Friday, August 29, 2025

Latest Posts

ಸಿದ್ದರಾಮಯ್ಯ, ಡಿಕೆಶಿ ಸಂಘರ್ಷ : ಕಾಂಗ್ರೆಸ್ ಹೈಕಮಾಂಡ್ ಗೆ ಆತಂಕ

- Advertisement -

ಕರ್ನಾಟಕ ಟಿವಿ : ಇಡೀ ದೇಶದಲ್ಲಿ ಕೇಂದ್ರಾಡಳಿತ ಪ್ರದೇಶ ಸೇರಿದಂತೆ 30 ಅಸೆಂಬ್ಲಿ ಇರುವ ರಾಜ್ಯಗಳಲ್ಲಿ ಕಾಂಗ್ರೆಸ್ ರಾಜಸ್ಥಾನ & ಛತ್ತೀಸ್ ಘಡ ಸೇರಿ ಎರಡೇ ಎರಡು ರಾಜ್ಯಗಳಲ್ಲಿ ಸ್ವತಂತ್ರವಾಗಿ ಅಧಿಕಾರದಲ್ಲಿದೆ. ಮಹಾರಾಷ್ಟ್ರದಲ್ಲಿ ಶಿವಸೇನಾ ಮೈತ್ರಿಕೂಟ, ತಮಿಳುನಾಡಿನಲ್ಲಿ ಡಿಎಂಕೆ ಮೈತ್ರಿಕೂಟ, ಜಾರ್ಖಂಡ್ ನಲ್ಲಿ ಜೆಎಎಂ ಜೊತೆ ಕಾಂಗ್ರೆಸ್ ಮೈತ್ರಿ ಕೂಡ ಸರ್ಕಾರ ಮಾಡ್ತಿದೆ. 2024ರ ಲೋಕಸಭಾ ಮುನ್ನ ನಡೆಯುವ ಗುಜರಾತ್, ಹಿಮಾಚಲ ಪ್ರದೇಶ, ಕರ್ನಾಟಕ, ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಭರವಸೆ ಇರೋದು ಕರ್ನಾಟಕ ಚುನಾವಣೆ ಮೇಲೆ ಮಾತ್ರ. ಆದ್ರೆ ಡಿಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ನಡುವಿನ ಶೀತಲ ಸಮರ ಕಾಂಗ್ರೆಸ್ ಹೈಕಮಾಂಡ್ ಗೆ ನಿದ್ದೆಗೆಡಿಸಿದೆ.

 

ಸಿದ್ದರಾಮಯ್ಯ ಬಳಿ ಜನ ಬಲ.. ಡಿಕೆಶಿ ಬಳಿ ಹಣ ಬಲ..!

