ಮುಂಬೈ: ಐಪಿಎಲ್ ನ 47ನೇ ಪಂದ್ಯದಲ್ಲಿ ಇಂದು ರಾಜಸ್ಥಾನ ರಾಯಲ್ಸ್ ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಮುಖಾಮುಖಿಯಾಗುತ್ತಿವೆ.
ಇಲ್ಲಿನ ವಾಂಖೆಡೆ ಮೈದಾನದಲ್ಲಿ ನಡೆಯಲಿರುವ ಪಂದ್ಯದಲ್ಲಿ ಕೋಲ್ಕತ್ತಾ ತಂಡ ಗೆಲ್ಲಲ್ಲೇಬೇಕಾದ ಒತ್ತಡವನ್ನು ಎದುರಿಸುತ್ತಿದೆ.
ಶ್ರೇಯಸ್ ಅಯ್ಯರ್ ನೇತೃತ್ವದ ಕೋಲ್ಕತ್ತಾ ತಂಡ 9 ಪಂದ್ಯಗಳಿಂದ 3ಲ್ಲಿ ಗೆದ್ದು 6ರಲ್ಲಿ ಸೋತು 6 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ 8ನೇ ಸ್ಥಾನದಲ್ಲಿದೆ. ಇನ್ನು ಸಂಜು ಸ್ಯಾಮ್ಸನ್ ನೇತೃಥ್ವದ ರಾಜಸ್ಥಾನ 9 ಪಂದ್ಯಗಳಿಂದ 6ರಲ್ಲಿ ಗೆದ್ದು 3ರಲ್ಲಿ ಸೋತು 12 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದೆ.
ಬ್ಯಾಟಿಂಗ್ ಕ್ರಮಾಂಕದಲ್ಲಿ ಬದಲಾವಣೆ ಮಾಡಿದ ಪರಿಣಾಮ ಕೋಲ್ಕತ್ತಾ ತಂಡ ಈ ಬಾರಿಯ ಐಪಿಎಲ್ನಲ್ಲಿ ಹೀನಾಯ ಪ್ರದರ್ಶನ ನೀಡಲು ಕಾರಣವಾಗಿದೆ. ಓಪನರ್ ವೆಂಕಟೇಶ್ ಅಯ್ಯರ್ ಕಳಪೆ ಬ್ಯಾಟಿಂಗ್ ಇಡೀ ತಂಡದ ಪ್ರದರ್ಶನದ ಮೇಲೆ ಪೆಟ್ಟು ಬಿದ್ದಿದೆ.
ಅಗ್ರ ಕ್ರಮಾಂಕದಲ್ಲಿ ಎಲ್ಲಾ ರೀತಿಯಿಂದಲೂ ಬದಲಾವಣೆ ಮಾಡಿದರೂ ಪ್ರಯೋಜನವಾಗಿಲ್ಲ. ಇದರ ಪರಿಣಾಮ ಕೆಕೆಆರ್ ಸತತ ಐದನೆ ಪಂದ್ಯವನ್ನು ಕೈಚೆಲ್ಲುವಂತಾಗಿದೆ.
ನಾಯಕ ಶ್ರೇಯಸ್ ಅಯ್ಯರ್ 9 ಪಂದ್ಯಗಳಿಂದ 290 ರನ್ ಗಳಿಸಿ 32.11 ಸರಾಸರಿ ಹೊಂದಿದ್ದಾರೆ. ಆದರೆ ಇವರಿಗೆ ತಂಡದ ಇತರೆ ಬ್ಯಾಟ್ಸಮನ್ಗಳು ಸಾಥ್ ಕೊಡುತ್ತಿಲ್ಲ.
ಮಧ್ಯಮ ಕ್ರಮಾಂದಲ್ಲಿ ನಿತೀಶ್ ರಾಣಾ ಹೇಳಿಕೊಳ್ಳವಂತಹ ಬ್ಯಾಟಿಂಗ್ ಮಾಡಿಲ್ಲ. ಕೋಲ್ಕತ್ತಾ ತಂಡ ಇನ್ನಷ್ಟೆ ಅತ್ಯುತ್ತಮ ಆಡುವ ಹನ್ನೊಂದರ ಬಳಗವನ್ನು ಆಡಿಸಬೇಕಿದೆ.
