Monday, December 23, 2024

Latest Posts

ಮ್ಯಾಚ್ ಫಿನೀಶರ್ ದಿನೇಶ್ ಕಾರ್ತಿಕ್

- Advertisement -

ಮುಂಬೈ: ಅನುಭವಿ ಆಟಗಾರ ದಿನೇಶ್ ಕಾರ್ತಿಕ್ ಟಿ20 ಆವೃತ್ತಿಯಲ್ಲಿ ಮತ್ತೊಮ್ಮೆ ಮಿಂಚು ಹರಿಸಿದ್ದಾರೆ.
ನಿನ್ನೆ ರಾಜಸ್ಥಾನ ವಿರುದ್ಧದ ಪಂದ್ಯದಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ಮಾಡಿ ಫಿನೀಶರ್‍ರಾಗಿ ಹೊರಹೊಮ್ಮಿದ್ದಾರೆ.

ಈ ತಮಿಳುನಾಡು ಬ್ಯಾಟ್ಸ್‍ಮನ್ 23 ಎಸೆತ ಎದುರಿಸಿ 7 ಬೌಂಡರಿ 1 ಸಿಕ್ಸರ್ ಸಹಿತ ಅಜೇಯ 44 ರನ್ ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.ರಾಜಸ್ಥಾನ ವಿರುದ್ಧ ಆರ್‍ಸಿಬಿ 4 ವಿಕೆಟ್‍ಗಳ ಗೆಲುವು ದಾಖಲಿಸಿತ್ತು.

ಮೊನ್ನೆ ಎರಡನೆ ಪಂದ್ಯದಲ್ಲಿ ಕೋಲ್ಕತ್ತಾ ವಿರುದ್ಧ ತಂಡವನ್ನು ಗೆಲ್ಲಿಸಿಕೊಟ್ಟಿದ್ದ ಡಿಕೆ ಇದೀಗ ತಂಡಕ್ಕೆ ಆಪದ್ಬಾಂಧವನಾಗಿ ತಂಡವನ್ನು ಕಾಪಾಡಿದ್ದಾರೆ.


ನಿನ್ನೆ ರಾಜಸ್ಥಾನ ವಿರುದ್ಧದ ಪಂದ್ಯದಲ್ಲಿ ದಿನೇಶ್ ಕಾರ್ತಿಕ್ ಕ್ರೀಸ್‍ಗೆ ಬಂದಾಗ ಆರ್‍ಸಿಬಿ 4 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿ ಸಿಲುಕಿತ್ತು.
ಕಠಿಣ ಸಂದರ್ಭದಲ್ಲಿ ಡಿಕೆ ಅತ್ಯುತ್ತಮ ಸ್ಟ್ರೋಕ್‍ಗಳನ್ನು ಹೊಡೆದು ತಂಡದವನ್ನ ಗೆಲುವಿನೆಡೆಗೆ ಕೊಂಡೊಯ್ಯುವಲ್ಲಿ ಯಶಸ್ವಿಯಾದರು.

ಕಾರ್ತಿಕ್ ಸಮಯವನ್ನು ವ್ಯರ್ಥ ಮಾಡಲಿಲ್ಲ. ಜೊತೆಗೆ ರಾಜಸ್ಥಾನ ಬೌಲರ್‍ಗಳು ತಮ್ಮ ಮೇಲೆ ಒತ್ತಡ ಹೇರದಂತೆ ನಿಭಾಯಿಸಿದರು. ಗ್ಯಾಪ್‍ಗಳನ್ನ ತುಂಬ ಚೆನ್ನಾಗಿ ಚಾಣಾಕ್ಷತನದಿಂದ ತುಂಬಿದರು. ಇನಿಂಗ್ಸ್‍ವುದಕ್ಕೂ ಚೆಂಡನ್ನ ಸರಿಯಾಗಿ ಬೌಂಡರಿ ಅಟ್ಟಿದರು.

