ಪೋಸ್ಟರ್ ಮೂಲಕಾನೇ ಕುತೂಹಲ ಹುಟ್ಟಿಸಿದ ಚಿತ್ರತಂಡ..!
ಟಾಲಿವುಡ್ ಚಿತ್ರರಂಗದ ಬಹುನಿರೀಕ್ಷಿತ ಸಿನಿಮಾಗಳಲ್ಲೊಂದು “ಸರ್ಕಾರು ವಾರಿ ಪಾಟ”. ಸೂಪರ್ ಸ್ಟಾರ್ ಪ್ರಿನ್ಸ್ ಮಹೇಶ್ ಬಾಬು ಹಾಗೂ ಕೀರ್ತಿ ಸುರೇಶ್ ನಟಿಸಿರೋ ಈ ಸಿನಿಮಾದ ಟೀಸರ್ ಹಾಗೂ ಸಾಂಗ್ಸ್ ಈಗಾಗಲೇ ಸಾಕಷ್ಟು ಸೌಂಡ್ ಮಾಡ್ತಿದೆ. ಜೊತೆಗೆ ಮಹೇಶ್ ಬಾಬು ಹುಟ್ಟು ಹಬ್ಬದ ದಿನ ರಿಲೀಸಾಗಿದ್ದ ಬರ್ತಡೇ ಬ್ಲಾಸ್ಟರ್ ಟೀಸರ್ ಸಹ ಅಭಿಮಾನಿಗಳಲ್ಲಿ ಸಾಕಷ್ಟು ನಿರೀಕ್ಷೆಯನ್ನ ಹುಟ್ಟುಹಾಕಿದೆ.
ಇದೀಗ ಪ್ರಿನ್ಸ್ ಫ್ಯಾನ್ಸ್ ಗೆ ಚಿತ್ರತಂಡ ಮತ್ತೊಂದು ಸಿಹಿಸುದ್ದಿಯನ್ನ ಕೊಟ್ಟಿದೆ. ನಟ ಮಹೇಶ್ಬಾಬುಗೆ ವಿಶ್ವದ ಮೂಲೆ ಮೂಲೆಗಳಲ್ಲೂ ಅಭಿಮಾನಿಗಳಿದ್ದು, ಪ್ರತಿಯೊಬ್ಬರೂ ಸರ್ಕಾರು ವಾರಿ ಪಾಟ ಸಿನಿಮಾ ರಿಲೀಸ್ ದಿನಕ್ಕಾಗಿಯೇ ಕಾಯ್ತಿದ್ದಾರೆ. ಇದೀಗ ಪ್ರಿನ್ಸ್ ಮಾಸ್ ಪೋಸ್ಟರ್ವೊಂದನ್ನ ರಿಲೀಸ್ ಮಾಡಿರೋ ಚಿತ್ರತಂಡ ರಿಲೀಸ್ ಡೇಟನ್ನೂ ಸಹ ಅನೌನ್ಸ್ ಮಾಡಿದೆ. ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಈ ಹೊತ್ತಿಗಾಗಲೇ ಸಿನಿಮಾ ತೆರೆಕಾಣಬೇಕಿತ್ತು, ಕರೋನಾವಳಿಯಿಂದ ಸಿನಿಮಾ ರಿಲೀಸ್ ಡೇಟ್ ಮತ್ತೆ ಮತ್ತೆ ಮುಂದೂಡಲಾಗ್ತಿತ್ತು.
ಇದೀಗ ಕೊನೆಗೂ ಪ್ರಿನ್ಸ್ ಅಪ್ಕಮಿಂಗ್ ಸಿನಿಮಾ ರಿಲೀಸ್ಗೆ ಸಜ್ಜಾಗಿದ್ದು, ಮೇ-12 ರಂದು ವರ್ಲ್ಡ್ ವೈಡ್ ತೆರೆಕಾಣಲಿದೆ. ಜೊತೆಗೆ ಈ ಸಿನಿಮಾದ ಟ್ರೈಲರ್ ಬಿಡುಗಡೆ ಬಗ್ಗೆಯೂ ತಿಳಿಸಿರೋ ಚಿತ್ರತಂಡ, ಮೇ-2 ರಂದು ಬಿಡುಗಡೆ ಮಾಡೋದಾಗಿ ಪೋಸ್ಟರ್ ರಿಲೀಸ್ ಮಾಡಿದ್ದಾರೆ. ಪರಶುರಾಮ್ ಪೆಟ್ಲಾ ಈ ಚಿತ್ರಕ್ಕೆ ಡೈರೆಕ್ಷನ್ ಹೇಳಿದ್ದು, ಎಸ್,ಎಸ್ ಥಮನ್ ಅದ್ಭುತ ಮ್ಯೂಸಿಕ್ ನೀಡಿದ್ದಾರೆ.
ನಳಿನಾಕ್ಷಿ, ಕರ್ನಾಟಕ ಟಿವಿ