Friday, December 27, 2024

Latest Posts

ವೀರೇಶ ಸೊಬರದಮಠರ ಮಹದಾಯಿ ಹೋರಾಟ ವೇದಿಕೆಯಿಂದ ಬೃಹತ್ ಪಾದಯಾತ್ರೆ ಮೂಲಕ ಸಮಾವೇಶ

- Advertisement -

ರೈತ ಸೇನಾ ಕರ್ನಾಟಕ(ರಿ)ರಾಜ್ಯ ಸಮಿತಿ ನರಗುಂದ ಮಹದಾಯಿ ಹೋರಾಟ ವೇದಿಕೆಯಿಂದ ಮಹದಾಯಿ ಯೋಜನೆಯ ಕಾಮಗಾರಿಗೆ ಸರಕಾರ ಶಿಘ್ರವಾಗಿ ಚಾಲನೆಯನ್ನು ಕೊಡಬೇಕು ಹಾಗೂ ರೈತರ ಬೆಳೆಗಳಿಗೆ ಬೆಂಬಲ ಬೆಲೆ ಮತ್ತು ಶಾಶ್ವತ ಖರೀದಿ ಕೇಂದ್ರ ತೆರೆಯುವುದು, ಸನ್ 2018-19 ರ ಹಿಂಗಾರಿ, ಸನ್ 2020 ಮತ್ತು 2021ಸಾಲಿನ ಮುಂಗಾರಿ ಬೆಳೆ ಹಾನಿ ಪರಿಹಾರ ಮತ್ತು ಮುರು ನಾಲ್ಕು ವರ್ಷಗಳ ಬೆಳೆ ಪರಿಹಾರ,ಬಗರ್ ಹುಕುಂ ಸಾಗುವಳಿ ಮಾಡುತ್ತಿರುವ ಜಮೀನಿಗೆ ಹಕ್ಕು ಪತ್ರ ಪೂರೈಸಬೇಕು ,ನೀರಾವರಿ ಇಲಾಖೆಯಲ್ಲಿ ನಡೆದ ಬ್ರಷ್ಟಾಚಾರ (CBI)ಗೆ ವಹಿಸಬೇಕು ನಂತರ ಸಿಂಗಟಾಲೂರಿನ ಎತ ನೀರಾವರಿ ಯೋಜನೆ ಮೂಲಕ ಗದಗ ಜಿಲ್ಲೆಯ ಗ್ರಾಮಗಳಿಗೆ ಕುಡಿಯುವ ನೀರಿನ ದಾಹ ಪರಿಹರಿಸಬೇಕೆಂದು ಹಾಗೂ ರೈತರ ಅನೇಕ ವಿಷಯಗಳ ಬಗ್ಗೆ ಸರಕಾರವನ್ನು ಒತ್ತಾಯಿಸಿ ದಿನಾಂಕ : 28/03/2022 ರಂದು ನರಗುಂದ ಬಾಬಾ ಸಾಹೇಬ್ ರ ಪ್ರತಿಮೆಗೆ ಮಾಲಾರ್ಪಣೆ ಮಾಡಿ,ಹೋರಾಟ ವೇದಿಕೆವರೆಗೂ ಬೃಹತ್ ಪಾದಯಾತ್ರೆ ಮೂಲಕ ಸಮಾವೇಶ ಗೊಂಡಿತು.ನರಗುಂದ ಮಹದಾಯಿ ಹೋರಾಟ ವೇದಿಕೆ ಸಮಿತಿ ಮುಖಂಡತ್ವದಲ್ಲಿ ಪೂಜ್ಯ ಶ್ರೀ ವೀರೇಶ ಸೊಬರದಮಠ ಸ್ವಾಮೀಜಿಗಳು,ಹಾಗೂ ಸಮಸ್ತ ರೈತರ ಹೋರಾಟಗಾರರು ಮತ್ತು ರೈತ ಮಹಿಳೆಯರು ಸಮ್ಮುಖದಲ್ಲಿ ಗದಗ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರು.

ಪೂಜ್ಯ ಶ್ರೀ ವೀರೇಶ ಸೊಬರದಮಠ ಸ್ವಾಮೀಜಿಗಳು
ರಾಜ್ಯಾಧ್ಯಕ್ಷರು ರೈತ ಸೇನಾ ಕರ್ನಾಟಕ (ರಿ) ಮಹದಾಯಿ ಹೋರಾಟ ಸಮಿತಿ ನರಗುಂದ.

- Advertisement -

Latest Posts

Don't Miss