ದಿನೇಶ್ ಕಾರ್ತಿಕ್ ಅವರ ಪ್ರದರ್ಶನ ಕಂಡು ಆರ್‍ಸಿಬಿ ನಾಯಕ ಫಾಫ್ ಡುಪ್ಲೆಸಿಸ್ ಬೆರಗಾಗಿದ್ದಾರೆ. ದಿನೇಶ್ ಕಾರ್ತಿಕ್ ತಂಡದ ಪ್ರಮುಖ ಅಸ್ತ್ರ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಒತ್ತಡವನ್ನು ಸಂಪೂರ್ಣವಾಗಿ ಹೊರಗೆಳೆಯಲು ಒಂದು ಮಹತ್ವದ ಪಾತ್ರ ಬೇಕಾಗುತ್ತದೆ. ಇದನ್ನು ನಾವು ದಿನೇಶ್ ಕಾರ್ತಿಕ್‍ರಲ್ಲಿ ಕಂಡುಕೊಂಡಿದ್ದೇನೆ ಒತ್ತಡ ಸಂದರ್ಭದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಅವರು ನಿಜ್ಕಕೂ ಶಾಂತ ಸ್ವರೂಪದ ವ್ಯಕ್ತಿತ್ವ ಮತ್ತು ತಂಡದ ಪ್ರಮುಖ ಅತ್ರ ಎಂದು ಡುಪ್ಲೆಸಿಸ್ ಹೇಳಿದ್ದಾರೆ.

ನನಗೆ ನಾನು ನ್ಯಾಯ ಒದಗಿಬೇಕು
ಇನ್ನು ದಿನೇಶ್ ಕಾರ್ತಿಕ್ ತಮ್ಮ ಪ್ರರ್ದಶನದ ಕುರಿತು, ನನಗೆ ನ್ಯಾಯ ಒದಗಿಸಲು ನಾನು ಪ್ರಜ್ಞಾಪೂರ್ವಕವಾಗಿ ಪ್ರಯತ್ನ ಮಾಡಿದ್ದೇನೆ.ಕಳೆದ ಕೆಲವು ವರ್ಷಗಳಿಂದ ನಾನು ಉತ್ತಮವಾಗಿ ಕಾರ್ಯನಿರ್ವಹಿಸಬಹುದೆಂದು ಭಾವಿಸಿದ್ದೆ. ನಾನು ಈ ಬಾರಿ ತರಬೇತಿ ಪಡೆದ ರೀತಿ ವಿಭಿನ್ನವಾಗಿದೆ.ನನಗೆ ನಾನೇ ಹೇಳಿಕೊಂಡಿದ್ದೇನೆ ಇನ್ನು ಕೆಲಸ ಮುಗಿದಿಲ್ಲಂತ ನನಗೆ ನನ್ನದೆ ಆದ ಗುರಿ ಇದ್ದು ಅದನ್ನು ಸಾಧಿಸಿಯೇ ತೀರುತ್ತೇನೆ ಎಂದು ಹೇಳಿದ್ದಾರೆ.

ಮಿಸ್ಟರ್ 360 ಸ್ಥಾನ ತುಂಬುತ್ತಿರುವ ಡಿಕೆ
ಸದ್ಯ ಆರ್‍ಸಿಬಿ ತಂಡದಲ್ಲಿ ಡಿಕೆಯದ್ದೆ ಹವಾ ಇದಕ್ಕೆ ಕಾರಣ ಅವರ ಫಿನಿಶಿಂಗ್ ಮತ್ತು ಕೌಶಲ್ಯ. ಈ ಹಿಂದಿನ ಆವೃತ್ತಿಗಳಲ್ಲಿ ಮಿಸ್ಟರ್ 360 ಎಬಿಡಿ ಆರ್‍ಸಿಬಿ ತಂಡದ ಗ್ರೇಟ್ ಫಿನಿಶರ್ ಆಗಿದ್ದರು. ಇದೀಗ ಆ ಸ್ಥಾನವನ್ನು ಡಿಕೆ ತುಂಬುವ ಪ್ರಯತ್ನ ಮಾಡುತ್ತಿದ್ದಾರೆ.

- Advertisement -

Latest Posts

Don't Miss