Saturday, June 21, 2025

Latest Posts

ಚೆನ್ನೈ ರೋಚಕ ಗೆಲುವು: ಮುಂಬೈಗೆ ಸತತ 7ನೇ ಸೋಲು

- Advertisement -

ಮುಂಬೈ: ರೋಚಕ ಕ್ಷಣದಲ್ಲಿ ಎಂ.ಎಸ್.ಧೋನಿ ಚೆನ್ನೈ ತಂಡಕ್ಕೆ ಅಮೋಘ ಗೆಲುವು ತಂದುಕೊಟ್ಟರು. ಸತತ ಸೋಲಿನಿಂದ ಕಂಗೆಟಿದ್ದ ಮುಂಬೈ 7ನೇ ಸೋಲು ಕಂಡಿತು.


ಡಿ.ವೈ.ಪಾಟೀಲ್ ಕ್ರೀಡಾಂಗಣದಲ್ಲಿ ನಡೆದ ರೋಚಕ ಪಂದ್ಯದಲ್ಲಿ ಟಾಸ್ ಗೆದ್ದ ಚೆನ್ನೈ ತಂಡ ಫೀಲ್ಡಿಂಗ್ ಆಯ್ದುಕೊಂಡಿತು. ಮುಂಬೈ ತಂಡಕ್ಕೆ ಚೆನ್ನೈ ತಂಡದ ವೇಗಿ ಮುಖೇಶ್ ಚೌಧರಿ ಆಘಾತದ ಆಘಾತ ಕೊಟ್ಟರು.

ರೋಹಿತ್ ಶರ್ಮಾ, ಇಶನ್ ಕೀಶನ್ ಶೂನ್ಯಕ್ಕೆ ಔಟಾದರು. ಮತ್ತೆ ದಾಳಿಗಿಳಿದ ಮುಖೇಶ್ ಚೌಧರಿ(4) ಡೇವಾಲ್ಡ್ ಬ್ರೇವಿಸ್ ಅವರನ್ನ ಬಲಿ ತೆಗೆದುಕೊಂಡರು. ಸೂರ್ಯ ಕುಮಾರ್ ಯಾದವ್ 32 ಸ್ಯಾಂಟ್ನರ್‍ಗೆ ವಿಕೆಟ್ ಒಪ್ಪಿಸಿದರು.

ಮಧ್ಯಮ ಕ್ರಮಾಂಕದಲ್ಲಿ ತಿಲಕ್ ವರ್ಮಾ ಅಜೇಯ 51, ಹೃತಿಕ್ ಶೋಕೆನ್ (25), ಕಿರಾನ್ ಪೊಲಾರ್ಡ್ 14, ಡೇನಿಯಲ್ ಸ್ಯಾಮ್ಸ್ 5, ಜಯದೇವ್ ಉನಾದ್ಕತ್ ಅಜೇಯ 19 ರನ್ ಗಳಿಸಿದರು.

156 ರನ್ ಬೆನ್ನತ್ತಿದ ಚೆನ್ನೈ ತಂಡ ಆರಂಭದಲ್ಲೆ ಆಘಾತ ಅನುಭವಿಸಿತು. ಋತುರಾಜ್ ಗಾಯಕ್ವಾಡ್ (0), ರಾಬಿನ್ ಉತ್ತಪ್ಪ 30, ಮಿಚೆಲ್ ಸ್ಯಾಂಟ್ನರ್ 11, ಅಂಬಾಟಿ ರಾಯ್ಡು 40, ಶಿವಂ ದುಬೆ 13, ರವೀಂದ್ರ ಜಡೇಜಾ 3, ಡ್ವೇನ್ ಪ್ರಿಟೋರಿಯಸ್ 22, ಧೋನಿ ಅಜೇಯ 28, ಡ್ವೇನ್ ಬ್ರಾವೋ ಅಜೇಯ 1 ರನ್ ಗಳಿಸಿದರು. ಚೆನ್ನೈ ತಂಡ ನಿಗದಿತ 20 ಓವರ್‍ಗಳಲ್ಲಿ 7 ವಿಕೆಟ್ ನಷ್ಟಕ್ಕೆ 156 ರನ್ ಕಲೆ ಹಾಕಿತು.

- Advertisement -

Latest Posts

Don't Miss