ಬೆಂಗಳೂರು: ಕುಮಾರಸ್ವಾಮಿಯ ಆರೋಪ ಎಲ್ಲಾ ಸುಳ್ಳು. ಈ ಹಿಂದೆ ಸಮ್ಮಿಶ್ರ ಸರ್ಕಾರ ಇದ್ದಾಗ ಯಾಕೆ ನೈಸ್ ರಸ್ತೆ ಯೋಜನೆ ಬರ್ಕಾಸ್ತು ಮಾಡಲಿಲ್ಲ. ನಮ್ಮದೇ ಭೂಮಿಯನ್ನ ನೈಸ್ ಯೋಜನೆಗೆ ಕೊಟ್ಟು ಹೊಡೆಸಿಕೊಳ್ಳುವಂತಾಗಿದೆ. ಸರ್ಕಾರದ ಭೂಮಿಯನ್ನ ಕೊಟ್ಟು ನೈಸ್ ಸಂಸ್ಥೆಯಿಂದ ಅನುಭವಿಸುವಂತಾಗಿದೆ. ನೈಸ್ ಆದೇಶದ ಕಾರಣ ಸರ್ಕಾರ ನೂರು ಕೋಟಿ ಕೊಡುವಂತಾಗಿದೆ. ಮೆಟ್ರೋ ಯೋಜನೆ ಕೆಲಸಕ್ಕೂ ಅಡ್ಡಿಯಾಗುತ್ತಿದೆ. ನೈಸ್ ಯೋಜನೆ ಪಿತಾಮಹ ಯಾರು ಎಂಬುದಾಗಿ ಹೇಳುವ ಮೂಲಕ ದಳಪತಿಗೆ ಸಚಿವ ಆರ್ ಅಶೋಕ್ ಟಾಂಗ್ ನೀಡಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ನೈಸ್ ಯೋಜನೆಯ ಪಿತಾಮಹ ಯಾರು ? ಈ ಯೋಜನೆಗೆ ಅನುಮತಿ ನೀಡಿದ್ದಾಗ ಜನತಾ ದಳ ಸರ್ಕಾರ ಅಧಿಕಾರದಲ್ಲಿ ಇತ್ತು. ಜೆ.ಹೆಚ್ ಪಟೇಲ್ ಸಿಎಂ ಆಗಿದ್ದಾಗ ಯೋಜನೆಗೆ ಅನುಮತಿ ನೀಡಿದ್ರು. ನಂತರ ಬಂದ ಕಾಂಗ್ರೆಸ್ ಸರ್ಕಾರ ಒಪ್ಪಂದ ಮಾಡಿತ್ತು. ಇದರಲ್ಲಿ ಕಾಂಗ್ರೆಸ್, ಜೆಡಿಎಸ್ ಪಾಲಿದೆ ಹೊರತು ಬಿಜೆಪಿಯದ್ದು ಅಲ್ಲ.
ಬಿಜೆಪಿಯ ಯಾವುದೇ ಪಾತ್ರ ಇಲ್ಲ ಎಂದರು.
ಇದರ ಮೂಲ ಪುರುಷರು ಕಾಂಗ್ರೆಸ್, ಜೆಡಿಎಸ್ ಆಗಿದೆ. ಇವರಿಬ್ಬರ ಮ್ಯಾಚ್ ಫಿಕ್ಸಿಂಗ್ ನಿಂದ ನೈಸ್ ಯೋಜನೆ ಬಂದಿದೆ. ಕುಮಾರಸ್ವಾಮಿಯ ಆರೋಪ ಎಲ್ಲಾ ಸುಳ್ಳು. ಈ ಹಿಂದೆ ಸಮ್ಮಿಶ್ರ ಸರ್ಕಾರ ಇದ್ದಾಗ ಯಾಕೆ ಯೋಜನೆ ಬರ್ಕಾಸ್ತು ಮಾಡಲಿಲ್ಲ. ನಮ್ಮದೇ ಭೂಮಿಯನ್ನ ನೈಸ್ ಯೋಜನೆಗೆ ಕೊಟ್ಟು ಹೊಡೆಸಿಕೊಳ್ಳುವಂತಾಗಿದೆ ಎಂದು ವಾಗ್ದಾಳಿ ನಡೆಸಿದರು.




