ಒಂದು ವಾರದಿಂದ ಉಕ್ರೇನ್- ರಷ್ಯಾ ಯುದ್ಧ ಶುರುವಾಗಿದ್ದು, ಉಕ್ರೇನ್‌ನಲ್ಲಿ ವೈದ್ಯಕೀಯ ಶಿಕ್ಷಣ ಪಡೆಯಲು ಹೋದ ಕೆಲ ಭಾರತೀಯ ವಿದ್ಯಾರ್ಥಿಗಳು, ಅಲ್ಲೇ ಉಳಿದಿದ್ದಾರೆ. ಊಟ ತಿಂಡಿಗೂ ಪರದಾಡುವ ಪರಿಸ್ಥಿತಿ. ಆದ್ರೆ ಕೆಲ ವಿದ್ಯಾರ್ಥಿಗಳನ್ನು ಭಾರತಕ್ಕೆ ಸೇಫ್ ಆಗಿ ಕರೆ ತರಲಾಗಿದೆ. ಇದಕ್ಕೆ ಕಾರಣ ಅಂದ್ರೆ ನಮ್ಮ ರಾಷ್ಟ್ರಧ್ವಜ. ನಮ್ಮ ರಾಷ್ಟ್ರಧ್ವಜ ಇರುವ ಬಸ್ಸನ್ನು ಉಕ್ರೇನ್‌ನಲ್ಲಿ ತಡೆಯದ ಕಾರಣ, ಕೆಲ ವಿದ್ಯಾರ್ಥಿಗಳು ತಾಯ್ನಾಡಿಗೆ ಸೇಫ್ ಆಗಿ ಬಂದಿದ್ದಾರೆ.
ಅದೇ ರೀತಿ ಓರ್ವ ಪಾಕಿಸ್ತಾನಿ ವಿದ್ಯಾರ್ಥಿ ಮತ್ತು ಓರ್ವ ಟರ್ಕಿಶ್ ವಿದ್ಯಾರ್ಥಿ, ಇದೇ ರೀತಿ ನಮ್ಮ ರಾಷ್ಟ್ರಧ್ವಜ ತೋರಿಸಿ, ಜೀವ ಉಳಿಸಿಕೊಂಡಿದ್ದಾರೆ. ಭಾರತವಷ್ಟೇ ತಮ್ಮ ದೇಶದ ವಿದ್ಯಾರ್ಥಿಗಳನ್ನ ರಕ್ಷಣೆ ಮಾಡಲು ಮುಂದಾಗಿದೆ. ಆದ್ರೆ ಕೆಲ ರಾಷ್ಟ್ರಗಳು, ನಿಮ್ಮ ಜವಾಬ್ದಾರಿಯಿಂದ ಹೋಗಿದ್ದೀರಿ, ಅಂತೆಯೇ ಮರಳಿ ಬರುವುದು ಕೂಡ ನಿಮ್ಮದೇ ಜವಾಬ್ದಾರಿ ಎಂದು ಕೈ ತೊಳೆದುಕೊಂಡಿದೆ.
ಹಾಗಾಗಿ ಟರ್ಕಿಶ್ ಮತ್ತು ಪಾಕ್ ವಿದ್ಯಾರ್ಥಿ ಬೇರೆ ದಾರಿ ತೋಚದೆ ನಮ್ಮ ಧ್ವಜ ತೋರಿಸಿ, ಸಾವಿನ ದವಡೆಯಿಂದ ಪಾರಾಗಿದ್ದಾರೆ. ಉಕ್ರೇನ್ ಗಡಿ ದಾಟಲು ಈ ವಿದ್ಯಾರ್ಥಿಗಳು ನಮ್ಮ ರಾಷ್ಟ್ರಧ್ವಜವನ್ನು ಬಳಸಿಕೊಂಡಿದ್ದಾರೆ. ಇಂಡಿಯನ್ ವಿದ್ಯಾರ್ಥಿಗಳು ಮಾರುಕಟ್ಟೆಗೆ ಹೋಗಿ ಒಂದು ಬಟ್ಟೆ ಮತ್ತು ಕಲರ್ ಸ್ಪ್ರೇಗಳನ್ನು ತಂದು ಧ್ವಜ ತಯಾರಿಸಿ, ಅದನ್ನ ಬಸ್‌ಗೆ ಕಟ್ಟಿ, ಗಡಿ ದಾಟಿ ಬಂದಿದ್ದಾರೆ. ಇವರ ಐಡಿಯಾವನ್ನ ಕಂಡ ಪಾಕ್, ಟರ್ಕಿಶ್ ವಿದ್ಯಾರ್ಥಿಗಳು ಕೂಡ ಹೀಗೆ ಧ್ವಜ ತಯಾರಿಸಿ, ಗಡಿ ದಾಟಿ ಪ್ರಾಣ ಉಳಿಸಿಕೊಂಡಿದ್ದಾರೆ. ನಮ್ಮ ಭಾರತದ ರಾಷ್ಟ್ರಧ್ವಜ ಪ್ರಾಣ ಉಳಿಸುವ ಶಕ್ತಿಯನ್ನು ಹೊಂದಿದೆ ಅನ್ನೋದೇ ನಮಗೆ ಹೆಮ್ಮೆಯ ಸಂಗತಿ.