ಮುಂಬೈ:ಮತ್ತೊಂದು ಐಪಿಎಲ್ನ ಹೈವೋಲ್ಟೇಜ್ ಪಂದ್ಯದಲ್ಲಿ ಇಂದು ಆರ್ಸಿಬಿ ತಂಡದ ಬಲಿಷ್ಠ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಎದುರಿಸುತ್ತಿದೆ.

ಮುಂಬೈನ ವಾಂಖೆಡೆಯಲ್ಲಿ ನಡೆಯಲಿರುವ ಕದನದಲ್ಲಿ ಉಭಯ ತಂಡಗಳು ಗೆಲುವಿಗಾಗಿ ಹೋರಾಡಲಿವೆ. ಫಾಫ್ ಡುಪ್ಲೆಸಿಸ್ ನೇತೃತ್ವದ ಆರ್ಸಿಬಿ ತಂಡ 5 ಪಂದ್ಯಗಳಿಂದ 3ರಲ್ಲಿ ಗೆದ್ದು 2ರಲ್ಲಿ ಸೋತು 6 ಅಂಕ ಸಂಪಾದಿಸಿದೆ. ಡೆಲ್ಲಿ ತಂಡ 4 ಪಂದ್ಯಗಳನ್ನಾಡಿ 2ರಲ್ಲಿ 2ರಲ್ಲಿ ಸೋತು 4 ಅಂಕ ಪಡೆದಿದೆ.
ಈ ಪಂದ್ಯವನ್ನಯ ಎರಡೂ ತಂಡಗಳು ಗೆದ್ದರೆ ಟಾಪ್ 4ಕ್ಕೇ ಏರಲಿವೆ.ಕಳೆದ ಪಂದ್ಯದಲ್ಲಿ ಚೆನ್ನೈ ವಿರುದ್ಧ ಸೋತರೆ ಡೆಲ್ಲಿ ತಂಡ ಕೋಲ್ಕತ್ತಾ ವಿರುದ್ಧ ಗೆಲುವು ಕಂಡಿತ್ತು.
ಆರ್ಸಿಬ ತಂಡದಲ್ಲಿ ಟಾಪ್ 3 ಬ್ಯಾಟರ್ಗಳಾದ ಫಾಫ್ ಡುಪ್ಲೆಸಿಸ್, ಅನೂಜ್ ರಾವತ್ ಹಾಗೂ ವಿರಾಟ್ ಕೊಹ್ಲಿ ದೊಡ್ಡ ಇನ್ನಿಂಗ್ಸ್ ಕಟ್ಟಿಲ್ಲ. ಕಳೆದ ಪಂದ್ಯದಲ್ಲಿ ಗ್ಲೇನ್ ಮ್ಯಾಕ್ಸ್ವೆಲ್, ಶಾಬಾಜ್ ಅಹ್ಮದ್, ಸೂಯಶ್ ಪ್ರಭುದೇಸಾಯಿ ದಿನೇಶ್ ಕಾರ್ತಿಕ್ ಅವರುಗಳಿಂದಾಗಿ ಸ್ಟ್ರೈಕ್ ರೇಟ್ 200ರ ಗಡಿ ದಾಟಿತ್ತು. ಈ ಬ್ಯಾಟರ್ಗಳು ಸಿಡಿದರೆ ತಂಡಕ್ಕೆ ಗೆಲುವು ನಿಶ್ಚಯವಾಗಿದೆ.
ಇನ್ನು ಬೌಲಿಂಗ್ ವಿಭಾಗದಲ್ಲಿ ಕಳೆದ ಪಂದ್ಯದಲ್ಲಿ ವೇಗಿ ಹರ್ಷಲ್ ಪಟೇಲ್ ಅನುಪಸ್ಥಿತಿಯಿಂದಲೇ ತಂಡ ಸೋಲು ಕಂಡಿತ್ತು. ಹರ್ಷಲ ಪಟೇಲ್ ಆಗಮನ ತಂಡಕ್ಕೆ ಆನೆ ಬಲ ಬಂದಿದೆ.
ಮೊಹ್ಮದ್ ಸಿರಾಜ್ ವಿಕೆಟ್ ಪಡೆಯದೇ ದುಬಾರಿ ಬೌಲರ್ ಆಗಿದ್ದಾರೆ. ಆಕಶ್ದೀಪ್ ಕೂಡ ಚೆನ್ನಾಗಿ ಬೌಲಿಂಗ್ ಮಾಡಿಲ್ಲ. ಮೊದಲ ಪಂದ್ಯದಲ್ಲಿ ಮಿಂಚಿದ್ದ ಸ್ಪಿನ್ನರ್ ವನಿಂದು ಹಸರಂಗ ಮ್ಯಾಜಿಕ್ ಏನು ನಡೆಯದಿರುವುದು ತಂಡದ ಬೌಲಿಂಗ್ ಸಪ್ಪೆಯಾಗಿದೆ.


