Thursday, January 23, 2025

Latest Posts

ಇಂದು ಡೆಲ್ಲಿ, ಸನ್ ರೈಸರ್ಸ್ ಮುಖಾಮುಖಿ

- Advertisement -

ಮುಂಬೈ: ಐಪಿಎಲ್ನ 50ನೇ ಪಂದ್ಯದಲ್ಲಿ  ಡೆಲ್ಲಿ ಕ್ಯಾಪಿಟಲ್ಸ್ ತಂಡ ಬಲಿಷ್ಠ ಸನ್ ರೈಸರ್ಸ್ ತಂಡವನ್ನು ಎದುರಿಸಲಿದೆ.

ಬ್ರಾಬೋರ್ನ್ ಮೈದಾನದಲ್ಲಿ ನಡೆಯುವ ಪಂದ್ಯದಲ್ಲಿ ಡೆಲ್ಲಿ ಹಾಗೂ ಸನ್ ರೈಸರ್ಸ್ಗೆ ಅಂಕ ಹೆಚ್ಚಿಸಿಕೊಳ್ಳಲು ಈ ಪಂದ್ಯ ಸಹಕಾರಿಯಾಗಲಿದೆ.

ಈ ಋತುವಿನಲ್ಲಿ ಡೆಲ್ಲಿ ಹಾಗೂ ಸನ್ ರೈಸರ್ಸ್ ಮುಖಾಮುಖಿಯಾಗಿಲ್ಲ. ಅಂಕಪಟ್ಟಿಯಲ್ಲಿ ಡೆಲ್ಲಿ ತಂಡ 7ನೇ ಸ್ಥಾನದಲ್ಲಿದ್ದರೆ ಸನ್ ರೈಸರ್ಸ್ ಐದನೆ ಸ್ಥಾನದಲ್ಲಿದೆ. ಉಭಯ ತಂಡಗಳ ನಡುವೆ ಎರಡು ಅಂಕಗಳ ವ್ಯತ್ಯಾಸವಿದೆ. ಸನ್ ರೈಸರ್ಸ್ ತಂಡದ ನೆಟ್ ರನ್ ರೇಟ್ ಚೆನ್ನಾಗಿದೆ.  ಡೆಲ್ಲಿ ತಂಡದ ರನ್ ರೇಟ್ ಚೆನ್ನಾಗಿಲ್ಲ.

ಡೆಲ್ಲಿ ತಂಡ 9 ಪಂದ್ಯಗಳಿಂದ 4ರಲ್ಲಿ ಗೆದ್ದು 5ರಲ್ಲಿ ಸೋತು 8 ಅಂಕ ಪಡೆದಿದೆ. ಸನ್ ರೈಸರ್ಸ್ 9 ಪಂದ್ಯಗಳಲ್ಲಿ 5ರಲ್ಲಿ ಗೆದ್ದು 4ರಲ್ಲಿ ಸೋತು 10 ಅಂಕ ಪಡೆದಿದೆ.

ಡೆಲ್ಲಿ ತಂಡದ ಆರಂಭಿಕರು ಈ ಸೀಸನ್ ನಲ್ಲಿ ಒಳ್ಳೆಯ ಆರಂಭ ಕೊಟ್ಟಿದ್ದಾರೆ. ಆದರೆ ಮೊನ್ನೆ ಲಕ್ನೊ ವಿರುದ್ಧ ವಿಫಲರಾಗಿದ್ದಾರೆ.

ಮಧ್ಯಮ ಕ್ರಮಾಂಕದಲ್ಲಿ ಪಂತ್ 44 ರನ್ ಗಳಿಸಿದರು. ಮಧ್ಯಮ ಕ್ರಮಾಂಕದ ಬ್ಯಾಟರ್ಗಳು ಎಡವಿದರು.

ಡೆಲ್ಲಿ ಬ್ಯಾಟರ್ಗಳು ಸಕಾರಾತ್ಮಕವಾಗಿರದಿದ್ದರೂ ಪಂತ್ ಚೆನ್ನಾಗಿ ಆಡುತ್ತಿದ್ದಾರೆ.  ಮಿಚೆಲ್ ಮಾರ್ಷ್, ರೊವಮನ್ ಪೊವೆಲ್, ಅಕ್ಷರ್ ಪಟೇಲ್, ಒಳ್ಳೆಯ ಕಾಣಿಕೆ ನೀಡುತ್ತಿದ್ದಾರೆ. ಶಾರ್ದೂಲ್ ಠಾಕೂರ್ ಬೌಲಿಂಗ್ನಲ್ಲಿ ಮಿಂಚಿದ್ದಾರೆ.

