ಹಲಾಲ್ ಮಾಂಸ ನಿಷೇಧಿಸಿ ಅಭಿಯಾನ ವಿಚಾರ: ಕನ್ನಡಿಗರೆ ದಾರಿ ತಪ್ಪಬೇಡಿ  ಎಂದು ಮಾಜಿ ಸಿಎಂ HDK

ಬೆಂಗಳೂರು: ಮುಸ್ಲೀಂ ಅಂಗಡಿಗಳಿಂದ ಮಾಂಸ ಖರೀದಿಸಬೇಡಿ. ಹಲಾಲ್ ಮಾಂಸ ಖರೀದಿಸದಂತೆ ಅಭಿಯಾನ ಆರಂಭಿಸಿರೋದನ್ನು ಮೊಬೈಲ್ ನಲ್ಲಿ ನೋಡಿದೆ. ಆದ್ರೇ.. ರಾಜ್ಯವನ್ನು ಇದರಿಂದ ಕೆಟ್ಟ ಪರಿಸ್ಥಿತಿಗೆ ತೆಗೆದುಕೊಂಡು ಹೋಗುತ್ತಿದ್ದೀರಿ ಎಂಬುದಾಗಿ ಮಾಜಿ‌ ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ.

ಇಂದು ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಈ ರಾಜ್ಯ ಎಲ್ಲಿಗೆ ತೆಗೆದುಕೊಂಡು ಹೋಗಬೇಕು ಎಂದುಕೊಂಡಿದ್ದೀರಿ. ಹಿಂದು ಯುವಕರಿಗೆ ಕೈ ಮುಗಿದು ಹೇಳುತ್ತೇನೆ ರಾಜ್ಯ ಹಾಳು ಮಾಡಿಕೊಳ್ಳಬೇಡಿ. ಯಾರು ಶಾಶ್ವತ ಅಲ್ಲ. ಕರ್ನಾಟಕ ಶಾಂತಿಯ ತೋಟ ಹಾಳು ಮಾಡಬೇಡಿ. ಇಂತಹ ವ್ಯಕ್ತಿಗಳನ್ನು ಭಹಿಷ್ಕಾರ ಮಾಡಿ ಎಂಬುದಾಗಿ ಹೇಳಿದರು.

ಇವರು ಹೀಗೆ ಮಾಡಲು ಕಾಂಗ್ರೆಸ್ ಕಾರಣ. ಈ ಸರ್ಕಾರ ಬರಲು ಕಾಂಗ್ರೆಸ್ ಕಾರಣ. ನಮ್ಮ ಮನೆ ಬಾಗಿಲಿಗೆ ಬಂದು ಸಿಎಂ ಮಾಡಿದ್ರಿ. ಇಂತಹ ಪರಿಸ್ಥಿತಿ ಉದ್ಭವ ಆಗಲು ಕಾಂಗ್ರೆಸ್ ಒಂದು ಕಡೆ , ಬಿಜೆಪಿ ಒಂದು ಕಡೆ ಕಾರಣ. ಕನ್ನಡಿಗರೆ ದಾರಿ ತಪ್ಪಬೇಡಿ  ಎಂದು ಮಾಜಿ ಸಿಎಂ ಕುಮಾರಸ್ವಾಮಿ ಮನವಿ ಮಾಡಿದರು.

ಹೊಟ್ಟೆಗೆ ತಿನ್ನೊಕೆ ಏನೂ ಕೊಡಬೇಡಿ ಹೊಟ್ಟೆಗೆ ತಣ್ಣಿರ್ ಬಟ್ಟೆ ಹಾಕಿ. ಹಿಂದು ದೇವಸ್ಥಾನಕ್ಕೆ ದಲಿತರನ್ನು ಪೂಜೆ ಮಾಡಲು ಬಿಡುತ್ತೀರ.. ?? ದೇವಸ್ಥಾನ ಕಟ್ಟುವರು ಓಬಿಸಿ , ದಲಿರು, ದೇವಸ್ಥಾನದ ಒಳಗೆ ಕೂತುಕೊಂಡು ಆಸ್ತಿ ಹೊಡೆಯುವವರು ನೀವುಗಳು. ನೀವು ಮಜಾ ಮಾಡುವವರು. ನಾನು ಇಷ್ಟು ಕಠಿಣವಾಗಿ ಯಾವತ್ತೂ ಮಾತಾಡಿಲ್ಲ. ರಾಜ್ಯವನ್ನು ಕೆಟ್ಟ ಪರಿಸ್ಥಿತಿಗೆ ತೆಗೆದುಕೊಂಡು ಹೋಗುತ್ತಿದ್ದೀರಿ ಎಂದರು.

About The Author