ಐಪಿಎಲ್ ಫೈನಲ್ ನಡೆಯೋದು ಎಲ್ಲಿ ಗೊತ್ತಾ ? 

ಮುಂಬೈ: ಪ್ರಸಕ್ತ ಐಪಿಎಲ್ನ ಪ್ಲೇ ಆಫ್ ಪಂದ್ಯಗಳ ದಿನಾಂಕಗಳನ್ನು  ಬಿಸಿಸಿಐ ಪ್ರಕಟಿಸಿದೆ.

ಅದನ್ನು ಆಯೋಜಿಸುವ ಸ್ಥಳಗಳನ್ನು ಪ್ರಕಟಿಸಿದೆ. ಪ್ಲೇ ಆಫ್ ಗಾಗಿ 4 ದಿನಗಳನ್ನು ನಿಗದಿ ಮಾಡಿದೆ. ಇದರಲ್ಲಿ ಕೋಲ್ಕತ್ತಾ ಹಾಗೂ ಅಹ್ಮದಾಬಾದ್ ನಲ್ಲಿ  4 ಪಂದ್ಯಗಳು ಆಡಲಾಗುತ್ತದೆ.

ಮೊದಲ ಕ್ವಾಲಿಫೈಯರ್ ಮತ್ತು ಎಲಿಮಿನೇಟರ್ ಪಂದ್ಯಗಳು ಕೋಲ್ಕತ್ತಾದಲ್ಲಿ ನಡೆಯಲಿದೆ. ಎರಡನೆ ಕ್ವಾಲಿಫೈಯರ್ ಹಾಗೂ ಫೈನಲ್ ಪಂದ್ಯ ಅಹ್ಮದಾಬಾದ್ ನಲ್ಲಿ ನಡೆಯಲಿದೆ.

ಪ್ಲೇ ಆಫ್ ಗೂ ಮೊದಲು ಕ್ವಾಲಿಫೈಯರ್ ಮೇ 24ರಂದು ಕೋಲ್ಕತ್ತಾದ ಈಡನ್ ಗಾರ್ಡನ್ ನಲ್ಲಿ ನಡೆಯಲಿದೆ.  ಇದರಲ್ಲಿ ಗೆದ್ದ ತಂಡ ನೇರವಾಗಿ ಫೈನಲ್ ಪ್ರವೇಶಿಸಲಿದೆ.

ಮೇ 25ರಂದು ಎಲಿಮಿನೇಟರ್ ಪಂದ್ಯ ನಡೆಯಲಿದೆ. ಈ ಪಂದ್ಯ ಕೂಡ ಈಡನ್ ಅಂಗಳದಲ್ಲಿ ನಡೆಯಲಿದೆ. ಇದರಲ್ಲಿ ಗೆದ್ದ ಎರಡನೆ ಕ್ವಾಲಿಫೈಯರ್ಗೆ ಪ್ರವೇಶ ಪಡೆಯಲಿದೆ.

ಎರಡನೆ ಕ್ವಾಲಿಫೈಯರ್ ನಲ್ಲಿ ಎಲಿಮಿನೇಟರ್ ಪಂದ್ಯ ಗೆದ್ದ ತಂಡವು ಮೊದಲ ಕ್ವಾಲಿಫೈಯರ್ ನಲ್ಲಿ ಸೋತ ತಂಡವನ್ನು ಎದುರಿಸಲಿದೆ. ಎರಡನೆ ಕ್ವಾಲಿಫೈಯರ್ ಪಂದ್ಯ ಮೇ 27ರಂದು ಅಹ್ಮದಾಬಾದ್ ನಲ್ಲಿ ನಡೆಯಲಿದೆ.

ಇದರಲ್ಲಿ ಗೆದ್ದ ತಂಡ ಫೈನಲ್ ಪ್ರವೇಶಿಸಲಿದೆ. ಮೇ29 ರಂದು ಫೈನಲ್ ಪಂದ್ಯ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದೆ.

ವಿಶೇಷವೆಂದರೆ ಪ್ಲೇ ಆಫ್ ಹಾಗೂ ಫೈನಲ್ ಪಂದ್ಯಗಳಿಗೆ ಶೇ.100ರಷ್ಟು ವೀಕ್ಷಕರಿಗೆ ಅವಕಾಶ ನೀಡಲಾಗಿದೆ.

 

 

 

About The Author