ಕಲಬುರ್ಗಿ: 545 ಪೊಲೀಸ್ ಸಬ್ ಇನ್ಸ್ ಪೆಕ್ಟರ್ ನೇಮಕಾತಿ ಅಕ್ರಮ ಕುರಿತಂತೆ ಇಂದು ಮತ್ತೊಂದು ಸ್ಪೋಟಕ ಟ್ವಿಸ್ಟ್ ಪಡೆದುಕೊಂಡಿದೆ. ಮಾಜಿ ಸಚಿವ ಪ್ರಿಯಾಂಕ್ ಖರ್ಗೆಯವರು ಹುದ್ದೆಗಳ ಡೀಲ್ ಆಡಿಯೋವನ್ನು ರಿಲೀಸ್ ಮಾಡಿದ್ದಾರೆ. ಅಲ್ಲದೇ ಮುಂಬರುವ 402 ಪಿಎಸ್ಐ ಹುದ್ದೆಗಳಿಗೂ ಬುಕ್ ಆಗಿರೋದಾಗಿ ಗಂಭೀರ ಆರೋಪ ಮಾಡಿದ್ದಾರೆ.
ಇಂದು ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಪಿಎಸ್ಐ ನೇಮಕಾತಿ ಅಕ್ರಮದ ಡೀಲ್ ಮಾಡಿರೋ ಆಡಿಯೋ ಒಂದನ್ನು ರಿಲೀಸ್ ಮಾಡಿದ್ದಾರೆ. ಈ ಆಡಿಯೋದಲ್ಲಿ 545 ಪಿಎಸ್ಐ ಹುದ್ದೆಯ ನೇಮಕಾತಿ ಪಟ್ಟಿಯಲ್ಲಿ ಅರ್ಹತೆ ಪಡೆದಂತ ಅಭ್ಯರ್ಥಿ ಹಾಗೂ ಡೀಲ್ ಖುದುರಿಸಿದಂತ ವ್ಯಕ್ತಿಯ ಆಡಿಯೋ ಸಂಭಾಷಣೆ ಇದೆ.
ಇನ್ನೂ ಕೇವಲ 545 ಪಿಎಸ್ಐ ನೇಮಕಾತಿಯಲ್ಲಿ ಮಾತ್ರವೇ ಅಕ್ರಮ ನಡೆದಿಲ್ಲ. ಮುಂಬರುವ 402 ಪಿಎಸ್ಐ ಹುದ್ದೆಗಳ ಅಧಿಸೂಚನೆಗೂ ಈಗಲೇ ಡೀಲ್ ಮಾಡಲಾಗಿದೆ. ಆ ಹುದ್ದೆಗಳಿಗೂ ಬುಕ್ ಮಾಡಿಕೊಳ್ಳಲಾಗಿದೆ. ಆ ಬಗ್ಗೆಯೂ ತನಿಖೆ ನಡೆಸುವಂತೆ ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಆಗ್ರಹಿಸಿದ್ದಾರೆ.