ಶ್ರೇಯಸ್ ಅಯ್ಯರ್ ಉಳಿದ ಐದು ಪಂದ್ಯಗಳಲ್ಲಿ ಚೆನ್ನಾಗಿ ಆಡುವಂತೆ ತಂಡದ ಆಟಗಾರರಿಗೆ ಕರೆ ನೀಡಿದ್ದಾರೆ. ಈ ಮೂಲಕ ಕಳೆದುಕೊಂಡದನ್ನು ತಂಡಕ್ಕೆ ಹಾಗೂ ಫ್ರಾಂಚೈಸಿಗೆ ಏನಾದರೂ ಕೊಡೋಣ ಎಂದು ಹೇಳಿದ್ದಾರೆ.
ಇನ್ನು ಬೌಲಿಂಗ್ ವಿಭಾಗದಲ್ಲಿ ವೇಗಿ ಉಮೇಶ್ ಯಾದವ್, ಟಿಮ್ ಸೌಥಿ ಹಾಗೂ ಸುನಿಲ್ ನರೈನ್ ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಇಂದಿನ ಪಂದ್ಯದಲ್ಲಿ ಜೋಸ್ ಬಟ್ಲರ್ ಅವರನ್ನು ಕಟ್ಟಿಹಾಕೋದು ದೊಡ್ಡ ಸವಾಲಾಗಿದೆ.
ಇನ್ನು ರಾಜಸ್ಥಾನ ತಂಡ ಸ್ಟಾರ್ ಆಟಗಾರ ಜೋಸ್ ಬಟ್ಲರ್ ಅವರನ್ನು ನೆಚ್ಚಿಕೊಂಡಿದೆ. ನಾಯಕ ಸಂಜು ಸ್ಯಾಮ್ಸನ್ ಬ್ಯಾಟಿಂಗ್ ಜವಾಬ್ದಾರಿ ಹೊರಬೇಕಿದೆ.
ಬೌಲಿಂಗ್ ವಿಭಾಗದಲ್ಲಿ ಯಜ್ವಿಂದರ್ ಚಾಹಲ್ 19 ವಿಕೆಟ್ ಪಡೆದು ಮಿಂಚಿದ್ದಾರೆ. ಟ್ರೆಂಟ್ ಬೌಲ್ಟ್, ಆರ್.ಅಶ್ವಿನ್ ಪ್ರಸಿದ್ಧ ಕೃಷ್ಣ ತಂಡದ ಟ್ರಂಪ್ ಕಾರ್ಡ್ ಗಳಾಗಿದ್ದಾರೆ.
ರಾಜಸ್ಥಾನ: ಜೋಸ್ ಬಟ್ಲರ್, ದೇವದತ್ ಪಡಿಕಲ್, ಸಂಜು ಸ್ಯಾಮ್ಸನ್(ನಾಯಕ ವಿಕೆಟ್ ಕೀಪರ್), ಡೆರಿಲ್ ಮಿಚೆಲ್,ಶಿಮ್ರಾನ್ ಹೆಟ್ಮಯರ್, ರಿಯಾನ್ ಪರಾಗ್, ಆರ್.ಅಶ್ವಿನ್.ಟ್ರೆಂಟ್ ಬೌಲ್ಟ್, ಪ್ರಸಿದ್ದ ಕೃಷ್ಣ, ಯಜ್ವಿಂದರ್ ಚಾಹಲ್, ಟ್ರೆಂಟ್ ಬೌಲ್ಟ್.
ಕೋಲ್ಕತ್ತಾ : ಆ್ಯರಾನ್ ಫಿಂಚ್, ವೆಂಕಟೇಶ್ ಅಯ್ಯರ್, ಶ್ರೇಯಸ್ ಅಯ್ಯರ್, ಬಾಬಾ ಇಂದ್ರಜಿತ್, ಸುನಿಲ್ ನರೈನ್, ನಿತೀಶ್ ರಾಣಾ, ಆ್ಯಂಡ್ರೆ ರಸೆಲ್, ಇಂಕು ಸಿಂಗ್, ಉಮೇಶ್ ಯಾದವ್, ಟಿಮ್ ಸೌಥಿ, ಹರ್ಷಿತ್ ರಾಣಾ