ಮುಂಬೈ:ಕ್ವಿಂಟಾನ್ ಡಿ’ಕಾಕ್ ಆಕರ್ಷಕ ಬ್ಯಾಟಿಂಗ್ ನೆರೆವಿನಿಂದ ಲಕ್ನೊ ಸೂಪರ್ ಜೈಂಟ್ಸ್ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 6 ವಿಕೆಟ್‍ಗಳ ಭರ್ಜರಿ ಗೆಲುವು ದಾಖಲಿಸಿದೆ.
ಇಲ್ಲಿನ ಡಿವೈ ಪಾಟೀಲ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಲಕ್ನೊ ತಂಡ ಫೀಲ್ಡಿಂಗ್ ಆಯ್ದುಕೊಂಡಿತು. ಆರಂಭಿಕರಾಗಿ ಕಣಕ್ಕಿಳಿದ ಪೃಥ್ವಿ ಶಾ ಹಾಗೂ ಡೀವಿಡ್ ವಾರ್ನರ್ ಮೊದಲ ವಿಕೆಟ್‍ಗೆ 67 ರನ್‍ಗಳ ಭರ್ಜರಿ ಅರಂಭ ನೀಡಿದರು. ಪೃಥ್ವಿ ಶಾ 61, ಡೇವಿಡ್ ವಾರ್ನರ್ 4 ರನ್ ಗಳಿಸಿದರು.
ರೊವಮನ್ ಪೊವೆಲ್ 3 ರನ್ ಕಲೆ ಹಾಕಿದರು. 74 ರನ್‍ಗಳಿಗೆ 3 ವಿಕೆಟ್ ಕಳೆದುಕೊಂಡಿದ್ದಾಗ ರಿಷಭ್ ಪಂತ್ (ಅಜೇಯ 39) ಹಾಗೂ ಸರ್ಫಾರಾಜ್ ಖಾನ್ (ಅಜೇಯ 36) ತಂಡದ ಕುಸಿತವನ್ನು ತಡೆದರು. ಡೆಲ್ಲಿ ತಂಡ ನಿಗದಿತ 20 ಓವರ್‍ಗಳಲ್ಲಿ 3 ವಿಕೆಟ್ ನಷ್ಟಕ್ಕೆ 149 ರನ್ ಕಲೆ ಹಾಕಿತು.
150 ರನ್‍ಗಳ ಸಾಧಾರಣ ಮೊತ್ತ ಬೆನ್ನತ್ತಿದ ಲಕ್ನೊ ತಂಡಕ್ಕೆ ನಾಯಕ ಕೆ.ಎಲ್.ರಾಹುಲ್ ಹಾಗೂ ಕ್ವಿಂಟಾನ್ ಡಿ ಕಾಕ್ ಮೊದಲ ವಿಕೆಟ್‍ಗೆ 73 ರನ್‍ಗಳ ಕಾಣಿಕೆ ನೀಡಿದರು.
ಕೆ.ಎಲ್.ರಾಹುಲ್ 24, ಎವಿನ್ ಲಿವೀಸ್ 5, ದೀಪಕ್ ಹೂಡಾ 11, ಕೃಣಾಲ್ ಪಾಂಡ್ಯ ಅಜೇಯ 19, ಆಯುಷ್ ಬಡೋನಿ ಅಜೇಯ 10 ರನ್ ಗಳಿಸಿದರು.
ಲಕ್ನೊ ತಂಡ 19.4 ಓವರ್‍ಗಳಲ್ಲಿ 4 ವಿಕೆಟ್ ನಷ್ಟಕ್ಕೆ 155 ರನ್ ದಾಖಲಿಸಿತು. 80 ರನ್ ಸಿಡಿಸಿದ ಕ್ವಿಂಟಾನ್ ಡಿ ಕಾಕ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.