ಶಿವಮೊಗ್ಗ:ಇಲ್ಲೊಂದು ಅಂಗನವಾಡಿ ಕೇಂದ್ ಮೂಲಭೂತ ಸೌಕರ್ಯಗಳ ಕೊರತೆಯಿಂದಾಗಿ ಮಕ್ಕಳು ಒಲ್ಲದ ಮನಸ್ಸಿನಿಂದ ಬರುವಂತಾಗಿದೆ. ಹಾಗದರೇ ಆ ಅಂಗನವಾಡಿ ಕೇಂದ್ರ ಯಾವುದೇ ಎನ್ನುವ ಬಗ್ಗೆ ಮುಂದೆ ಓದಿ..
ಎಸ್ ಇದು ಇದು ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಹುಣಸೆಕಟ್ಟೆ ಜೆಂಗ್ಷೆನ್ ಗ್ರಾಮದಲ್ಲಿರುವ ಅಂಗನವಾಡಿ ಕೇಂದ್ರ ಈ ಅಂಗನವಾಡಿ ಕೇಂದ್ರದಲ್ಲಿ ಒಟ್ಟು 57 ಮಕ್ಕಳು ಪ್ರತಿದಿನ ಈ ಅಂಗನವಾಡಿ ಕೇಂದ್ರಕ್ಕೆ ಬರುತ್ತಾರೆ ಆದರೆ ಹುಣಸೆಕಟ್ಟೆ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳಿಗೆ ಸರಿಯಾದ ಮೂಲಭೂತ ಸೌಕರ್ಯಗಳ ವ್ಯವಸ್ಥೆ ಇಲ್ಲ ಕುಡಿಯುವ ನೀರಿನ ಟ್ಯಾಂಕ್ ಅಂತು ಹದಗೆಟ್ಟಿ ಹೋಗಿದೆ ಇದರಿಂದಾಗಿ ಅಂಗನವಾಡಿ ಕೇಂದ್ರ ಕ್ಕೆ ಮಕ್ಕಳು ಒಲ್ಲದ ಮನಸ್ಸಿನಿಂದ ಬರುತ್ತಿದ್ದಾರೆ.
ಅಂಗನವಾಡಿ ಕೇಂದ್ರದಲ್ಲಿ ಅಡಿಗೆ ಕೋಣೆಗೆ ಸರಿಯಾದ ವ್ಯವಸ್ಥೆ ಇಲ್ಲಾ..ಅಡಿಗೆ ಕೋಣೆಯ ಕಿಟಕಿಗೆ ಬಾಗಿಲು ಇಲ್ಲದೆ ಮಣ್ಣು ಹಾಗೂ ದೂಳು ಅಡುಗೆ ಕೋಣೆ ಒಳಗೆ ಬರುತ್ತಿದೆ ಅಡುಗೆ ಮನೆಯ ಮೇಲ್ಚಾವಣಿ ಮುರಿದು ಬೀಳಿವ ಸಾಧ್ಯತೆ ಇರುವಂತದ್ದು, ಇನ್ನೂ ಈ ಅಂಗನವಾಡಿ ಕೇಂದ್ರದ ಶೌಚಾಲಯಕ್ಕೆ ಸರಿಯಾದ ಬಾಗಿಲಿನ ವ್ಯವಸ್ಥೆ ಇಲ್ಲದೆ ಶೌಚಾಲಯದ ಬಾಗಿಲಿಗೆ ಬದಲಾಗಿ ಸೀರೆಯನ್ನು ಕಟ್ಟಲಾಗಿದೆ
ಹುಣಸೆಕಟ್ಟೆ ಅಂಗನವಾಡಿ ಕಟ್ಟಡದ ಪಕ್ಕದಲ್ಲಿ ಸರ್ಕಾರಿ ಜಾಗಿ ಇದ್ದು ಈ ಸರ್ಕಾರಿ ಜಾಗವನ್ನು ಪೈರೋಜ್ ಖಾನ್ s/oಅನ್ವರ್ ಸಾಬ್ ಈ ವ್ಯೆಕ್ಯಿ ಅಕ್ರಮವಾಗಿ ಅಂಗನವಾಡಿ ಪಕ್ಕದ ಸರ್ಕಾರಿ ಜಾನವನ್ನು ಒತ್ತಿವರಿ ಮಾಡಿದ್ದಲದೆ ಸರ್ಕಾರಿ ಜಾನದಲ್ಲಿ ಕಾರ್ ನಿಲ್ಲಿಸಲು ಶಡ್ ಕೂಡ ನಿರ್ಮಾಣ ಮಾಡಿದ್ದಾನೆ ಗ್ರಾಮದ ಪಾರೋಜ್ ಖಾನ್ ಇದಕ್ಕೆ ಸಂಬಂಧಿಸಿದಂತೆ ಈಗಾಗಲೇ ಹುಣಸೆಕಟ್ಟೆ ಗ್ರಾಮಪಂಚಯ್ತಿ ಅಭಿವೃದ್ಧಿ ಅಧಿಕಾರಿಗಳ ಗಮನಕ್ಕೆ ಗ್ರಾಮಸ್ಥರು ಹಾಗೂ ಯುವಕರು ತಂದರು ಕೂಡ ಇನ್ನೂ ಯಾವುದೇ ಕ್ರಮ ಕೈಗೊಂಡಿಲ್ಲಾ ಎನ್ನುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ
ಇದು ಹುಣಸೆಕಟ್ಟೆ ಅಂಗನವಾಡಿ ಕೇಂದ್ರದ ಅವ್ಯವಸ್ಥೆ ಅಂತ ಹೇಳಿದ್ರೆ ತಪ್ಪಾಗಲಾರದು, ಇನ್ನಾದರು ಹುಣಸೆಕಟ್ಟೆ ಅಂಗನವಾಡಿ ಕೇಂದ್ರಕ್ಕೆ ಸಂಬಂದಪಟ್ಟ ಅಧಿಕಾರಿಗಳು ಬೇಟಿ ನೀಡುತ್ತಾರ, ಆದಷ್ಟು ಬೇಗ ಪುಟ್ಟು ಮಕ್ಕಳು ವಿದ್ಯ ಕಲಿಯುವ ಅಂಗನವಾಡಿ ಕೇಂದ್ರಕ್ಕೆ ಮೂಲಭೂತ ಸೌಕರ್ಯಗಳ ವ್ಯವಸ್ಥೆಯನ್ನು ಅಧಿಕಾರಿಗಳು ಕೂಡಲೇ ಮಾಡಲಿ ಎಂಬುದೆ ಕರ್ನಾಟಕ ಟಿವಿಯ ಆಶಯ
ವರದಿ: ಅಭಿಜಿತ್, ಕರ್ನಾಟಕ ಟಿವಿ ಶಿವಮೊಗ್ಗ




