Hubli Political News: ಹುಬ್ಬಳ್ಳಿ-ಧಾರವಾಡಕ್ಕೆ ಕೇಂದ್ರ ಸಚಿವ ಪ್ರಲಾದ ಜೋಶಿ ಭಗೀರಥ ಪ್ರಯತ್ನ

Hubli News: ಹುಬ್ಬಳ್ಳಿ : ಅವಳಿ ನಗರಗಳಾದ ಹುಬ್ಬಳ್ಳಿ-ಧಾರವಾಡದಲ್ಲಿ ಪರಿಸರ ಸಂರಕ್ಷಣೆ ಮತ್ತು ಹಸಿರು ಇಂಧನ ಉತ್ಪಾದನಾ ಘಟಕಕ್ಕೆ ಕೇಂದ್ರ ನೂತನ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಲಾದ ಜೋಶಿ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

‘ಕಸದಿಂದ ಇಂಧನ’ (Waste-to-Energy) ಸ್ಥಾವರವು ಯಶಸ್ವಿ ಪ್ರಾಯೋಗಿಕ ಚಾಲನೆ (Trial Run) ಪೂರ್ಣಗೊಳಿಸಿದ್ದು, ಕಸದ ಸಮಸ್ಯೆಗೆ ಶಾಶ್ವತ ಮುಕ್ತಿ ನೀಡಲು ಸಜ್ಜಾಗುತ್ತಿದ್ದು, “ನಗರ ಬೆಳೆದಂತೆ ಕಸದ ಸಮಸ್ಯೆಯೂ ಬೆಳೆಯುತ್ತದೆ. ಆದರೆ ಆ ಕಸವನ್ನೇ ದೇಶದ ಇಂಧನವನ್ನಾಗಿ ಪರಿವರ್ತಿಸುವ ಮಂತ್ರ ಇಲ್ಲಿದೆ.

ಹುಬ್ಬಳ್ಳಿ-ಧಾರವಾಡದ ಸ್ವಚ್ಛತೆಯ ಚಿತ್ರಣವನ್ನೇ ಬದಲಿಸಲಿರುವ ಈ ವಿಶೇಷ ಯೋಜನೆ ಆಗಿದೆ. NTPC ಸಂಸ್ಥೆ ಮೂಲಕ ವಾರಾಣಸಿಯಲ್ಲಿ ದೇಶದ ಮೊದಲ ಕಸ- ಚಾರ್ಕೊಲ್ ಕಾರ್ಖಾನೆ ಕಟ್ಟುವ ತೀರ್ಮಾನ ಆದ ಕೂಡಲೇ, ‘ಎರಡನೆಯ ಕಾರ್ಖಾನೆ ಹುಬ್ಬಳ್ಳಿ-ಧಾರವಾಡದಲ್ಲೇ ಬರಬೇಕು’ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ. ಈ ವೇಳೆ ಹುಬ್ಬಳ್ಳಿ ಧಾರವಾಡ ಮಹಾನಗರ ಕಮೀಷನರ್ ಘಾಳಿ ಮುಂತಾದವರು ಉಪಸ್ಥಿತರಿದ್ದರು.

About The Author