ಇನ್ನುಕರ್ನಾಟಕದಲ್ಲಿ 2023ಕ್ಕೆ ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ 2024ರ ಲೋಕಸಭಾ ಚುನಾವಣೆಯಲ್ಲಿ ಇಡೀ ದೇಶಕ್ಕೆ ಕರ್ನಾಟಕ ಕಾಂಗ್ರೆಸ್ ಫಂಡ್ ಮಾಡುವ ಸಾಮರ್ಥ್ಯ ಬರುತ್ತೆ. ಆದ್ರೆ, ಡಿಕೆ ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾದ ಮೇಲೆ ಮುಂದೆ ನಾನೇ ಸಿಎಂ ಆಗಬೇಕು ಅನ್ನುವ ಹಂಬಲ ಸಿದ್ದರಾಮಯ್ಯ ಜೊತೆ ಸಂಘರ್ಷಕ್ಕಿಳಿಯುವಂತೆ ಮಾಡಿದೆ. ಇಡೀ ರಾಜ್ಯದ 224 ಕ್ಷೇತ್ರದಲ್ಲೂ ಸಿದ್ದರಾಮಯ್ಯ ಪ್ರಭಾವವನ್ನ ಹೊಂದಿದ್ದಾರೆ. ಆದ್ರೆ, ಡಿಕೆ ಶಿವಕುಮಾರ್ ಹಳೆ ಮೈಸೂರು ಭಾಗ ಬಿಟ್ಟರೆ ಲಕ್ಷ್ಮೀ ಹೆಬ್ಬಾಳ್ಕರ್ ಸೇರಿದಂತೆ ಒಂದಷ್ಟು ಬೆಂಬಲಿಗರ ಕ್ಷೇತ್ರ ಬಿಟ್ಟರೆ ಡಿಕೆಶಿ ಪ್ರಭಾವ ಅಷ್ಟಕಷ್ಟೆ. ಡಿಕೆಶಿ ಬಳಿ ಇಡೀ ರಾಜ್ಯದ 224 ಕ್ಷೇತ್ರದ ಕ್ಯಾಂಡಿಡೇಟ್ ಗೂ 4-5 ಕೋಟಿ ಹಣ ಕೊಡುವ ಮಾಡುವ ಸಾಮರ್ಥ್ಯ ಇದೆ. ಆದರೆ ಮತ ಹಾಕಿಸುವ ಸಾಮರ್ಥ್ಯ ಇಲ್ಲ.. ಶೇಕಡಾ 80% ಕಾಂಗ್ರೆಸ್ ನಾಯಕರು ಕಾರ್ಯಕರ್ತರು ಮುಂದಿನ ಸಿಎಂ ಯಾರಾಗಬೇಕು ಅಂದ್ರೆ ಸಿದ್ದರಾಮಯ್ಯ ಅಂತಾರೆ ಉಳಿದ 20% ಮಂದಿ ಡಿಕೆಶಿ ಬೆನ್ನಿಗೆ ನಿಲ್ತಾರೆ..  ಸಿದ್ದರಾಮಯ್ಯ ನಮ್ಮ ಮುಂದಿನ ಸಿಎಂ ಅಭ್ಯರ್ಥಿ ಅಂತ ಕಾಂಗ್ರೆಸ್ ನಾಯಕರು ಘೋಷಣೆ ಮಾಡಿ ಡಿಕೆಶಿ ಸಹ ಸಿದ್ದರಾಮಯ್ಯ ಬೆನ್ನಿಗೆ ನಿಂತರೆ ಕಾಂಗ್ರೆಸ್ ಅಧಿಕಾರದ ಸಮೀಪ ಬರಬಹುದು. ಅದನ್ನ ಬಿಟ್ಟು ಬೆಳಗ್ಗೆ ಎದ್ದು ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಒಳಗೊಳಗೆ ಕತ್ತಿ ಮಸೆದರೆ ಬಿಜೆಪಿ ಸ್ವತಂತ್ರವಾಗಿ ಅಥವಾ ಜೆಡಿಎಸ್ ಜೊತೆ ಸೇರಿ ಸರ್ಕಾರ ಮಾಡಬಹುದು. ಇದು ಸ್ವತಃ ಕಾಂಗ್ರೆಸ್ ನಾಯಕರಿಗೆ ಗೊತ್ತು. ಆದ್ರೆ, ಕಾಂಗ್ರೆಸ್ ಹೈ ಕಮಾಂಡ್ ಹಣಕಾಸಿನ ವಿಚಾರದಲ್ಲಿ ವೀಕ್ ಆಗಿರುವ ಕಾರಣ ಡಿಕೆಶಿ ಮೇಲೆ ಡಿಪೆಂಡ್ ಆಗಿದೆ. ಹೀಗಾಗಿ ಜನ ಬಲವಿರುವ ಸಿದ್ದರಾಮಯ್ಯ ಬೆನ್ನಿಗೆ ಸ್ಪಷ್ಟವಾಗಿ ನಿಲ್ಲಲು ಸಾಧ್ಯವಾಗ್ತಿಲ್ಲ. ಸಿದ್ದರಾಮಯ್ಯ ಸಹ ನನ್ನದು 2023ಕ್ಕೆ ಕೊನೆಯ ಚುನಾವಣೆ ಅನ್ನುವ ಮೂಲಕ ನನಗೆ ಅವಕಾಶ ಕೊಡಬೇಕು, ನೀವು ಅವಕಾಶ ಕೊಟ್ರೆ ಮುಂದೆ ನಾನು ನಿಮಗೆ ಸಹಕಾರ ಕೊಡ್ತೇನೆ ಅನ್ನೋದನ್ನ ಡಿಕೆಶಿಗೆ ಸಿದ್ದರಾಮಯ್ಯ ಅವಿನೇರವಾಗಿ ಹೇಳಿದಂತಿದೆ.

 

ಒಟ್ಟಾರೆ ಕರ್ನಾಟಕ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ನಾಯಕರಿಗೆ ಸ್ಪಷ್ಟವಾಗಿ ಗೊತ್ತು. ಡಿಕೆ ಶಿವಕುಮಾರ್ ಯಾವುದೇ ಕಾರಣಕ್ಕೂ ಸಿದ್ದರಾಮಯ್ಯಗೆ ಸರಿಸಾಟಿಯಾಗಬಲ್ಲ ನಾಯಕ ಅಲ್ಲ ಅಂತ. ಆದರೂ ಡಿಕೆಶಿಗೆ ಇದನ್ನ ಮನದಟ್ಟು ಮಾಡುವ ವೀಕ್ ಹೈಕಮಾಂಡ್ ಮುಂದೆ ರಾಜ್ಯ ಕಾಂಗ್ರೆಸ್ ನಾಯಕರು ಮೌನವಾಗಿಬಿಟ್ಟಿದ್ದಾರೆ.

ಶಿವಕುಮಾರ್, ಕರ್ನಾಟಕ ಟಿವಿ.ನೆಟ್. ಬೆಂಗಳೂರು

- Advertisement -

Latest Posts

Don't Miss