ಉರ್ದು ಮಾತನಾಡೋಕೆ ಬರೋಲ್ಲ ಎಂದು ಹೇಳಿದ್ದಕ್ಕೆ ಚಂದ್ರು ಕೊಲೆಯಾಗಿದೆ – ಗೃಹ ಸಚಿವ ಅರಗ ಜ್ಞಾನೇಂದ್ರ

ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಮಲೆನಾಡಿನ ಕೋಮು ಹತ್ಯೆ ಬಳಿಕ, ಮತ್ತೊಂದು ಹತ್ಯೆ ನಡೆದಿದೆ. ಕನ್ನಡ ಬಿಟ್ಟು ಉರ್ದು ಮಾತನಾಡೋದಕ್ಕೆ ಬರೋಲ್ಲ ಎಂದಂತ ಯುವಕನೊಬ್ಬನನ್ನು ಚಾಕುವಿನಿಂದ ಚುಚ್ಚಿ ಕೊಲೆ ಮಾಡಲಾಗಿದೆ.

ಈ ಬಗ್ಗೆ ಬಿಜೆಪಿ ಕಚೇರಿಯಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಮಾತನಾಡಿ, ಬೆಂಗಳೂರಿನ ಜೆಜೆ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಚಂದ್ರು ಹತ್ಯೆ ಆಗಿದೆ. ಮಾಹಿತಿ ತೆಗೆದುಕೊಂಡಿದ್ದೀನಿ. ಉರ್ದು ಮಾತಾಡೋಕೆ ಹೇಳಿದ್ದಾನೆ. ಕನ್ನಡ ಬಿಟ್ಟು ಬೇರೆ ಬಾಷೆ ಬರಲ್ಲ ಅನ್ನೋಕೆ ಚುಚ್ಚಿ ಚುಚ್ಚಿ ಕೊಲೆ ಮಾಡಿದ್ದಾರೆ. ಆ ಹುಡುಗ ದಲಿತ ಹುಡುಗನಾಗಿದ್ದಾನೆ. ಪ್ರಕರಣ ಸಂಬಂಧ, ಪೊಲೀಸರು ಕೆಲವರನ್ನ ಬಂಧಿಸಿದ್ದಾರೆ ಎಂದು ತಿಳಿಸಿದರು.

About The Author