ಸನ್ರೈಸರ್ಸ್ ನಾಯಕ ವಿಲಿಯಮ್ಸನ್ ಸಿಎಸ್ಕೆ ವಿರುದ್ಧ 47 ರನ್ ಹೊಡೆದಿದ್ದರು. ಒಂದರ ಹಿಂದೆ ಒಂದು ಪಂದ್ಯವನ್ನು ಕೈಚೆಲ್ಲುತ್ತಿರುವ ಬಗ್ಗೆ ಸನ್ರೈಸರ್ಸ್ಗೆ ಕಳವಳವಾಗಿದೆ. ಮೊನ್ನೆ 195 ರನ್ ಪೇರಿಸುವಲ್ಲಿ ಸನ್ ರೈಸರಸ್ ವಿಫಲವಾಯಿತು. ನಂತರ ಇನ್ನೊಂದು ಪಂದ್ಯದಲ್ಲಿ 203 ರನ್ ಚೇಸ್ ಮಾಡುವಲ್ಲಿ ವಿಫಲವಾಯಿತು.

ಸನರೈಸರ್ಸ್ ತಂಡಕ್ಕೆ ಗಾಯದ ಸಮಸ್ಯೆ ದೊಡ್ಡ ತಲೆ ನೋವಾಗಿದೆ. ಕಳೆದ ಪಂದ್ಯದಲ್ಲಿ ಗಾಯಗೊಂಡಿದ್ದ ವಾಷಿಂಗ್ಟನ್ ಸುಂದರ್ ಬೌಲಿಂಗ್ ಮಾಡಿರಲಿಲ್ಲ. ವೇಗಿ ನಟರಾಜನ್ ಕೂಡ ಗಾಯಗೊಂಡಿದ್ದ  ಈ ಪಂದ್ಯಕ್ಕೆ ಲಭ್ಯರಾಗುತ್ತಾರಾ ಅನ್ನೋದನ್ನ ಕಾದು ನೋಡಬೇಕಿದೆ.

ಸಂಭಾವ್ಯ ಪ್ಲೇಯಿಂಗ್ ಇಲೆವೆನ್

ಡೆಲ್ಲಿ ತಂಡ: ಪೃಥ್ವಿ ಶಾ, ಡೇವಿಡ್ ವಾರ್ನರ್, ಮಿಚೆಲ್ ಮಾರ್ಷ್, ರಿಷಭ್ ಪಂತ್ (ನಾಯಕ,ವಿಕೆಟ್ ಕೀಪರ್), ಲಲಿತ್ ಯಾದವ್, ರೊವಮನ್ ಪೊವೆಲ್, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ಕುಲ್ದೀಪ್ ಯಾದವ್, ಮುಸ್ತಾಫಿಜುರ್ ರೆಹಮಾನ್, ಚೇತನ್ ಸಾಕಾರಿಯಾ.

ಸನ್ ರೈಸರ್ಸ್ ತಂಡ: ಕೇನ್ ವಿಲಿಯಮ್ಸನ್ (ನಾಯಕ), ಅಭಿಷೇಕ್ ಶರ್ಮಾ, ರಾಹುಲ್ ತ್ರಿಪಾಠಿ, ಏಡಿನ್ ಮಾರ್ಕರಾಮ್, ನಿಕೊಲೊಸ್ ಪೂರಾನ್ (ವಿಕೆಟ್ ಕೀಪರ್),ಶಶಾಂಕ್ ಮನೋಹರ್, ವಾಷಿಂಗ್ಟನ್ ಸುಂದರ್, ಭುವನೇಶ್ವರ್ ಕುಮಾರ್, ಮಾರ್ಕೊ ಹೆನಸನ್, ಉಮ್ರಾನ್ ಮಲ್ಲಿಕ್, ಟಿ ನಟರಾಜನ್.  

 

 

 

 

- Advertisement -

Latest Posts

Don't Miss