಾಷಣ ಮಾಡುವ ವೇಳೆ, ರಾಬರ್ಟ್ ಗಂಜ್‌ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ, ಭೂಪೇಶ್ ಚೌಭೆ ಎಂಬುವವರು, ಬಸ್ಕಿ ಹೊಡೆದು ಮತ ಹಾಕುವಂತೆ ಕೇಳಿಕೊಂಡಿದ್ದಾರೆ. ಅಲ್ಲದೇ ತಪ್ಪಾಗಿದ್ದರೆ ಕ್ಷಮಿಸಿ ಎಂದು ಕ್ಷಮೆಯೂ ಕೇಳಿದ್ದಾರೆ. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಈ ವೇಳೆ ಮಾತನಾಡಿದ ಭೂಪೇಶ್, ಕಳೆದ ಸಲ ಬಿಜೆಪಿ ಓಟ್ ಹಾಕಿ, ನಮ್ಮನ್ನು ಗೆಲ್ಲಿಸಿದಂತೆ, ಈ ಬಾರಿಯೂ ನಮ್ಮನ್ನು ಆಶೀರ್ವದಿಸಿ, ನಮಗೆ ಓಟ್ ಹಾಕಿ ಗೆಲ್ಲಿಸಿ. ರಾಬರ್ಟ್‌ಗಂಜ್ ವಿಧಾನ ಸಭಾ ಕ್ಷೇತ್ರದಲ್ಲಿ ಕಮಲ ಅರಳುವಂತೆ ಮಾಡಿ, ಎಂದು ಕೈ ಮುಗಿದು ಕೇಳಿಕೊಂಡಿದ್ದಾರೆ.

About The Author