ಗೆಲುವಿನ ಚಿಂತೆಯಲ್ಲಿ ಚೆನ್ನೈ, ಪಂಜಾಬ್

ಮುಂಬೈ: ಗೆಲುವಿನ ಜಪ ಮಾಡುತ್ತಿರುವ ಕಿಂಗ್ಸ್ ಇಲೆವೆನ್ ಪಂಜಾಬ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡ ಇಂದು ಮುಖಾಮುಖಿಯಾಗುತ್ತಿವೆ.


ಭಾನುವಾರ ಬ್ರಾಬೋರ್ನ್ ಮೈದಾನದಲ್ಲಿ ನಡೆಯಲಿರುವ ಪಂದ್ಯದಲ್ಲಿ ಎರಡೂ ತಂಡಗಳಿಗೆ ಗೆಲುವು ಮಹತ್ವದಾಗಿದೆ.
ಕಳೆದ ಪಂದ್ಯದಲ್ಲಿ ಚೆನ್ನೈ ತಂಡ 210 ರನ್ ಗಳಿಸಿದ ಹೊರತಾಗಿಯೂ ಸೋಲು ಕಂಡಿತ್ತು.ಇನ್ನು ಪಂಜಬ್ ತಂಡ ಕೋಲ್ಕತ್ತಾ ವಿರುದ್ಧ ಹೀನಾಯವಾಗಿ ಸೋತಿತ್ತು.

ಐಪಿಎಲ್ ಇತಿಹಸದಲ್ಲಿ ಮೊದಲ ಬಾರಿಗೆ ಚೆನ್ನೈ ಸತತ ಎರಡು ಪಂದ್ಯಗಳನ್ನು ಕೈಚೆಲ್ಲಿದೆ.
ಅಂಕಪಟ್ಟಿಯಲ್ಲಿ ಪಂಜಾಬ್ ತಂಡ 7ನೇ ಸ್ಥಾನ ಪಡೆದರೆ ಚೆನ್ನೈ ತಂಡ 8 ಸ್ಥಾನದಲ್ಲಿದೆ. ಪಂಜಾಬ್ ತನ್ನ ಮೊದಲ ಲೀಗ್ ಪಂದ್ಯದಲ್ಲಿ ಆರ್‍ಸಿಬಿ ವಿರುದ್ಧ ಭರ್ಜರಿ ಗೆಲುವು ದಾಖಲಿಸಿತ್ತು.

ಪಂಜಾಬ್ ತಂಡಕ್ಕೆ ಬ್ಯಾಟ್ಸ್‍ಮನ್‍ಗಳೇ ಬ್ರಹ್ಮಾಸ್ತ್ರ. ಚೆನ್ನೈ ತಂಡದ ಬ್ಯಾಟಿಂಗ್ ಕೂಡ ಬಲಿಷ್ಠವಾಗಿದೆ.
ಓಪನರ್ ಋತುರಾಜ್ ಗಾಯಕ್ವಾಡ್ ಆಬ್ಬರಿಸಲು ನಿಂತರೆ ಚೆನ್ನೈ ತಂಡ 200ರ ಗಡಿ ದಾಟುವಲ್ಲಿ ಸಂಶಯವೇ ಇಲ್ಲ. ಸಿಎಸ್‍ಕೆ ತಂಡದಲ್ಲಿ ಕನ್ನಡಿಗ ರಾಬಿನ್ ಉತ್ತಪ್ಪ ಹಾಗೂ ಅಂಬಾಟಿ ರಾಯ್ಡು ಪ್ರಮುಖ ಪಾತ್ರವಹಿಸಲಿದ್ದಾರೆ.

ಚೆನ್ನೈ ತಂಡಕ್ಕೆ ಬೌಲಿಂಗ್ ಕಳಪೆಯಾಗಿದೆ. ತುಷಾರ್ ದೇಶಪಾಂಡೆ ಹಾಗೂ ಮುಖೇಶ್ ಚೌಧರಿ ಹೇಳಿಕೊಳ್ಳು ರೀತಿಯಲ್ಲಿ ಬೌಲಿಂಗ್ ಮಾಡಿಲ್ಲ.

ಪಂಜಾಬ್ ತಂಡಕ್ಕೆ ಜಾನು ಬೈರ್‍ಸ್ಟೋ ಹೆಚ್ಚುವರಿ ಬ್ಯಾಟ್ಸ್‍ಮನ್ ಆಗಿದ್ದು ತಂಡಕ್ಕೆ ಆನೆ ಬಲ ಬಂದಿದೆ.
ಇನ್ನು ಬೌಲಿಂಗ್ ವಿಭಾಗದಲ್ಲಿ ವೇಗಿ ಕಗಿಸೊ ರಬಾಡ ಆಗಮನ ತಂಡದಲ್ಲಿ ಉತ್ಸಾಹ ಹೆಚ್ಚಾಗಿದೆ. ಸ್ಪಿನ್ನರ್ ರಾಹುಲ್ ಚಾಹರ್ ಕೂಡ ಚೆನ್ನೈ ಆಡುತ್ತಿದ್ದಾರೆ.

ಈ ಎರಡು ತಂಡಗಳೂ ಇದುವರೆಗೂ ಐಪಿಎಲ್‍ನಲ್ಲಿ 26 ಬಾರಿ ಮುಖಾಮುಖಿಯಾಗಿದ್ದು 16 ಬಾರಿ ಚೆನ್ನೈ ಗೆದ್ದರೆ 10 ಬಾರಿ ಪಂಜಾಬ್ ತಂಡ ಗೆದ್ದಿದೆ.

About The Author